Meta: ಮೆಟಾದಿಂದಲೂ ಚಾಟ್‌ಜಿಪಿಟಿ ಮಾದರಿಯ ಎಐ ಮಾಡೆಲ್ ಸ್ಯಾಮ್-SAM ಲಾಂಚ್ - Vistara News

ತಂತ್ರಜ್ಞಾನ

Meta: ಮೆಟಾದಿಂದಲೂ ಚಾಟ್‌ಜಿಪಿಟಿ ಮಾದರಿಯ ಎಐ ಮಾಡೆಲ್ ಸ್ಯಾಮ್-SAM ಲಾಂಚ್

Meta SAM: ಈಗಾಗಲೇ ಮೈಕ್ರೋಸಾಫ್ಟ್ ಓಪನ್‌ಎಐ ಜತೆಗೂಡಿ ಚಾಟ್‌ಜಿಪಿಟಿ ಬಿಡುಗಡೆ ಮಾಡಿದೆ. ಅದೇ ರೀತಿ, ಗೂಗಲ್ ಬಾರ್ಡ್ ಎಂಬ ಮಾಡೆಲ್ ಲಾಂಚ್ ಮಾಡಿದೆ.

VISTARANEWS.COM


on

Meta launches its AI model Meta SAM
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್, ಅಮೆರಿಕ: ಮೈಕ್ರೋಸಾಫ್ಟ್ (Microsoft) ಚಾಟ್‌ಜಿಪಿಟಿ ಮತ್ತು ಗೂಗಲ್ (Google) ಬಾರ್ಡ್ ಮೂಲಕ ಕೃತಕಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ತಮ್ಮ ಪಾತ್ರವನ್ನು ಮೂಡಿಸುತ್ತಿವೆ. ಈಗ ಈ ಸಾಲಿಗೆ ಫೇಸ್‌ಬುಕ್ ಪೇರೆಂಟ್ ಕಂಪನಿ ಮೆಟಾ ಕೂಡ ಸೇರ್ಪಡೆಯಾಗಿದೆ. ಮೆಟಾ ಸ್ಯಾಮ್(Meta SAM) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ಗೆ ಶುಕ್ರವಾರ ಚಾಲನೆ ನೀಡಿದೆ. ಕಂಪನಿಯ ಸಂಶೋಧನಾ ವಿಭಾಗವು ತಾನು, ಸೆಗ್ಮೆಂಟ್ ಎನಿಥಿಂಗ್ ಮಾಡೆಲ್(SAM) ರಿಲೀಸ್ ಮಾಡಿರುವುದಾಗಿ ಹೇಳಿಕೊಂಡಿದೆ.

ಇಮೇಜ್ ಮತ್ತು ವಿಡಿಯೋಗಳಲ್ಲಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಈ ಸ್ಯಾಮ್ ಹೊಂದಿದೆ. ಅದರ ಟ್ರೈನಿಂಗ್‌ನಲ್ಲಿ ನಿರ್ದಿಷ್ಟ ವಸ್ತುಗಳು ಇರದಿದ್ದರೂ ಅವುಗಳನ್ನು ಗುರುತಿಸಬಲ್ಲದು ಎಂದು ಮೆಟಾ ಹೇಳಿದೆ. ಬಳಕೆದಾರರು ವಸ್ತುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಸೆಲೆಕ್ಟ್ ಮಾಡಬಹುದು ಅಥವಾ ಕ್ಯಾಟ್, ಚೇರ್ ಅಥವಾ ಮತ್ತಿತರ ಪಠ್ಯದ ಮೂಲಕ ವಸ್ತುಗಳನ್ನುಗುರುತಿಸಬಹುದು. ಪ್ರಾತ್ಯಕ್ಷಿಕೆಯಲ್ಲಿ, ಲಿಖಿತ ಪ್ರಾಂಪ್ಟ್‌ಗೆ ಪ್ರತಿಕ್ರಿಯೆಯಾಗಿ ಫೋಟೊದಲ್ಲಿ ಅನೇಕ ಬೆಕ್ಕುಗಳ ಸುತ್ತ ಪೆಟ್ಟಿಗೆಗಳನ್ನು ನಿಖರವಾಗಿ ಸೆಳೆಯಲು ಸ್ಯಾಮ್‌ಗೆ ಸಾಧ್ಯವಾಯಿತು ಎಂದು ಹೇಳಬಹುದು.

ಇತರ ಚಾಟ್‌ಬಾಟ್‌ಗಳಿಗೆ ಹೋಲಿಸಿದರೆ ಸ್ಯಾಮ್ ವಿಭಿನ್ನವಾಗಿದೆ. 11 ಮಿಲಿಯನ್ ಇಮೇಜ್, 1.1 ಬಿಲಿಯನ್ ಮಾಸ್ಕ್ಸ್‌ಗಳನ್ನು ಒಳಗೊಂಡಿದೆ. ಸದ್ಯದ ಮಟ್ಟಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡೇಟಾ ಹೊಂದಿರುವ ಬೇರೆ ಚಾಟ್‌ಬಾಟ್ ಇಲ್ಲ. ಸ್ಯಾಮ್ ಡೇಟಾದಲ್ಲಿ ಪ್ರಾಣಿಗಳು, ಸಸ್ಯಗಳು, ವಾಹನಗಳು, ಉಪಕರಣಗಳು, ಆಹಾರ ಮತ್ತಿತರ ಸೇರಿದಂತೆ ವ್ಯಾಪಕ ಪ್ರಮಾಣದಲ್ಲಿ ವಸ್ತುಗಳು ಮತ್ತು ವಿಭಾಗಗಳನ್ನು ಹೊಂದಿದೆ. ಇದು ದತ್ತಾಂಶ ವೈವಿಧ್ಯತೆ ಮತ್ತು ಸಾಮಾನ್ಯಕರಿಸುವ ಗುಣದಿಂದಾಗಿ ಇತರ ಎಐ ಟೂಲ್‌ಗಳಿಗಿಂತಲೂ ಭಿನ್ನವಾಗಿ ನಿಲ್ಲಲು ಕಾರಣವಾಗಿದೆ.

ಇದನ್ನೂ ಓದಿ: ChatGpt Jobs: ಚಾಟ್‌ಜಿಪಿಟಿಯಿಂದ ಭಾರಿ ಉದ್ಯೋಗ ಸೃಷ್ಟಿ, ಇವರಿಗೆ ಸಿಗಲಿದೆ 2.75 ಕೋಟಿ ರೂ. ಸಂಬಳ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

Xiaomi Car: ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ.

VISTARANEWS.COM


on

Xiaomi Car in China
Koo

ಬೀಜಿಂಗ್: ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​​​ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಶಿಯೋಮಿ (Xiaomi Car) ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್​ ಕಾರನ್ನು (EV Car) ಮಾರುಕಟ್ಟೆಗೆ ಇಳಿಸಿದೆ. ಇದು ಮೊಬೈಲ್​ನಂತೆಯೇ (Smart Phoni) ಹಲವಾರು ಫ್ಯಾನ್ಸಿ ಫೀಚರ್​ಗಳನ್ನು ಹೊಂದಿರುವ ಕಾರು ಎಂದು ಹೇಳಲಾಗಿದೆ. ಆದರೆ, ಈ ಕಾರು ಸದ್ಯ ಬಿಡುಗಡೆಗೊಂಡಿರುವುದು ಚೀನಾದಲ್ಲಿ. ಭಾರತಕ್ಕೆ ಬರುವುದೇ ಎಂದು ಗೊತ್ತಿಲ್ಲ.

ಚೀನಾದ ಗ್ರಾಹಕ ಟೆಕ್ ದೈತ್ಯ ಶಿಯೋಮಿ ಗುರುವಾರ ಬೀಜಿಂಗ್ ನಲ್ಲಿ ಈ ಕಾರನ್ನು ಬಿಡುಗಡೆ ಮಾಡಿದೆ. ಅಲ್ಲದೆ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಇಳಿದಿದೆ. ಚೀನಾದ ಇವಿ ವಲಯವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಆ ಕ್ಷೇತ್ರಕ್ಕೆ ಎಂಟ್ರಿ ಪಡೆದಿದೆ. ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ. ಚೀನಾದ ಕಾರು ಮಾರುಕಟ್ಟೆಯ ದೈತ್ಯ ಬಿವೈಡಿ ಮತ್ತು ಎಲೋನ್ ಮಸ್ಕ್ ಅವರ ಟೆಸ್ಲಾಗೆ ಸವಾಲು ಹಾಕುವುದು ಪಕ್ಕಾ.

ಮೂಲ ಎಸ್ ಯು 7 ಮಾದರಿಯ ಬೆಲೆ 215,900 ಯುವಾನ್ (24,90,198 ರೂಪಾಯಿ) ಎಂದು ಲೀ ಜುನ್ ಗುರುವಾರ ಸಂಜೆ ಬೀಜಿಂಗ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ಪೋರ್ಟಿ ಎಸ್ ಯು 7 ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ ಮತ್ತು “ಸೌಂಡ್ ಸಿಮ್ಯುಲೇಶನ್” ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

ಇದು ಕರೋಕೆ ಉಪಕರಣಗಳು ಮತ್ತು ಮಿನಿ-ಫ್ರಿಜ್ ನಂತಹ ಸಾಕಷ್ಟು ಇತರ ಆಕರ್ಷಕ ಫೀಚರ್​ಗಳನ್ನು ಹೊಂದಿದೆ. 500,000 ಯುವಾನ್ ಗಿಂತ ಕಡಿಮೆ ಬೆಲೆಯ “ಅತ್ಯುತ್ತಮವಾಗಿ ಕಾಣುವ, ಅತ್ಯುತ್ತಮವಾಗಿ ಚಲಿಸುವ ಮತ್ತು ಸ್ಮಾರ್ಟ್ ಕಾರು” ಎಂದು ಶಿಯೋಮಿ ಹೇಳಿದೆ. ಈ ಕಾರಿನ ಬೆಲೆಯು ಉಳಿದ ಕಾರಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.

ಟೆಸ್ಲಾಗೆ ಹೋಲಿಕೆ

ಲೀ ಜುನ್ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಂಪನಿಯ ಚೊಚ್ಚಲ ವಾಹನವನ್ನು ಟೆಸ್ಲಾದ ಮಾಡೆಲ್ 3 ಗೆ ಹೋಲಿಸಬಹುದು ಮತ್ತು ಕೆಲವು ಅಂಶಗಳಲ್ಲಿ ಅಮೇರಿಕನ್ ತಯಾರಕರ ಸೆಡಾನ್ ಅನ್ನು ಮೀರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಶಿಯೋಮಿ ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಕಂಪನಿಯಾಗಿದ್ದು, ಆ ವಲಯದಲ್ಲಿ ಅದರ ಅನುಭವವು ಅದರ ಇವಿ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಟುವಾದ ಮಾರುಕಟ್ಟೆ

“ಪ್ರೀಮಿಯಂ ವಿಭಾಗವನ್ನು ಪ್ರವೇಶಿಸುವ ಮೂಲಕ, ಶಿಯೋಮಿ ಟೆಸ್ಲಾ ಮತ್ತು ನಿಯೋದಂತಹ ಸ್ಥಾಪಿತ ಬ್ರಾಂಡ್​ಗ ಳಿಗೆ ಪೈಪೋಟಿ ನೀಡಬಹುದು” ಎಂದು ರೈಸ್ಟಾಡ್ ಎನರ್ಜಿಯ ಹಿರಿಯ ಎಲೆಕ್ಟ್ರಿಕ್ ವಾಹನ ವಿಶ್ಲೇಷಕ ಅಭಿಷೇಕ್ ಮುರಳಿ ಎಎಫ್ಪಿಗೆ ತಿಳಿಸಿದರು.

ಚೀನಾ ವಿಶ್ವದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ದೇಶ. ಹೀಗಾಗಿ 2035 ರ ವೇಳೆಗೆ ಹೆಚ್ಚಿನ ದೇಶೀಯ ಕಾರು ಮಾರಾಟವನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳಿಂದ ತಯಾರಿಸಲು ಯೋಜಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ವಿಶ್ವದ ಅಗ್ರ ಮಾರಾಟಗಾರ ಬಿವೈಡಿ ದಾಖಲೆಯ ವಾರ್ಷಿಕ ಲಾಭವನ್ನು ದಾಖಲಿಸಿದ ಕೆಲವೇ ದಿನಗಳ ನಂತರ ಎಸ್ ಯು 7 ಬಿಡುಗಡೆಯಾಗಿದೆ, ಏಕೆಂದರೆ ಇದು ಆಗ್ನೇಯ ಏಷ್ಯಾದ ದೇಶಗಳಿಗೆ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ಗೆ ವಿಸ್ತರಣೆಗೊಳ್ಳಬಹುದು.

Continue Reading

ದೇಶ

ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

Narendra Nodi: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿರಸ್ಕರಿಸಿದೆ. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

VISTARANEWS.COM


on

narendra modi
Koo

ನವದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ (Narendra Nodi) ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು (Special Protection Group) ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ತಿರಸ್ಕರಿಸಿದೆ.

ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.

“ಈ ಮೂರು ವಾಹನಗಳು ಸಾಮಾನ್ಯವಾಗಿ ಬಳಸಲ್ಪಡದ, ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್‌ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್‌ಜಿಟಿ ಹೇಳಿದೆ.

ʼʼಎಸ್‌ಪಿಜಿ ಅರ್ಜಿಯನ್ನು ತಿರಸ್ಕರಿಸಿದ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರನ್ನೊಳಗೊಂಡ ಎನ್‌ಜಿಟಿ ಪ್ರಧಾನ ಪೀಠವು ಮಾರ್ಚ್ 22ರ ಆದೇಶದಲ್ಲಿ, ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ ತೀರ್ಪು ನೀಡಿದೆʼʼ ಎಂದು ಮೂಲಗಳು ತಿಳಿಸಿವೆ.

ಈ 3 ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿ ಅವಧಿಯನ್ನು ಐದು ವರ್ಷಗಳವರೆಗೆ ಅಂದರೆ 2029ರ ಡಿಸೆಂಬರ್‌ 23ರವರೆಗೆ ವಿಸ್ತರಿಸಲು ಅನುಮತಿ ನೀಡುವಂತೆ ದೆಹಲಿಯ ಸಾರಿಗೆ ಇಲಾಖೆ, ನೋಂದಣಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಎಸ್‌ಪಿಜಿಯು ಎನ್‌ಜಿಟಿಯನ್ನು ಸಂಪರ್ಕಿಸಿತ್ತು.

2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್‌ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ. ಈ ವಾಹನಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ.

ಈ ವಾಹನಗಳನ್ನು 2029ರ ವರೆಗೆ 15 ವರ್ಷಗಳ ಅವಧಿಗೆ ನೋಂದಾಯಿಸಲಾಗಿದೆ. ಆದರೆ ಈ ವಾಹನಗಳು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಸುಪ್ರೀಂ ಕೋರ್ಟ್‌ನ ಆದೇಶದ ಅನುಗುಣವಾಗಿ 2024ರ ಡಿಸೆಂಬರ್‌ನಲ್ಲಿ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: Lok Sabha Election: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ; ಇವರೇ ನೋಡಿ ಆ ಸ್ಟಾರ್‌ಗಳು

ಎಸ್‌ಪಿಜಿ ಸಲ್ಲಿಸಿದ ಮನವಿಯಲ್ಲಿ ಏನಿದೆ?

ನೋಂದಣಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ ಎಸ್‌ಪಿಜಿ ಅದಕ್ಕೆ ಕಾರಣವನ್ನೂ ನೀಡಿದೆ. ʼʼಈ ವಾಹನಗಳು ವಿನ್ಯಾಸ ಮತ್ತು ತಾಂತ್ರಿಕ / ಕಾರ್ಯತಂತ್ರಗಳ ವಿಚಾರದಲ್ಲಿ ಬಹಳ ವಿಶೇಷವಾಗಿವೆ ಮತ್ತು ಈ ಅಗತ್ಯಗಳನ್ನು ಪೂರೈಸುವ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲʼʼ ಎಂದು ಎಸ್‌ಪಿಜಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ 2018ರ ಆದೇಶಕ್ಕೆ ಮೊದಲು ಎನ್‌ಜಿಟಿ 2015ರ ಏಪ್ರಿಲ್‌ನಲ್ಲಿ ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್‌ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Microsoft Windows: ಐಐಟಿ ಪದವೀಧರ ಪವನ್‌ ದಾವುಲೂರಿ ಮೈಕ್ರೋಸಾಫ್ಟ್‌ ವಿಂಡೋಸ್‌ ನೂತನ ಮುಖ್ಯಸ್ಥ

Microsoft Windows: ಪವನ್‌ ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರಂತೆ ಬಿಗ್ ಟೆಕ್ ಕಂಪನಿಗಳ ನಾಯಕತ್ವವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ.

VISTARANEWS.COM


on

Pavan Davuluri Microsoft Windows
Koo

ಹೊಸದಿಲ್ಲಿ: ಐಐಟಿ ಮದ್ರಾಸಿನ (IIT Madras) ಹಳೆಯ ವಿದ್ಯಾರ್ಥಿಯಾಗಿರುವ ಪವನ್ ದಾವುಲೂರಿ (Pavan Davuluri) ಅವರು ʼಮೈಕ್ರೋಸಾಫ್ಟ್ ವಿಂಡೋಸ್ ಆ್ಯಂಡ್‌ ಸರ್ಫೇಸ್‌ʼ ಸಂಸ್ಥೆಯ (Microsoft Windows and Surface) ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಪವನ್‌ ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರಂತೆ ಬಿಗ್ ಟೆಕ್ ಕಂಪನಿಗಳ ನಾಯಕತ್ವವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ. ಮೈಕ್ರೋಸಾಫ್ಟ್‌ ವಿಂಡೋಸ್‌ ತೊರೆದು ಅಮೆಜಾನ್‌ಗೆ ಸೇರಿಕೊಂಡಿರುವ ದೀರ್ಘಕಾಲದ ಮುಖ್ಯಸ್ಥ ಪನೋಸ್ ಪನಾಯ್ ಅವರಿಂದ ದಾವುಲುರಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ದಾವುಲುರಿ ಅವರು ಸರ್ಫೇಸ್ ಗುಂಪನ್ನು ಮುನ್ನಡೆಸಿದ್ದರು. ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಪರಖಿನ್ ಮತ್ತು ಪನಾಯ್ ಅವರು ತೊರೆದ ನಂತರ, ಪವನ್‌ ಅವರು ವಿಂಡೋಸ್ ಮತ್ತು ಸರ್ಫೇಸ್ ವಿಭಾಗಗಳನ್ನು ವಹಿಸಿಕೊಂಡಿದ್ದಾರೆ.

ಮೈಕ್ರೋಸಾಫ್ಟ್‌ನ ಎಕ್ಸ್‌ಪೀರಿಯೆನ್ಸಸ್‌ ಆ್ಯಂಡ್‌ ಡಿವೈಸಸ್‌ ವಿಭಾಗ ಮುಖ್ಯಸ್ಥ ರಾಜೇಶ್ ಝಾ ಅವರು ಈ ಕುರಿತು ಆಂತರಿಕ ನೋಟೀಸ್‌ ನೀಡಿದ್ದಾರೆ. ಸಂಸ್ಥೆಯಲ್ಲಿನ ಹೊಸ ನಾಯಕತ್ವ ಶ್ರೇಣಿಯನ್ನು ವಿವರಿಸಿದ್ದಾರೆ. ಈ ನಿರ್ಧಾರವು ಸಂಸ್ಥೆಯು ಎಐ ಯುಗದಲ್ಲಿ ತನ್ನ ನೂತನ ಗ್ಯಾಜೆಟ್‌ಗಳನ್ನು, ವರ್ಚುವಲ್‌ ಅನುಭವದ ಸಾಧನಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

“ಈ ಬದಲಾವಣೆಯ ಭಾಗವಾಗಿ, ನಾವು ಎಕ್ಸ್‌ಪೀರಿಯೆನ್ಸಸ್‌ ಆ್ಯಂಡ್‌ ಡಿವೈಸಸ್‌ (E+D) ವಿಭಾಗದ ಪ್ರಮುಖ ಭಾಗವಾಗಿ ತಂಡಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ಪವನ್ ದಾವುಲೂರಿ ಅವರು ಈ ತಂಡವನ್ನು ಮುನ್ನಡೆಸುತ್ತಾರೆ. ವಿಂಡೋಸ್ ತಂಡವು ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ”‌ ಎಂದು ಅವರು ಹೇಳಿದರು.

ದಾವುಲುರಿ ಮೈಕ್ರೋಸಾಫ್ಟ್‌ನಲ್ಲಿ 23 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಸರ್ಫೇಸ್‌ಗಾಗಿ ಪ್ರೊಸೆಸರ್‌ಗಳನ್ನು ರಚಿಸಲು ಕ್ವಾಲ್ಕಾಮ್ ಮತ್ತು ಎಎಮ್‌ಡಿಯೊಂದಿಗೆ ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. “ವಿಶ್ವ ದರ್ಜೆಯ ಗ್ರಾಹಕ AI ಉತ್ಪನ್ನಗಳನ್ನು ನಿರ್ಮಿಸಲು ಮೈಕ್ರೋಸಾಫ್ಟ್ AI ದಿಟ್ಟ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಈ ತಂಡಕ್ಕೆ ಸಹಾಯ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ಮೆಮೊ ಹೇಳಿದೆ.

ಗೂಗಲ್ ಡೀಪ್‌ಮೈಂಡ್ ಸಹ-ಸಂಸ್ಥಾಪಕ ಮತ್ತು ಇನ್‌ಫ್ಲೆಕ್ಷನ್ ಎಐ ಸಂಸ್ಥೆಯ ಮಾಜಿ ಸಿಇಒ ಮುಸ್ತಫಾ ಸುಲೇಮಾನ್ ಅವರು ಮೈಕ್ರೋಸಾಫ್ಟ್ ಹೊಸ ಎಐ ತಂಡದ ಸಿಇಒ ಆಗಿ ಸೇರಿದ ಕೆಲವು ದಿನಗಳ ನಂತರ ಈ ಪ್ರಕಟಣೆ ಬಂದಿದೆ.

ಇದನ್ನೂ ಓದಿ: Google Bard: ಜಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ಬಾರ್ಡ್, ಮೈಕ್ರೋಸಾಫ್ಟ್‌ಗೆ ಠಕ್ಕರ್

Continue Reading

ಪ್ರಮುಖ ಸುದ್ದಿ

Swine Fever: ಹಂದಿ ಜ್ವರಕ್ಕೆ ಭಾರತದ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ಐಐಟಿ ಗುವಾಹಟಿ

Swine Fever : ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹಂದಿ ಜಸ್ವರ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ

VISTARANEWS.COM


on

Swine Fever
Koo

ಬೆಂಗಳೂರು: ಹಂದಿಗಳಿಗೆ ಬರುವ ಜ್ವರಕ್ಕೆ (Swine Fever) ಭಾರತದ ಮೊದಲ ಮರುಸಂಯೋಜಕ ಲಸಿಕೆಯನ್ನು ಐಐಟಿ ಗುವಾಹಟಿ (IIT Guwahati) ಅಭಿವೃದ್ಧಿ ಮಾಡಿದೆ. ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆಯನ್ನು ತಯಾರಿಸಲಾಗಿದೆ. ಸಾಂಕ್ರಾಮಿಕ ಹಂದಿ ಜ್ವರವು ರಾಷ್ಟ್ರಾದ್ಯಂತ, ವಿಶೇಷವಾಗಿ ಈಶಾನ್ಯ ಮತ್ತು ಬಿಹಾರ, ಕೇರಳ, ಪಂಜಾಬ್, ಹರಿಯಾಣ ಮತ್ತು ಗುಜರಾತ್​ನಲ್ಲಿ ಹೆಚ್ಚಾಗಿವೆ. ಹೀಗಾಗಿ ಲಸಿಕೆಯನ್ನು ಕಂಡುಕೊಳ್ಳಲಾಗಿದೆ.

ಐಐಟಿ ಗುವಾಹಟಿ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಲಸಿಕೆಯು ಹೊಸ ಮಾದರಿಯ ರಿವರ್ಸ್ ಜೆನೆಟಿಕ್ಸ್ ಮೂಲಕ ತಯಾರಿಸಲಾಗಿದೆ ಎಂದು ಅದು ಹೇಳಿದೆ, “ಈ ವಿಧಾನವು ತ್ವರಿತ ಮತ್ತು ಕಡಿಮೆ ವೆಚ್ಚದ ಪರಿಣಾಮಕಾರಿ ರೋಗನಿರೋಧಕ ಲಸಿಕೆಯ ಅಭಿವೃದ್ದಿಗೆ ಪೂರಕವಾಗಿದೆ.
ಈ ತಂತ್ರಜ್ಞಾನ ಪ್ರಸ್ತುತ ಲಸಿಕೆಯ ಕೊರತೆಯಿರುವ ಭಾರತಕ್ಕೆ ಈ ರೋಗದ ವಿರುದ್ಧದ ಹೋರಾಟದಲ್ಲಿ ವಿನೂತನ ಮೈಲುಗಲ್ಲಾಗಿದೆ ಎಂದು ಐಐಟಿ ಗುವಾಹಟಿ ಹೇಳಿದೆ.

2019ರಲ್ಲಿ ಆರಂಭಗೊಂಡ ಯೋಜನೆ

ಐಐಟಿ ಗುವಾಹಟಿಯ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಮತ್ತು ಗುವಾಹಟಿಯ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರ ನಡುವಿನ ಸಹಯೋಗದ ಪ್ರಯತ್ನಗಳ ಮೂಲಕ ಲಸಿಕೆ ಕೆಲಸವನ್ನು 2018-2019 ರಲ್ಲಿ ಪ್ರಾರಂಭಿಸಲಾಯಿತು. ಅವರ ಸಂಶೋಧನೆಗಳನ್ನು ಎರಡು ಪ್ರಬಂಧಗಳಲ್ಲಿ ಪ್ರಕಟಿಸಲಾಗಿದೆ. ಇದು ಪ್ರೊಸೆಸ್ ಬಯೋಕೆಮಿಸ್ಟ್ರಿ ಮತ್ತು ಆರ್ಕೈವ್ಸ್ ಆಫ್ ವೈರಾಲಜಿ ಜರ್ನಲ್​ನಲ್ಲಿ ಪ್ರಕಟವಾಗಿದೆ.

ಈ ರೋಗವು ಭಾರತದ ಹಂದಿ ಉದ್ಯಮಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಹಾಗೂ ಅದಕ್ಕೆ ಪ್ರಸ್ತುತ, ಯಾವುದೇ ಲಸಿಕೆ ಲಭ್ಯವಿಲ್ಲ.

ರಿವರ್ಸ್ ಜೆನೆಟಿಕ್ಸ್ ಪ್ರಾಣಿ ಮತ್ತು ಮಾನವ ರೋಗಗಳ ಲಸಿಕೆಗಳ ಅಭಿವೃದ್ಧಿಗೆ ಪ್ರಬಲ ವಿಧಾನವಾಗಿದೆ. ಪ್ರಸ್ತುತ, ಲಸಿಕೆ ಪರೀಕ್ಷೆ ಮತ್ತು ವಿಶ್ಲೇಷಣೆ ಪರವಾನಗಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ. ಭಾರತದಲ್ಲಿ, ವಿಶೇಷವಾಗಿ ಈಶಾನ್ಯ ರಾಜ್ಯಗಳ ಹಂದಿಗಳ ಸಂತಾನೋತ್ಪತ್ತಿ ಕೇಂದ್ರಗಳಲ್ಲಿ ಕಾಣಿಸಿಕೊಂಡಿರುವ ಗುಣಪಡಿಸಲಾಗದ ರೋಗದ ಹರಡುವಿಕೆಯನ್ನು ತಡೆಯುವಲ್ಲಿ ಈ ಪ್ರಗತಿ ನಿರ್ಣಾಯಕವಾಗಿದೆ.

Continue Reading
Advertisement
Aadujeevitham box office
ಮಾಲಿವುಡ್9 mins ago

Aadujeevitham Box Office: ಮೊದಲ ದಿನವೇ ಒಳ್ಳೆಯ ಗಳಿಕೆ ಕಂಡ ‘ʻಆಡು ಜೀವಿತಂ’!

gold rate today
ಚಿನ್ನದ ದರ19 mins ago

Gold Rate Today: ಆಕಾಶಕ್ಕೇ ಏರಿದ ಚಿನ್ನದ ಬೆಲೆ! ಇಂದಿನ ಧಾರಣೆ ಹೀಗಿದೆ ನೋಡಿ

attempt to murder case
ಬೆಂಗಳೂರು30 mins ago

Attempt To Murder : ಹಣದಾಸೆಗೆ ವೃದ್ಧ ಚಿಕ್ಕಮ್ಮನ ಕೊಲ್ಲಲು ಮುಂದಾದ ಮಗಳು ಮತ್ತು ಅಳಿಯ

Alia Bhatt hosts Hope Gala
ಬಾಲಿವುಡ್33 mins ago

Alia Bhatt: ಲಂಡನ್‌ನಲ್ಲಿ `ಹೋಪ್ ಗಾಲಾ’ ಹೋಸ್ಟ್‌ ಮಾಡಿದ ಆಲಿಯಾ; ಏನಿದರ ಉದ್ದೇಶ?

RCB
ಕ್ರೀಡೆ37 mins ago

RCB vs KKR: ಕೆಕೆಆರ್​ ಸವಾಲು ಸುಲಭದ್ದಲ್ಲ; ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ದಾಖಲೆ ಹೇಗಿದೆ?

Thalaivar 171 Rajinikanth first look
ಕಾಲಿವುಡ್38 mins ago

Thalaivar 171: ರಜನಿಕಾಂತ್‌ 171ನೇ ಸಿನಿಮಾ ಪೋಸ್ಟರ್‌ ಔಟ್‌; ʻರೋಲೆಕ್ಸ್‌ʼ ಸೂರ್ಯ ಎಂಟ್ರಿ ಆಗ್ತಾರಾ?

Narendra Modi And Bill Gates
ದೇಶ48 mins ago

Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ

Lok Sabha Election 2024 JDS finalised candidates for 3 constituency
ಪ್ರಮುಖ ಸುದ್ದಿ49 mins ago

HD Deve Gowda: ನಾಲ್ಕು ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ದೇವೇಗೌಡರು; ಮಾಸ್ಟರ್‌ ಪ್ಲಾನ್‌ ಏನು?

Sania Mirza
ಕ್ರೀಡೆ1 hour ago

Sania Mirza: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಸಾನಿಯಾ ಮಿರ್ಜಾ?; ಈ ಪಕ್ಷದಿಂದ ಆಫರ್​

Savadatti Yallamma
ಕರ್ನಾಟಕ1 hour ago

ಬರದ ಮಧ್ಯೆಯೂ ಭರ್ಜರಿ ಕಾಣಿಕೆ; ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 11 ಕೋಟಿ ರೂ. ಸಂಗ್ರಹ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202422 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202424 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌