Site icon Vistara News

JioFiber Offer | ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್!

JioFiber offers

ಬೆಂಗಳೂರು: ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರರಾದ ರಿಲಯನ್ಸ್ ಜಿಯೋ(JioFiber Offer), ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಿದೆ. 2022ರ ಅಕ್ಟೋಬರ್ 18 ಮತ್ತು 28 ನಡುವೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್ (JioFiber Double Festival Bonanza) ಲಾಂಚ್ ಮಾಡಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಕೊಡುಗೆಯ ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಹೊಸ ಸಂಪರ್ಕವನ್ನು ಖರೀದಿಸಬೇಕು ಮತ್ತು ಈಗ ಲಾಂಚ್ ಆಗಿರುವ ಯೋಜನೆಗಳಲ್ಲಿ ಒಂದಕ್ಕೆ ಚಂದಾದಾರರಾಗಬೇಕು. ಜಿಯೋ ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ನಲ್ಲಿ ಎರಡು ಯೋಜನೆಗಳನ್ನು ಪರಿಚಯ ಮಾಡಿದೆ. 599 ರೂ. ಪ್ಲ್ಯಾನ್‌ 6 ತಿಂಗಳ ರೀಚಾರ್ಜ್ ಮತ್ತು899 ರೂ. ಪ್ಲ್ಯಾನ್‌ 6 ತಿಂಗಳ ರೀಚಾರ್ಜ್. ಈ ಎರಡು ಯೋಜನೆಗಳ ಜೊತೆಗೆ 899 ರೂ. x 3 ತಿಂಗಳ ಯೋಜನೆಯು 100% ಮೌಲ್ಯದ ಬ್ಯಾಕ್ ಆಫರ್‌ಗೆ ಅರ್ಹವಾಗಿದೆ. ಆದರೆ 15 ದಿನಗಳ ಹೆಚ್ಚುವರಿ ಮಾನ್ಯತೆ ಇದರಲ್ಲಿ ದೊರೆಯುವುದಿಲ್ಲ.

ಈ ಹೊಸ ಯೋಜನೆಗಳು ಹೊಸ ಸಂಪರ್ಕಗಳನ್ನು ಬುಕ್ ಮಾಡಿದಾಗ ಬಳಕೆದಾರರಿಗೆ 6,500 ರೂ. ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ. ಈ ಕೊಡುಗೆಯು ಆಯ್ದ ಯೋಜನೆಗಳ ಖರೀದಿಗೆ ಅನ್ವಯಿಸುತ್ತದೆ. 599 ರೂ. x 6 ತಿಂಗಳುಗಳು ಮತ್ತು 899 ರೂ. x 6 ತಿಂಗಳು ಪ್ಲ್ಯಾನ್‌ಗಳಿವೆ. ಈ ಎರಡು ಯೋಜನೆಗಳು, ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ನೊಂದಿಗೆ ಬರಲಿದ್ದು, ತಿಂಗಳಿಗೆ 599 ಮತ್ತು 899 ರೂ. ಈ ಎರಡೂ ಯೋಜನೆಗಳು ಹೊಸದಾಗಿದ್ದು ಅಕ್ಟೋಬರ್ 18 ರಿಂದ ಅಕ್ಟೋಬರ್ 28, 2022 ರವರೆಗೆ ಮಾತ್ರ ಇರುತ್ತವೆ. ಈ ಯೋಜನೆಗಳನ್ನು ಖರೀದಿಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 6,000 ರೂ. ಮೌಲ್ಯದ 4K JioFiber ಸೆಟ್ ಟಾಪ್ ಬಾಕ್ಸ್ ಅನ್ನು ಸಹ ಪಡೆಯುತ್ತಾರೆ.

599 ರೂ. X 6 ತಿಂಗಳ ಯೋಜನೆ ಹೀಗಿದೆ
ಈ ಯೋಜನೆಯಲ್ಲಿ 30 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆ‌ಲ್‌ಗಳು ದೊರೆಯಲಿದೆ. ಒಟ್ಟು 4,241 ರೂ. ಆಗಲಿದೆ(3,594 ರೂ. + 647 ರೂ. ಜಿಎಸ್ಟಿ). ಈ ಯೋಜನೆಯಲ್ಲಿ ಹೊಸ ಗ್ರಾಹಕರು 4,500 ರೂ. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: AJIO 1,000 ವೋಚರ್, ರಿಲಯನ್ಸ್ ಡಿಜಿಟಲ್ 1,000 ರೂ. ವೋಚರ್, ನೆಟ್‌ಮೆಡ್ಸ್‌ನ 1,000 ರೂ. ವೋಚರ್ ಮತ್ತು IXIGO 1,500 ರೂ. ವೋಚರ್ ದೊರೆಯಲಿದೆ. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

899 ರೂ. X 6 ತಿಂಗಳ ಯೋಜನೆ ಹೇಗಿದೆ?
ಈ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿವೆ. ಒಟ್ಟು 6,365 ರೂ. ಆಗಲಿದೆ(5,394 ರೂ. + 971 ರೂ. ಜಿಎಸ್ಟಿ). ಹೊಸ ಗ್ರಾಹಕರು 6,500 ರೂ. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ಈ ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿವೆ: AJIOನ 2,000 ರೂ. ವೋಚರ್, ರಿಲಯನ್ಸ್ ಡಿಜಿಟಲ್‌ನ 1,000 ರೂ. ವೋಚರ್, NetMedsನ 500 ರೂ. ವೋಚರ್ ಮತ್ತು IXIGO ನ 3,000 ರೂ. ವೋಚರ್ ಇರಲಿವೆ. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

899 ರೂ. X 3 ತಿಂಗಳ ಯೋಜನೆ ಹೇಗಿದೆ?
ಈ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿವೆ. ಈ ಯೋಜನೆಯಲ್ಲಿ ಹೊಸ ಗ್ರಾಹಕರು 3,500 ರೂ. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ಈ ವೋಚರ್‌ಗಳು 4 ವಿಭಿನ್ನ ಬ್ರ್ಯಾಂಡ್‌ಗಳದ್ದಾಗಿರುತ್ತವೆ. AJIOನ 1,000 ರೂ. ವೋಚರ್, ರಿಲಯನ್ಸ್ ಡಿಜಿಟಲ್‌ನ 500 ರೂ. ವೋಚರ್, NetMedsನ 500 ರೂ. ವೋಚರ್ ಮತ್ತು IXIGOನ 1,500 ವೋಚರ್ ಸಿಗಲಿದೆ. ಆದರೆ, ಈ ಯೋಜನೆಯಲ್ಲಿ ಹೆಚ್ಚುವರಿ ವ್ಯಾಲಿಡಿಟಿ ದೊರೆಯುವುದಿಲ್ಲ.

ಇದನ್ನೂ ಓದಿ | Jio Air Fiber | ಫೈಬರ್‌ ಇಂಟರ್‌ನೆಟ್‌ ವೇಗದ ಅಂತರ್ಜಾಲ ಒದಗಿಸುವ ಜಿಯೋ ಹಾಟ್‌ಸ್ಪಾಟ್‌, ಏನಿದು ಹೊಸ ಸೇವೆ?

Exit mobile version