Site icon Vistara News

Meta: ಮೆಟಾದಿಂದಲೂ ಚಾಟ್‌ಜಿಪಿಟಿ ಮಾದರಿಯ ಎಐ ಮಾಡೆಲ್ ಸ್ಯಾಮ್-SAM ಲಾಂಚ್

Meta launches its AI model Meta SAM

ನ್ಯೂಯಾರ್ಕ್, ಅಮೆರಿಕ: ಮೈಕ್ರೋಸಾಫ್ಟ್ (Microsoft) ಚಾಟ್‌ಜಿಪಿಟಿ ಮತ್ತು ಗೂಗಲ್ (Google) ಬಾರ್ಡ್ ಮೂಲಕ ಕೃತಕಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ತಮ್ಮ ಪಾತ್ರವನ್ನು ಮೂಡಿಸುತ್ತಿವೆ. ಈಗ ಈ ಸಾಲಿಗೆ ಫೇಸ್‌ಬುಕ್ ಪೇರೆಂಟ್ ಕಂಪನಿ ಮೆಟಾ ಕೂಡ ಸೇರ್ಪಡೆಯಾಗಿದೆ. ಮೆಟಾ ಸ್ಯಾಮ್(Meta SAM) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ಗೆ ಶುಕ್ರವಾರ ಚಾಲನೆ ನೀಡಿದೆ. ಕಂಪನಿಯ ಸಂಶೋಧನಾ ವಿಭಾಗವು ತಾನು, ಸೆಗ್ಮೆಂಟ್ ಎನಿಥಿಂಗ್ ಮಾಡೆಲ್(SAM) ರಿಲೀಸ್ ಮಾಡಿರುವುದಾಗಿ ಹೇಳಿಕೊಂಡಿದೆ.

ಇಮೇಜ್ ಮತ್ತು ವಿಡಿಯೋಗಳಲ್ಲಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಈ ಸ್ಯಾಮ್ ಹೊಂದಿದೆ. ಅದರ ಟ್ರೈನಿಂಗ್‌ನಲ್ಲಿ ನಿರ್ದಿಷ್ಟ ವಸ್ತುಗಳು ಇರದಿದ್ದರೂ ಅವುಗಳನ್ನು ಗುರುತಿಸಬಲ್ಲದು ಎಂದು ಮೆಟಾ ಹೇಳಿದೆ. ಬಳಕೆದಾರರು ವಸ್ತುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಸೆಲೆಕ್ಟ್ ಮಾಡಬಹುದು ಅಥವಾ ಕ್ಯಾಟ್, ಚೇರ್ ಅಥವಾ ಮತ್ತಿತರ ಪಠ್ಯದ ಮೂಲಕ ವಸ್ತುಗಳನ್ನುಗುರುತಿಸಬಹುದು. ಪ್ರಾತ್ಯಕ್ಷಿಕೆಯಲ್ಲಿ, ಲಿಖಿತ ಪ್ರಾಂಪ್ಟ್‌ಗೆ ಪ್ರತಿಕ್ರಿಯೆಯಾಗಿ ಫೋಟೊದಲ್ಲಿ ಅನೇಕ ಬೆಕ್ಕುಗಳ ಸುತ್ತ ಪೆಟ್ಟಿಗೆಗಳನ್ನು ನಿಖರವಾಗಿ ಸೆಳೆಯಲು ಸ್ಯಾಮ್‌ಗೆ ಸಾಧ್ಯವಾಯಿತು ಎಂದು ಹೇಳಬಹುದು.

ಇತರ ಚಾಟ್‌ಬಾಟ್‌ಗಳಿಗೆ ಹೋಲಿಸಿದರೆ ಸ್ಯಾಮ್ ವಿಭಿನ್ನವಾಗಿದೆ. 11 ಮಿಲಿಯನ್ ಇಮೇಜ್, 1.1 ಬಿಲಿಯನ್ ಮಾಸ್ಕ್ಸ್‌ಗಳನ್ನು ಒಳಗೊಂಡಿದೆ. ಸದ್ಯದ ಮಟ್ಟಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡೇಟಾ ಹೊಂದಿರುವ ಬೇರೆ ಚಾಟ್‌ಬಾಟ್ ಇಲ್ಲ. ಸ್ಯಾಮ್ ಡೇಟಾದಲ್ಲಿ ಪ್ರಾಣಿಗಳು, ಸಸ್ಯಗಳು, ವಾಹನಗಳು, ಉಪಕರಣಗಳು, ಆಹಾರ ಮತ್ತಿತರ ಸೇರಿದಂತೆ ವ್ಯಾಪಕ ಪ್ರಮಾಣದಲ್ಲಿ ವಸ್ತುಗಳು ಮತ್ತು ವಿಭಾಗಗಳನ್ನು ಹೊಂದಿದೆ. ಇದು ದತ್ತಾಂಶ ವೈವಿಧ್ಯತೆ ಮತ್ತು ಸಾಮಾನ್ಯಕರಿಸುವ ಗುಣದಿಂದಾಗಿ ಇತರ ಎಐ ಟೂಲ್‌ಗಳಿಗಿಂತಲೂ ಭಿನ್ನವಾಗಿ ನಿಲ್ಲಲು ಕಾರಣವಾಗಿದೆ.

ಇದನ್ನೂ ಓದಿ: ChatGpt Jobs: ಚಾಟ್‌ಜಿಪಿಟಿಯಿಂದ ಭಾರಿ ಉದ್ಯೋಗ ಸೃಷ್ಟಿ, ಇವರಿಗೆ ಸಿಗಲಿದೆ 2.75 ಕೋಟಿ ರೂ. ಸಂಬಳ

Exit mobile version