ನವದೆಹಲಿ: ಡೀಸೆಲ್ ಎಂಜಿನ್ ವಾಹನಗಳ (diesel engine vehicles) ಮೇಲೆ ಕೇಂದ್ರ ಸರ್ಕಾರವು ಶೇ.10ರಷ್ಟು ಹೆಚ್ಚುವರಿ ತೆರಿಗೆ (Additional Tax) ಹೇರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಮಾಲಿನ್ಯವನ್ನು ತಡೆಯುವುದಕ್ಕಾಗಿ ಹೆಚ್ಚುವರಿ ತೆರಿಗೆ ವಿಧಿಸುವ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Union Minister Nirmala Sitharaman) ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ನಿಜವಾಗಲೂ ಕೇಂದ್ರ ಸರ್ಕಾರವು ಹೆಚ್ಚುವರಿ ತೆರಿಗೆಯನ್ನು ವಿಧಿಸಲು ಹೊರಟಿದೆಯೇ? ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಅಂಥ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದಿಲ್ಲ.
ಈ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಡೀಸೆಲ್ ಎಂಜಿನ್ ವಾಹನಗಳ ಮಾರಾಟದ ಮೇಲೆ ಶೇ.10ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂಬ ಸುದ್ದಿಯ ಕುರಿತು ತ್ವರಿತವಾಗಿ ಸ್ಪಷ್ಟಣೆ ನೀಡಬೇಕಿದೆ. ಹೆಚ್ಚುವರಿ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದಿಲ್ಲ ಎಂಬುದನ್ನು ತ್ವರಿತವಾಗಿ ಹೇಳಬೇಕಿದೆ ಎಂದು ಹೇಳಿದ್ದಾರೆ.
There is an urgent need to clarify media reports suggesting an additional 10% GST on the sale of diesel vehicles. It is essential to clarify that there is no such proposal currently under active consideration by the government. In line with our commitments to achieve Carbon Net…
— Nitin Gadkari (@nitin_gadkari) September 12, 2023
2027ರ ಹೊತ್ತಿಗೆ ಕಾರ್ಬನ್ ನೆಟ್ ಝೀರೋ ಸಾಧಿಸುವುದು ನಮ್ಮ ಗುರಿಯಾಗಿದೆ. ಹೆಚ್ಚುತ್ತಿರುವ ಆಟೋಮೊಬೈಲ್ ಮಾರಾಟದಿಂದಾಗಿ ಡೀಸೆಲ್‌ನಂಥ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಯುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಸ್ವಚ್ಛ ಹಾಗೂ ಹಸಿರು ಪರ್ಯಾಯ ಇಂಧನಗಳನ್ನು ಬಳಸುವುದು ಅಗತ್ಯವಾಗಿದೆ. ಈ ಇಂಧನಗಳು ಪರ್ಯಾಯಗಳಾಗಿರಬೇಕು, ಕಡಿಮೆ ವೆಚ್ಚವಗಿರಬೇಕು ಮತ್ತು ದೇಶೀಯವಾಗಿಯವಾಗಿದ್ದು, ಮಾಲಿನ್ಯರಹಿತವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ನಡೆದ ಎಸ್ಐಎಎಂ ವಾರ್ಷಿಕ 63ನೇ ಕನ್‌ವೆನ್ಷನ್ ಉದ್ದೇಶಿಸಿ ಮಾತನಾಡಿದ ಅವರು ನಿತಿನ್ ಗಡ್ಕರಿ ಅವರು, ಡೀಸೆಲ್ ಇಂಧನವನ್ನು ಅಪಾಯಕಾರಿ ಇಂಧನ ಎಂದು ವ್ಯಾಖ್ಯಾನಿಸಿದರು. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ ದೇಶವು ಇಂಧನವನನು ಆಮದು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ಎಥೆನಾಲ್ ಅಥವಾ ಗ್ರೀನ್ ಹೈಡ್ರೋಜನ್‌ಗಳಂಥ ಪರ್ಯಾಯ ಪರಿಸರ ಸ್ನೇಹಿ ಇಂಧನಗಳ ಮೇಲೆ ಗಮನ ಹರಿಸುವಂತೆ ಉದ್ಯಮಕ್ಕೆ ಅವರು ಕರೆ ನೀಡಿದರು. ಇದೇ ವೇಳೆ, ದೇಶದಲ್ಲಿ ಡೀಸೆಲ್ ಕಾರುಗಳ ಸಂಖ್ಯೆ ದೇಶದಲ್ಲಿ ಈಗಾಗಲೇ ಕಡಿಮೆಯಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿದರು.
ಈ ಸುದ್ದಿಯನ್ನೂ ಓದಿ: Petrol Diesel Price Cut: ದೀಪಾವಳಿಗೆ ಮೋದಿ ಮತ್ತೊಂದು ಗಿಫ್ಟ್; ಪೆಟ್ರೋಲ್ ಬೆಲೆ 5 ರೂ. ಇಳಿಕೆ?
ಕಳೆದ ಮೇ ತಿಂಗಳಲ್ಲಿ ಸರ್ಕಾರದ ಸಮಿತಿಯೊಂದು, 2027ರ ಹೊತ್ತಿಗೆ ಎಲ್ಲ ನಾಲ್ಕು ಚಕ್ರಗಳ ಡೀಸೆಲ್ ಎಂಜಿನ್ ವಾಹನಗಳ ಮೇಲೆ ನಿಷೇಧ ಹೇರಿ ಮತ್ತು ಎಲೆಕ್ಟ್ರಿಕ್ ಮತ್ತು ಗ್ಯಾಸ್ ಇಂಧನ ವಾಹನಗಳ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಶಿಫಾರರು ಮಾಡಿತ್ತು. 2020ರ ಹೊತ್ತಿಗೆ ಯಾವುದೇ ನಗರದಲ್ಲಿ ಎಲೆಕ್ಟ್ರಿಕ್ ಅಲ್ಲದ ಬಸ್‌ಗಳು ಬಳಸುವಂತಿಲ್ಲ. 2024 ಮತ್ತು ನಂತರದ ವರ್ಷಗಳಲ್ಲಿ ನಗರದ ಸಾರಿಗೆ ಯಾವುದೇ ಡೀಸೆಲ್ ಬಸ್‌ಗಳನ್ನು ಸೇರ್ಪಡೆ ಮಾಡುವಂತಿಲ್ಲ ಎಂದು ಶಿಫಾರಸು ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ಪ್ರಸ್ತಾಪಕ್ಕೆ ಹಲವು ಆಟೊಮೋಬೈಲ್ ಕಂಪನಿಗಳು ತಮ್ಮ ಸಹಕಾರವನ್ನು ನೀಡುತ್ತಿವೆ. ಈಗಾಗಲೇ ಮಾರುತಿ ಸುಜುಕಿ ಇಂಡಿಯಾ ಮತ್ತು ಹೊಂಡಾ ಕಂಪನಿಗಳು ಡೀಸೆಲ್ ಆಧರಿತ ಕಾರುಗಳನ್ನು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ ಎಂಬುದನ್ನು ಗಮನಿಸಬಹುದು.