Site icon Vistara News

WhatsApp New Feature: ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದಷ್ಟು ಸಮಯದವರೆಗೆ ಮೆಸೇಜ್ ಪಿನ್ ಮಾಡಬಹುದು!

WhatsApp Chat

ನವದೆಹಲಿ: ಮೆಟಾ ಒಡೆತನದ ಮೆಸೇಜಿಂಗ್ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ. ಚಾಟ್ಸ್ ಮತ್ತು ಗ್ರೂಪ್ಸ್‌ಗಳಲ್ಲಿ ಪಿನ್ ಮಾಡಿದ ಮೆಸೇಜ್‌ ಎಷ್ಟು ಅವಧಿಯವರಿಗೆ ಇರಬೇಕು ಎಂಬ ನಿರ್ಧರಿಸುವ ಮೆಸೇಜ್ ಪಿನ್ ಡುರೇಷನ್ (Message Pin Duration) ಎಂಬ ಹೊಸ ಫೀಚರ್ ಲಾಂಚ್ ಮಾಡಲಿದೆ. ಈ ಕುರಿತು ವಾಟ್ಸಾಪ್ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯದಿಂದಾಗಿ ಬಳಕೆದಾರರಿಗೆ ಅಗತ್ಯವಾದ ಮೆಸೇಜ್ ಅನ್ನು ಗ್ರೂಪ್ಸ್ (Groups) ಮತ್ತು ಚಾಟ್ಸ್‌ನಲ್ಲಿ (Chats) ಸಂದೇಶವನ್ನು ಪಿನ್ ಮಾಡಬಹುದಾಗಿದೆ. ಇದರಿಂದಾಗಿ ಮಹತ್ವದ ಸಂದೇಶವನ್ನು ಹೈಲೈಟ್ ಮಾಡಲು ಸಾಧ್ಯವಾಗಲಿದೆ(WhatsApp New Feature).

ಈ ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದರೂ Android 2.23.13.11 ಹೊಸ ಅಪ್‌ಡೇಟ್‌ನಿಂದಾಗಿ ಈ ಬಗ್ಗೆ ಗೊತ್ತಾಗಿದೆ. ಪಿನ್ ಮಾಡಿದ ಚಾಟ್ ಅನ್ನು ಎಷ್ಟು ಕಾಲ ಹಾಗೆಯೇ ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ವಾಟ್ಸಾಪ್ ಕೆಲಸ ಮಾಡುತ್ತಿರುವುದು ಈ ಅಪ್‌ಡೇಟಿನಿಂದ ಗೊತ್ತಾಗಿದೆ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ಈ ಫೀಚರ್ ಎಲ್ಲರ ಬಳಕೆಗೂ ಸಿಗಲಿದೆ ಎಂದು WABetaInfo ವರದಿ ಮಾಡಿದೆ.

ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಪಿನ್ ಮಾಡಿದ ಸಂದೇಶವನ್ನು ಮೂರು ರೀತಿಯ ಸಮಯದಲ್ಲಿ ಕಾಯ್ದಿಟ್ಟುಕೊಳ್ಳಬಹುದು. 24 ಗಂಟೆ, 7 ದಿನ ಮತ್ತು 30 ದಿನಗಳವರೆಗೂ ಸಂದೇಶವನ್ನು ಗ್ರೂಪ್ ಮತ್ತು ಚಾಟ್ಸ್‌ನಲ್ಲಿ ಪಿನ್ ಮಾಡಬಹುದು. ಹಾಗೆಯೇ, ಯಾವುದೇ ಸಮಯದಲ್ಲೂ ಚಾಟ್ ಅನ್ನು ಅನ್ ಪಿನ್ ಕೂಡ ಮಾಡಬಹುದು. ಇದರಿಂದಾಗಿ ಚಾಟ್ ಪಿನ್ ಮಾಡುವ ಸಂಬಂಧ ಬಳಕೆದಾರರಿಗೆ ಈ ಫೀಚರ್ ಹೆಚ್ಚು ಅವಕಾಶಗಳನ್ನು ಒದಗಿಸುತ್ತದೆ.

WhatsApp New Feature: ವಾಟ್ಸಾಪ್‌ನಿಂದ ‘ಸೈಲೆನ್ಸ್‌ ಅನ್‌ನೋನ್ ಕಾಲರ್ಸ್’ ಫೀಚರ್ ಲಾಂಚ್!

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ ಲಾಂಚ್ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಾಪ್ ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್ ಈಗ ಸೈಲೆನ್ಸ್ ಅನ್‌ನೋನ್ ಕಾಲರ್ಸ್ (silence unknown callers) ಎಂಬ ಹೊಸ ಫೀಚರ್ ಜಾರಿಗೆ ತಂದಿದೆ (WhatsApp New Feature). ಈ ಹೊಸ ಫೀಚರ್ ಬಳಕೆದಾರರಿಗೆ, ಇನ್‌ಕಮಿಂಗ್ ಕಾಲ್‍ಗಳ ಹೆಚ್ಚು ನಿಯಂತ್ರಣ ಸಾಧಿಸಲು ನೆರವು ಒದಗಿಸುತ್ತದೆ. ಅಂದ ಹಾಗೆ, ಮೆಟಾ ಸಿಇಒ (Meta CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಈ ಹೊಸ ಫೀಚರ್ ಘೋಷಣೆ ಮಾಡಿದ್ದಾರೆ.

ಮೆಟಾ ಒಡೆತನದ ವಾಟ್ಸಾಪ್ ಜಾರಗೆ ತಂದಿರುವ ಈ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ಸ್ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಅಪರಿಚಿತ ಜನರಿಂದ ಬರುವ ಸ್ಪ್ಯಾಮ್, ಸ್ಕ್ಯಾಮ್‌ಗಳು ಕರೆಗಳನ್ನು ಸ್ವಯಂಚಾಲಿತವಾಗಿ ಸ್ಕ್ರೀನ್ ಔಟ್ ಮಾಡಲು ಸಾಧಅಯವಾ ಮಾಡಲು ಇದು ಸಹಾಯ ಮಾಡುತ್ತದೆ. ಇನ್ನೂ ಹೆಚ್ಚಿನ ಗೌಪ್ಯತೆ ಮತ್ತು ನಿಯಂತ್ರಣಕ್ಕಾಗಿ ನೀವು ಈಗ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಪರ್ಕಗಳಿಂದ ಒಳಬರುವ ಕರೆಗಳನ್ನು ಸ್ವಯಂಚಾಲಿತವಾಗಿ ನಿಶ್ಯಬ್ದಗೊಳಿಸಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: WhatsApp Top Feature: ವಾಟ್ಸಾಪ್‌ನ ಟಾಪ್ 5 ಫೀಚರ್‌ಗಳು

ವಾಟ್ಸಾಪ್‌ನ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಒಳಬರುವ ಕರೆಗಳ ನಿಯಂತ್ರಣವನ್ನು ನೀಡುತ್ತದೆ. ಅಂಥ ಕರೆಗಳು ಅವರ ಫೋನ್‌ಗಳಲ್ಲಿ ರಿಂಗ್ ಆಗುವುದಿಲ್ಲ, ಆದರೆ ಯಾರಾದರೂ ಪ್ರಮುಖರ ಕರೆಯಾಗಿದ್ದರೆ ಅದು ಕಾಲ್ ಪಟ್ಟಿಯಲ್ಲಿ ಕಾಣುತ್ತದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version