Site icon Vistara News

Koo App | ಬನ್ನಿ ನಮ್ಜೊತೆ ಕೆಲಸ ಮಾಡಿ, ಟ್ವಿಟರ್‌ನ ಮಾಜಿ ಉದ್ಯೋಗಿಗಳಿಗೆ ಕೂ ಆ್ಯಪ್ ಆಹ್ವಾನ

Koo App

ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ (Twitter) ಖರೀದಿಸುತ್ತಿದ್ದಂತೆ, ಅರ್ಧದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದಾರೆ. ಇದೀಗ, ಭಾರತದಲ್ಲಿ ಟ್ವಿಟರ್ ಎದುರಾಳಿ ಎನಿಸಿಕೊಂಡಿರುವ ಕೂ ಆ್ಯಪ್ (Koo App), ಟ್ವಿಟರ್‌ನಿಂದ ವಜಾಗೊಂಡಿರುವ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕೂ ಆ್ಯಪ್ ಸಹ ಸಂಸ್ಥಾಪಕ ಮಯಾಂಕ್ ಬಿಡವಟ್ಕ ಅವರು ಟ್ವೀಟ್ ಮಾಡಿ, ಈ ಘೋಷಣೆ ಮಾಡಿದ್ದಾರೆ.

ಕೂ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡುತ್ತಿದೆ. ಟೀಮ್‌ಗೆ ಹಲವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ, ಟ್ವಿಟರ್ ಮಾಜಿ ಉದ್ಯೋಗಿಗಳಿಗೆ ಉದ್ಯೋಗ ನೀಡಲಾಗುವುದು ಎದು ಅವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸ್ವದೇಶಿ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿರುವ ಕೂ, ಇತ್ತೀಚೆಗಷ್ಟೇ ತನ್ನ ಆ್ಯಪ್‌ಗೆ ಹೊಸ ಫೀಚರ್ಸ್ ಆ್ಯಡ್ ಮಾಡಿದೆ.

#RIPTwitter ಟ್ರೆಂಡ್‌ ನೋಡಿ ದುಃಖವಾಗುತ್ತಿದೆ. ಟ್ವಿಟರ್‌ನ ಈ ಎಲ್ಲ ಮಾಜಿ ಉದ್ಯೋಗಿಗಳ ಪೈಕಿ ಕೆಲವರನ್ನು ನಾವು ನೇಮಕ ಮಾಡಿಕೊಳ್ಳಲಿದ್ದೇವೆ. ನಮ್ಮ ವ್ಯವಹಾರವನ್ನು ವಿಸ್ತರಿಸುತ್ತಿದ್ದೇವೆ. ಅವರ ಪ್ರತಿಭೆಗೆ ಎಲ್ಲಿ ಮೌಲ್ಯವಿದೆಯೋ ಅಲ್ಲಿ ಅವರು ಕೆಲಸ ಮಾಡಲು ಅರ್ಹರಾಗಿದ್ದಾರೆ. ಮೈಕ್ರೋಬ್ಲಾಗಿಂಗ್ ಎಂಬುದು ಪೀಪಲ್ ಪವರ್‌ಗೆ ಸಂಬಂಧಿಸಿದ್ದು ಹೊರತು ಅವರನ್ನು ಹತ್ತಿಕ್ಕುವುದಿಲ್ಲ ಎಂದು ಕೂ ಸಹ ಸಂಸ್ಥಾಪಕ ಮಯಾಂಕ್ ಬಡವಟ್ಕ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Twitter layoff | ಟ್ವಿಟರ್‌ನಲ್ಲಿ ಅಲ್ಲೋಲಕಲ್ಲೋಲ, ಮತ್ತೆ 1,200 ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ

Exit mobile version