WhatsApp New Feature: ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದಷ್ಟು ಸಮಯದವರೆಗೆ ಮೆಸೇಜ್ ಪಿನ್ ಮಾಡಬಹುದು! Vistara News
Connect with us

ಗ್ಯಾಜೆಟ್ಸ್

WhatsApp New Feature: ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದಷ್ಟು ಸಮಯದವರೆಗೆ ಮೆಸೇಜ್ ಪಿನ್ ಮಾಡಬಹುದು!

WhatsApp New Feature: ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹೊಸ ಅಪ್‌ಡೇಟ್ ಮಾಡುತ್ತಲೇ ಇರುತ್ತದೆ. ಈಗ ಮತ್ತೊಂದು ಹೊಸ ಫೀಚರ್ ಅಭಿವೃದ್ಧಿಪಡಿಸುತ್ತಿದೆ.

VISTARANEWS.COM


on

WhatsApp Chat
Koo

ನವದೆಹಲಿ: ಮೆಟಾ ಒಡೆತನದ ಮೆಸೇಜಿಂಗ್ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ. ಚಾಟ್ಸ್ ಮತ್ತು ಗ್ರೂಪ್ಸ್‌ಗಳಲ್ಲಿ ಪಿನ್ ಮಾಡಿದ ಮೆಸೇಜ್‌ ಎಷ್ಟು ಅವಧಿಯವರಿಗೆ ಇರಬೇಕು ಎಂಬ ನಿರ್ಧರಿಸುವ ಮೆಸೇಜ್ ಪಿನ್ ಡುರೇಷನ್ (Message Pin Duration) ಎಂಬ ಹೊಸ ಫೀಚರ್ ಲಾಂಚ್ ಮಾಡಲಿದೆ. ಈ ಕುರಿತು ವಾಟ್ಸಾಪ್ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯದಿಂದಾಗಿ ಬಳಕೆದಾರರಿಗೆ ಅಗತ್ಯವಾದ ಮೆಸೇಜ್ ಅನ್ನು ಗ್ರೂಪ್ಸ್ (Groups) ಮತ್ತು ಚಾಟ್ಸ್‌ನಲ್ಲಿ (Chats) ಸಂದೇಶವನ್ನು ಪಿನ್ ಮಾಡಬಹುದಾಗಿದೆ. ಇದರಿಂದಾಗಿ ಮಹತ್ವದ ಸಂದೇಶವನ್ನು ಹೈಲೈಟ್ ಮಾಡಲು ಸಾಧ್ಯವಾಗಲಿದೆ(WhatsApp New Feature).

ಈ ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದರೂ Android 2.23.13.11 ಹೊಸ ಅಪ್‌ಡೇಟ್‌ನಿಂದಾಗಿ ಈ ಬಗ್ಗೆ ಗೊತ್ತಾಗಿದೆ. ಪಿನ್ ಮಾಡಿದ ಚಾಟ್ ಅನ್ನು ಎಷ್ಟು ಕಾಲ ಹಾಗೆಯೇ ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ವಾಟ್ಸಾಪ್ ಕೆಲಸ ಮಾಡುತ್ತಿರುವುದು ಈ ಅಪ್‌ಡೇಟಿನಿಂದ ಗೊತ್ತಾಗಿದೆ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ಈ ಫೀಚರ್ ಎಲ್ಲರ ಬಳಕೆಗೂ ಸಿಗಲಿದೆ ಎಂದು WABetaInfo ವರದಿ ಮಾಡಿದೆ.

ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಪಿನ್ ಮಾಡಿದ ಸಂದೇಶವನ್ನು ಮೂರು ರೀತಿಯ ಸಮಯದಲ್ಲಿ ಕಾಯ್ದಿಟ್ಟುಕೊಳ್ಳಬಹುದು. 24 ಗಂಟೆ, 7 ದಿನ ಮತ್ತು 30 ದಿನಗಳವರೆಗೂ ಸಂದೇಶವನ್ನು ಗ್ರೂಪ್ ಮತ್ತು ಚಾಟ್ಸ್‌ನಲ್ಲಿ ಪಿನ್ ಮಾಡಬಹುದು. ಹಾಗೆಯೇ, ಯಾವುದೇ ಸಮಯದಲ್ಲೂ ಚಾಟ್ ಅನ್ನು ಅನ್ ಪಿನ್ ಕೂಡ ಮಾಡಬಹುದು. ಇದರಿಂದಾಗಿ ಚಾಟ್ ಪಿನ್ ಮಾಡುವ ಸಂಬಂಧ ಬಳಕೆದಾರರಿಗೆ ಈ ಫೀಚರ್ ಹೆಚ್ಚು ಅವಕಾಶಗಳನ್ನು ಒದಗಿಸುತ್ತದೆ.

WhatsApp New Feature: ವಾಟ್ಸಾಪ್‌ನಿಂದ ‘ಸೈಲೆನ್ಸ್‌ ಅನ್‌ನೋನ್ ಕಾಲರ್ಸ್’ ಫೀಚರ್ ಲಾಂಚ್!

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ ಲಾಂಚ್ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಾಪ್ ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್ ಈಗ ಸೈಲೆನ್ಸ್ ಅನ್‌ನೋನ್ ಕಾಲರ್ಸ್ (silence unknown callers) ಎಂಬ ಹೊಸ ಫೀಚರ್ ಜಾರಿಗೆ ತಂದಿದೆ (WhatsApp New Feature). ಈ ಹೊಸ ಫೀಚರ್ ಬಳಕೆದಾರರಿಗೆ, ಇನ್‌ಕಮಿಂಗ್ ಕಾಲ್‍ಗಳ ಹೆಚ್ಚು ನಿಯಂತ್ರಣ ಸಾಧಿಸಲು ನೆರವು ಒದಗಿಸುತ್ತದೆ. ಅಂದ ಹಾಗೆ, ಮೆಟಾ ಸಿಇಒ (Meta CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಈ ಹೊಸ ಫೀಚರ್ ಘೋಷಣೆ ಮಾಡಿದ್ದಾರೆ.

ಮೆಟಾ ಒಡೆತನದ ವಾಟ್ಸಾಪ್ ಜಾರಗೆ ತಂದಿರುವ ಈ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ಸ್ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಅಪರಿಚಿತ ಜನರಿಂದ ಬರುವ ಸ್ಪ್ಯಾಮ್, ಸ್ಕ್ಯಾಮ್‌ಗಳು ಕರೆಗಳನ್ನು ಸ್ವಯಂಚಾಲಿತವಾಗಿ ಸ್ಕ್ರೀನ್ ಔಟ್ ಮಾಡಲು ಸಾಧಅಯವಾ ಮಾಡಲು ಇದು ಸಹಾಯ ಮಾಡುತ್ತದೆ. ಇನ್ನೂ ಹೆಚ್ಚಿನ ಗೌಪ್ಯತೆ ಮತ್ತು ನಿಯಂತ್ರಣಕ್ಕಾಗಿ ನೀವು ಈಗ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಪರ್ಕಗಳಿಂದ ಒಳಬರುವ ಕರೆಗಳನ್ನು ಸ್ವಯಂಚಾಲಿತವಾಗಿ ನಿಶ್ಯಬ್ದಗೊಳಿಸಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: WhatsApp Top Feature: ವಾಟ್ಸಾಪ್‌ನ ಟಾಪ್ 5 ಫೀಚರ್‌ಗಳು

ವಾಟ್ಸಾಪ್‌ನ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಒಳಬರುವ ಕರೆಗಳ ನಿಯಂತ್ರಣವನ್ನು ನೀಡುತ್ತದೆ. ಅಂಥ ಕರೆಗಳು ಅವರ ಫೋನ್‌ಗಳಲ್ಲಿ ರಿಂಗ್ ಆಗುವುದಿಲ್ಲ, ಆದರೆ ಯಾರಾದರೂ ಪ್ರಮುಖರ ಕರೆಯಾಗಿದ್ದರೆ ಅದು ಕಾಲ್ ಪಟ್ಟಿಯಲ್ಲಿ ಕಾಣುತ್ತದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್

Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.

VISTARANEWS.COM


on

Edited by

Reliance Jio offering free plan for 6 months on purchase of iPhone 15 through reliance
Koo

ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋ‌ಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.

ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಸುದ್ದಿಯನ್ನೂ ಓದಿ: Apple iPhone :‌ ಭಾರತದಲ್ಲಿ ಐಫೋನ್‌ 3ಜಿಯಿಂದ ಮೊದಲ ರಿಟೇಲ್‌ ಸ್ಟೋರ್ ತನಕ‌ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?

ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.

ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್

YouTube: ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಕಂಪನಿಯು ಹೊಸ ಎಡಿಟಿಂಗ್ ಆ್ಯಪ್ ಲಾಂಚ್ ಮಾಡಿದೆ.

VISTARANEWS.COM


on

Edited by

YouTube announce new app called youtube create
Koo

ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ವೇದಿಕೆಯಾಗಿರುವ ಯುಟ್ಯೂಬ್ (YouTube) ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ (Editing App) ಯುಟ್ಯೂಬ್ ಕ್ರಿಯೇಟ್ (YouTube Create) ಘೋಷಿಸಿದೆ. ಈ ಮೂಲಕ ಬಳಕೆದಾರರಿಗೆ ವಿಡಿಯೋ ಕ್ರಿಯೇಟ್ ಮತ್ತು ಷೇರ್ ಮಾಡಲು ಅನುಮತಿಸಲಿದೆ. ಗುರುವಾರ ನಡೆದ ಮೇಡ್ ಆನ್ ಯುಟ್ಯೂಬ್‌ ಇವೆಂಟ್‌ನಲ್ಲಿ ಈ ಹೊಸ ಆ್ಯಪ್ ಕುರಿತು ಘೋಷಣೆ ಮಾಡಲಾಗಿದೆ. ಸದ್ಯ ಈ ಆ್ಯಪ್ ಬೀಟಾ ವರ್ಷನ್‌ನಲ್ಲಿದ್ದು, ಭಾರತ, ಅಮೆರಿಕ, ಜಮರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಂಡೋನೇಷ್ಯಾ, ಕೋರಿಯಾ, ಸಿಂಗಾಪುರ್‌ ಮಾರುಕಗಳಲ್ಲಿ ಲಭ್ಯವಾಗಲಿದೆ. 2024ರಲ್ಲಿ ಐಒಎಸ್‌ಗೆ ಅಪ್‌ಡೇಟ್ ದೊರೆಯಲಿದೆ.

ವಿಡಿಯೋಗಳ ಉತ್ಪಾದನಾ ಪ್ರಕ್ರಿಯೆಯು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಮೊದಲ ಬಾರಿಗೆ ವಿಡಿಯೋ ಮಾಡುವವರು ತಮ್ಮ ಮೊದಲ ವೀಡಿಯೊವನ್ನು ಅಪ್‌ಲೋಡ್ ಮಾಡುವುದಕ್ಕೆ ತುಂಬ ಕಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲು ನಾವು ಯುಟ್ಯೂಬ್ ಕ್ರಿಯೇಟ್ ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಆರಂಭಿಸುತ್ತಿದ್ದೇವೆ ಎಂದು ಕಂಪನಿಯು ಮೇಡ್ ಆನ್ ಯುಟ್ಯೂಬ್‌ ಇವೆಂಟ್‌ನಲ್ಲಿ ಹೇಳಿದೆ.

ಯೂಟ್ಯೂಬ್ ಕ್ರಿಯೇಟ್ ಎನ್ನುವುದು ಕಿರುಚಿತ್ರಗಳು ಮತ್ತು ದೀರ್ಘವಾದ ವೀಡಿಯೊಗಳೆರಡಕ್ಕೂ ವಿಡಿಯೋ ನಿರ್ಮಾಣವನ್ನು ಸರಳ ಮತ್ತು ಸುಲಭ ಮಾಡಲು ವಿನ್ಯಾಸಗೊಳಿಸಿದ ಉಚಿತ ಅಪ್ಲಿಕೇಶನ್ ಎಂದು ಕಂಪನಿಯು ಹೇಳಿದೆ. ಆ ಆ್ಯಪ್ ಸಹಾಯದಿಂದ ವಿಡಿಯೋ ಕ್ರಿಯೇಟರ್ಸ್, ಇತರ ಕೆಲಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಬದಲು ತಮ್ಮ ಸೃಜನಾತ್ಮಕವಾಗಿ ರೂಪಿಸಲು ನೆರವು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನು ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!

ಹೊಸ ಜನರೇಟಿವ್ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್ ನಿಖರವಾದ ಎಡಿಟಿಂಗ್ ಟ್ರಿಮ್ಮಿಂಗ್, ಸ್ವಯಂಚಾಲಿತ ಶೀರ್ಷಿಕೆ, ವಾಯ್ಸ್‌ಓವರ್ ಮತ್ತು ಪರಿವರ್ತನೆಗಳಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಟಿಕ್‌ಟಾಕ್‌ನಂತೆಯೇ ಬೀಟ್-ಮ್ಯಾಚಿಂಗ್ ತಂತ್ರಜ್ಞಾನದೊಂದಿಗೆ ರಾಯಲ್ಟಿ-ಮುಕ್ತ ಸಂಗೀತದ ಶ್ರೇಣಿಯನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸುಮಾರು ಮೂರು ಸಾವಿರ ಜನರಿಂದ ಫೀಡ್‌ಬ್ಯಾಕ್‌ ಪಡೆದುಕೊಂಡ ಬಳಿಕ ಈ ಹೊಸ ಆ್ಯಪ್ ರೂಪಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಆ್ಯಪ್‌ಗೆ ಇನ್ನಷ್ಟು ಹೊಸ ಫೀಚರ್‌ಗಳು ಸೇರಲಿವೆ. ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಎಐ ಸೃಜಿತ ಬ್ಯಾಕ್‌ಗ್ರೌಂಡ್ ಕೂಡ ಬಳಸಿಕೊಳ್ಳಬಹುದು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

WhatsApp Business: ವಾಟ್ಸಾಪ್‌ ಬಿಸಿನೆಸ್‌ಗೆ ಹೊಸ ಫೀಚರ್ಸ್, ಸಖತ್ ಲಾಭಗಳಂಟು!

Whatsapp Business: ಮಾರ್ಕ್ ಜುಕರ್‌ಬರ್ಗ್‌ ಅವರು ವಾಟ್ಸಾಪ್‌ ಬಿಸಿನೆಸ್‌ ಆ್ಯಪ್‌ಗೆ ಹೊಸ ಫೀಚರ್‌ಗಳನ್ನು ಲಾಂಚ್ ಮಾಡುವ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.

VISTARANEWS.COM


on

Edited by

zukerberg
Koo

ಮುಂಬೈ, ಮಹಾರಾಷ್ಟ್ರ: ಮುಂಬೈನಲ್ಲಿ (Mumbai) ನಡೆದ ಎರಡನೇ ವಾರ್ಷಿಕ ಸಂವಾದ ಸಮ್ಮೇಳನದಲ್ಲಿ ಮೆಟಾದ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ (Meta CEO Mark Zukerberg) ಅವರು, ವಾಟ್ಸಾಪ್ ಬಿಸಿನೆಸ್‌ಗೆ (WhatsApp Business) ಕೆಲವು ಹೊಸ ಫೀಚರ್‌ಗಳನ್ನು ಘೋಷಣೆ ಮಾಡಿದ್ದಾರೆ(WhatsApp News Feature). ಬಿಸಿನೆಸ್ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಸರಣಿ ಫೀಚರ್‌ಗಳನ್ನು ಪ್ರಕಟಿಸಿದರು. ಈ ಪೈಕಿ ವಾಟ್ಸಾಪ್‌ ಫ್ಲೋಸ್ ಹೊಸ ಫೀಚರ್ ಪ್ರಮುಖವಾಗಿದ್ದು, ಚಾಟ್ ಥ್ರೆಡ್‌ನಲ್ಲಿ ಗ್ರಾಹಕರೊಂದಿಗೆ ಬಿಸಿನೆಸ್ ಕೈಗೊಳ್ಳುವ ರೀತಿಯನ್ನು ಬದಲಿಸಲಿದೆ ಎಂದು ಹೇಳಿದ್ದಾರೆ(WhatsApp Flows).

ಮೆಟಾ ಸಿಇಒ ಪ್ರಕಾರ, ‘ವಾಟ್ಸಾಪ್ ಫ್ಲೋಸ್’ ಫೀಚರ್, ಚಾಟ್ ಸಂಭಾಷಣೆಗಳಲ್ಲಿ ಸೂಕ್ತವಾದ ಮತ್ತು ತಡೆರಹಿತ ಸಂವಹನಗಳನ್ನು ರಚಿಸಲು ಅಧಿಕಾರ ನೀಡುತ್ತದೆ. ಉದಾಹರಣೆಗೆ, ಹೊಸ ಖಾತೆಗಳನ್ನು ತೆರೆಯಲು ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲು ಬ್ಯಾಂಕ್‌ಗಳು ಗ್ರಾಹಕರನ್ನು ಸಕ್ರಿಯಗೊಳಿಸಬಹುದು, ಆಹಾರ ವಿತರಣಾ ಸೇವೆಗಳು ಪಾಲುದಾರ ರೆಸ್ಟೋರೆಂಟ್‌ಗಳಿಂದ ಆರ್ಡರ್‌ಗಳನ್ನು ಸುಗಮಗೊಳಿಸಬಹುದು ಮತ್ತು ಏರ್‌ಲೈನ್‌ಗಳು ಫ್ಲೈಟ್ ಚೆಕ್-ಇನ್ ಮತ್ತು ಸೀಟ್ ಆಯ್ಕೆಯನ್ನು ಸುಗಮಗೊಳಿಸಬಹುದು.. ಈ ರೀತಿಯ ಯಾವುದೇ ಚಟುವಟಿಕೆಯನ್ನು ಬಳಕೆದಾರರು ಚಾಟ್ ಥ್ರೆಡ್ ತೊರೆಯದೆಯೇ ಮಾಡಬಹುದಾಗಿದೆ.

ಇದಲ್ಲದೆ, ಇನ್-ಚಾಟ್ ವಹಿವಾಟುಗಳನ್ನು ಇನ್ನಷ್ಟು ಸರಳಗೊಳಿಸಲು, ಮೆಟಾ ತನ್ನ ಪಾವತಿ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಬ್ರೆಜಿಲ್ ಮತ್ತು ಸಿಂಗಾಪುರದಲ್ಲಿ ತನ್ನ ಪಾವತಿ ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿದ ಬಳಿಕ ಆ ಸೇವೆಯನ್ನು ಭಾರತಕ್ಕೆ ವಿಸ್ತರಿಸುವುದಾಗಿ ಘೋಷಿಸಿದೆ.

ಈ ಸುದ್ದಿಯನ್ನೂ ಓದಿ: ಫೇಸ್​ಬುಕ್​ ಮಾತೃಸಂಸ್ಥೆ ಮೆಟಾದಲ್ಲಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ನಿರ್ಧಾರ; Sorry ಎಂದ ಮಾರ್ಕ್​​​ ಜುಕರ್​ಬರ್ಗ್​

ಭಾರತದಲ್ಲಿ ಬಳಕೆದಾರರು ಮೆಟಾದ ಪಾವತಿ ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಪಡೆಯುವುದು ಮಾತ್ರವಲ್ಲದೇ, ಯುಪಿಐ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಇತರ ಜನಪ್ರಿಯ ಪಾವತಿ ವಿಧಾನಗಳನ್ನು ಬಳಸುವ ಅವಕಾಶವನ್ನೂ ಪಡೆಯಲಿದ್ದಾರೆ. ಈ ಸಮಗ್ರ ವಿಧಾನವು ಬಳಕೆದಾರರು ಮತ್ತು ಭಾರತೀಯ ವ್ಯವಹಾರಗಳ ನಡುವೆ ತಡೆರಹಿತ ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಮೆಟಾ ಕಂಪನಿಯು, ವಾಟ್ಸಾಪಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಮೆಟಾ ವೆರಿಫೈಡ್ ಫೀಚರ್ ಲಾಂಚ್ ಮಾಡುತ್ತಿದೆ. ಈ ಮೂಲಕ ಗ್ರಾಹಕರಿಗೆ ತಾವು ವ್ಯವಹಾರ ಮಾಡುತ್ತಿರುವ ಕಂಪನಿಯು ನೈಜವಾಗಿದ್ದು, ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ. ಬಿಸಿನೆಸ್‌ಗೆ ಚಂದಾದಾರರಾಗುವರರು ಪರಿಶೀಲಿಸಿದ ಬ್ಯಾಡ್ಜ್ ಅನ್ನು ಸ್ವೀಕರಿಸುತ್ತಾರೆ. ಅವರ ಖಾತೆಗಳಿಗೆ ಬೆಂಬಲ, ನಕಲಿ ವ್ಯವಹಾರದಿಂದ ರಕ್ಷಣೆ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.

ತಂತ್ರಜ್ಞಾನದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

WhatsApp Channel: ‘ವಾಟ್ಸಾಪ್‌ ಚಾನೆಲ್‌’ಗೆ ಎಂಟ್ರಿ ಕೊಟ್ಟ ಮೋದಿ! ಪಿಎಂ ಫಾಲೋ ಮಾಡಲು ಹೀಗೆ ಮಾಡಿ…

WhatsApp Channel: ಮೊನ್ನೆಯಷ್ಟೇ ವಾಟ್ಸಾಪ್, ಚಾನೆಲ್ ಎಂಬ ಹೊಸ ಫೀಚರ್ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಫೀಚರ್ ಬಳಸಲಾರಂಭಿಸಿದ್ದಾರೆ.

VISTARANEWS.COM


on

Edited by

Narendra Modi WhatsApp Channel
Koo

ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ(Meta) ಲಾಂಚ್ ಮಾಡಿದ್ದ ವಾಟ್ಸಾಪ್‌ನ ಹೊಸ ಫೀಚರ್ ‘ಚಾನೆಲ್’ (WhatsApp Channel) ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಈಗ ವಾಟ್ಸಾಪ್‌ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್‌ ಚಾನೆಲ್‌ನಲ್ಲಿ ಅಡ್ಮಿನ್‌ಗಳು (WhatsApp Channel Admin), ತಮ್ಮ ಫಾಲೋವರ್ಸ್‌ಗೆ ಪಠ್ಯ, ಟೆಕ್ಸ್ಟ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು.

ಏನಿದು ವಾಟ್ಸಾಪ್ ಚಾನೆಲ್?

ವಾಟ್ಸಾಪ್ ಚಾನೆಲ್, ಇದು ಒನ್‌ ವೇ ಬ್ರಾಡಕಾಸ್ಟರ್ ಸಾಧನವಾಗಿದೆ. ಅಡ್ಮಿನ್‌ಗಳು ಫಾಲೋವರ್ಸ್‌ಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಇದು ಅನುಮತಿಸುತ್ತದೆ. ವ್ಯಕ್ತಿಗತ ಬಳಕೆದಾರರು ತಮ್ಮ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇದರಿಂದ ಸಾಧ್ಯವಾಗಲಿದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗೆ ನಿಮ್ಮ ನಿಯಮಿತ ಚಾಟ್‌ಗಳಿಂದ ಭಿನ್ನವಾಗಿರುವ “ಅಪ್‌ಡೇಟ್‌ಗಳು” ಹೆಸರಿನ ಮೀಸಲಾದ ಟ್ಯಾಬ್ ಮೂಲಕ ವಾಟ್ಸಾಪ್ ಚಾನೆಲ್‌ ಪ್ರವೇಶಿಸಬಹುದಾಗಿದೆ.

ವಾಟ್ಸಾಪ್ ಚಾನೆಲ್ ಕಾರ್ಯ ಹೇಗೆ?

ಚಾನೆಲ್‌ಗಳು ಒನ್‌ವೇ ಬ್ರಾಡ್‌ಕಾಸ್ಟ್ ಆಗಿರುವುದರಿಂದ ಅಡ್ಮಿನ್‌ಗೆ ಮಾತ್ರ ಷೇರ್ ಮಾಡುವ ಹಕ್ಕಿರುತ್ತದೆ. ಬಳಕೆದಾರರು ಎಮೋಜಿಗಳ ಮೂಲಕ ಮಾತ್ರವೇ ಪ್ರತಿಕ್ರಿಯೆ ನೀಡಬಹುದು. ಹಾಗೆಯೇ, ಚಾನೆಲ್ ಪೋಸ್ಟ್‌ಗೆ ಎಷ್ಟು ರಿಯಾಕ್ಷನ್‌ಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬಹುದು.

30 ದಿನಗಳವರೆಗೆ ಮಾತ್ರ ಅಡ್ಮಿನ್‌ಗಳಿಗೆ ತಮ್ಮ ಕಂಟೆಂಟ್ ಅಪ್‌ಡೇಟ್ ಮಾಡುವ ಇಲ್ಲವೇ ಬದಲಾವಣೆ ಮಾಡುವ ಅವಕಾಶವನ್ನು ಈ ಹೊಸ ಫೀಚರ್ ಒದಗಿಸುತ್ತದೆ. ಅದರ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್ ಸರ್ವರ್‌ಗಳಿಂದ ಹಳೆಯ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡುತ್ತದೆ.

ಇದಲ್ಲದೆ, ನೀವು ಚಾಟ್‌ಗಳು ಅಥವಾ ಗ್ರೂಪ್‌ಗಳಿಗೆ ಅಪ್‌ಡೇಟ್ಸ್ ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಒಳಗೊಂಡಿರುತ್ತದೆ. ಇದರಿಂದಾಗಿ ಚಾನೆಲ್‌ನ ಕಂಟೆಂಟ್ ಹುಡುಕುವ ಇತರರಿಗೆ ಸುಲಭ ಪ್ರವೇಶ ಒದಗಿಸಲು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನೂ ಓದಿ: WhatsApp Channels: ವಾಟ್ಸ್ಯಾಪ್‌ ಹೊಸ ಫೀಚರ್‌ ʼಚಾನೆಲ್‌ʼ ಈಗ ಭಾರತದಲ್ಲೂ ಲಭ್ಯ; ಏನಿದು, ಸೇರೋದು ಹೇಗೆ?

ನರೇಂದ್ರ ಮೋದಿ ವಾಟ್ಸಾಪ್ ಚಾನೆಲ್‌ ಫಾಲೋ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ವಾಟ್ಸಾಪ್‌ ಅಪ್‌ಡೇಟ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ಆಗಿರದಿದ್ದರೆ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ, ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಿ. ಇಷ್ಟಾದ ಮೇಲೆ ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತು ಅಪ್‌ಡೇಟ್‌ಗೆ ನ್ಯಾವಿಗೇಟ್ ಮಾಡಿ. ಬಳಿಕ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ, ನೀವು “Find Channels” ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ನಿಮ್ಮ ಮುಂದೆ ಗೋಚರವಾಗುತ್ತದೆ. ಚಾನೆಲ್‌ ಸೇರಲು, ಚಾನೆಲ್ ಮುಂದೆ ಇರುವ plus icon ಮೇಲೆ ಟ್ಯಾಪ್ ಮಾಡಿ. ಮತ್ತೊಂದು ರೀತಿಯಲ್ಲೂ ನೀವು ಚಾನೆಲ್ ಜಾಯಿನ್ ಆಗಬಹುದು. ಇದಕ್ಕಾಗಿ ನೀವು, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಹುಡುಕಾಟ ಐಕಾನ್ ಅನ್ನು ನೀವು ಬಳಸಬಹುದು ಅಥವಾ ಕ್ಲಿಕ್ ಮಾಡಿ ಮತ್ತು ಹುಡುಕಿ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Modi Reservation
ದೇಶ8 mins ago

Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

Mohammed Shami finished with 5 for 51
ಕ್ರಿಕೆಟ್29 mins ago

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

MK Stalin
ದೇಶ33 mins ago

Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ

Chaitra Kundapura
ಉಡುಪಿ54 mins ago

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

women arrested
ದೇಶ1 hour ago

Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್​​

Kumaraswamys three suggestions to Government
ಕರ್ನಾಟಕ2 hours ago

HD Kumaraswamy : ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ ನೀಡಿದ 3 ಸಲಹೆಗಳು

CM Siddaramaiah
ಕರ್ನಾಟಕ2 hours ago

Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ

naveen ul haq and gautam gambhir
ಕ್ರಿಕೆಟ್2 hours ago

‘ಎಂದಿಗೂ ಬದಲಾಗಬೇಡ’ ನವೀನ್ ಉಲ್ ಹಕ್​ಗೆ ಜನ್ಮದಿನದ ಶುಭಾಶಯ ಕೋರಿದ ಗಂಭೀರ್; ಹಾರೈಕೆ ಹಿಂದಿದೆ ನರಿ ಬುದ್ಧಿ

Gautam Adani
ದೇಶ2 hours ago

Gautam Adani : ಅದಾನಿ ಭೇಟಿ ಮಾಡಿದ ಶರದ್​ ಪವಾರ್​; ರಾಹುಲ್​ ಮಾತಿಗೆ ಕಿಮ್ಮತ್ತಿಲ್ಲ ಎಂದ ಬಿಜೆಪಿ!

Cauvry protest in Bangalore
ಕರ್ನಾಟಕ2 hours ago

Cauvery Protest: ಬೆಂಗಳೂರು ಬಂದ್‌ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌