Site icon Vistara News

Jio True | ಆರೋಗ್ಯ ಕ್ಷೇತ್ರದ ಆಧುನಿಕ ಪ್ರಗತಿಗಾಗಿ ಜಿಯೋ ಟ್ರೂ 5G- ಐಎಲ್‌ಬಿಎಸ್ ಪಾಲುದಾರಿಕೆ

Jio Tariffs

Jio Increases prepaid tariffs by 20%, check new plans here

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಅನ್ವಯ ಮಾಡಲು ಜಿಯೋ ಟ್ರೂ (Jio True) 5G ಮತ್ತು ಐಎಲ್‌ಬಿಎಸ್‌ (ILBS) ಕಾರ್ಯತಂತ್ರ ಪಾಲುದಾರಿಕೆ ಹೊಂದಿವೆ. ಪ್ರತಿ ಭಾರತೀಯರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದಕ್ಕೆ ನೆರವಾಗುವುದು ಜಿಯೋ ಟ್ರೂ 5Gಯ ಉದ್ದೇಶವಾಗಿದೆ.

ಜಿಯೋ ಟ್ರೂ 5G ಮತ್ತು ಐಎಲ್‌ಬಿಎಸ್‌ (ILBS) ಮಧ್ಯದ ಈ ಕಾರ್ಯತಂತ್ರದ ಪಾಲುದಾರಿಕೆಯು ಹೆಲ್ತ್‌ಕೇರ್ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸುತ್ತದೆ. ಕಡಿಮೆ-ಲೇಟೆನ್ಸಿಯೊಂದಿಗೆ ಟ್ರೂ 5G ತಂತ್ರಜ್ಞಾನದ ಶಕ್ತಿಯು ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ವರ್ಧಿಸುತ್ತದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬಳಕೆ-ಪ್ರಕರಣಗಳಿಗೆ ಜೀವ ತುಂಬುತ್ತದೆ. ಅವು ಹೀಗಿವೆ:
| ರೊಬೊಟಿಕ್ಸ್-ಆಧಾರಿತ ಚಿಕಿತ್ಸೆ / ಶಸ್ತ್ರಚಿಕಿತ್ಸೆ
| ರಿಮೋಟ್ – ಐಸಿಯು
| ಐಸಿಯು – ಆಂಬ್ಯುಲೆನ್ಸ್
| ಸಮುದಾಯ ಚಿಕಿತ್ಸಾಲಯಗಳು ಮತ್ತು ಇನ್ನೂ ಅನೇಕ

ಈ ಕಾರ್ಯತಂತ್ರದ ಪಾಲುದಾರಿಕೆಯು ಆರೋಗ್ಯ ಕ್ಷೇತ್ರದಲ್ಲಿ ಸುಧಾರಿತ ಬಳಕೆ ಪ್ರಕರಣಗಳಿಗೆ ಜೀವ ತುಂಬುವ ದಿಕ್ಕಿನಲ್ಲಿ ಒಂದು ಮೈಲುಗಲ್ಲಾಗಿದೆ.

ಇದನ್ನೂ ಓದಿ | Jio True 5G | ದೆಹಲಿ- ಎನ್‌ಸಿಆರ್‌ ಪ್ರದೇಶದ ಕವರೇಜ್‌ನಲ್ಲಿ ಜಿಯೋ ಟ್ರೂ 5Gಗೆ ಮೊದಲ ಸ್ಥಾನ

Exit mobile version