Site icon Vistara News

Microsoft | ಒಂದು ತಿಂಗಳಲ್ಲಿ ಒಂದು ಲಕ್ಷ ಭಾರತೀಯ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್ ತರಬೇತಿ

Microsoft @ Training Developers

ಬೆಂಗಳೂರು: ಐಟಿ ಕಂಪನಿ ಮೈಕ್ರೋಸಾಫ್ಟ್ (Microsoft) ತನ್ನ ಪ್ಯಾನ್-ಇಂಡಿಯಾ “ಫ್ಯೂಚರ್ ರೆಡಿ ಚಾಂಪಿಯನ್ಸ್ ಆಫ್ ಕೋಡ್” ಕಾರ್ಯಕ್ರಮದ ಅಡಿಯಲ್ಲಿ ಒಂದು ತಿಂಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ತರಬೇತಿ ನೀಡಿ ಪ್ರಮಾಣೀಕರಿಸಲಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.

ಒಂದು ತಿಂಗಳ ಅವಧಿಯ ಈ ಕಾರ್ಯಕ್ರಮವನ್ನು ಮೈಕ್ರೋಸಾಫ್ಟ್‌ನ ಗ್ರಾಹಕರು ಮತ್ತು ಆಕ್ಸೆಂಚರ್, HCLTech, Icertis, Infosys, InMobi, OYO, PayU, TCS, Tech Mahindra, udaan, VerSe Innovation, Wibmo (A PayU ಕಂಪನಿ) ಮತ್ತು Wipro ಸೇರಿದಂತೆ ಹಲವು ಪಾಲುದಾರರನ್ನು ಹೊಂದಿದೆ. ತಮ್ಮ ಡೆವಲಪರ್ ತಂಡಗಳ ನಡುವೆ ಅತಿ ವೇಗದ ಅಭಿವೃದ್ಧಿಗೆ ಗಮನ ಕೊಡುವುದಾಗಿ ಕಂಪನಿಯು ಹೇಳಿಕೊಂಡಿದೆ.

ಕಾರ್ಯಕ್ರಮದ ಭಾಗವಾಗಿ, ಡೆವಲಪರ್‌ಗಳಿಗೆ ಕಲಿಯಲು, ಅಭ್ಯಾಸ ಮಾಡಲು, ಹೊಸದನ್ನು ತಿಳಿದುಕೊಳ್ಳಲು ಅಥವಾ Microsoft ಕ್ಲೌಡ್ ಸರ್ಟಿಫಿಕೇಟ್ ಗಳನ್ನು ನವೀಕರಿಸಲು ಆನ್‌ಲೈನ್‌ನಲ್ಲಿ ಸಂಪನ್ಮೂಲಗಳನ್ನು ಒದಗಿಸಲಾಗುತ್ತದೆ.

ಮೈಕ್ರೋಸಾಫ್ಟ್ ಇಂಡಿಯಾದ ಕಸ್ಟಮರ್ ಸಕ್ಸಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಅಪರ್ಣಾ ಗುಪ್ತಾ, “ಭಾರತವು ವೇಗವಾಗಿ ಬೆಳೆಯುತ್ತಿರುವ ಡೆವಲಪರ್ ಸಮುದಾಯಗಳನ್ನು ಹೊಂದಿದೆ. ಇದು ನಾವೀನ್ಯತೆಯ ಶಕ್ತಿ ಕೇಂದ್ರವಾಗಿದೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡುವ ತಂತ್ರಜ್ಞಾನವನ್ನು ತಯಾರಿಸಲು ಡೆವಲಪರ್‌ಗಳ ಸೃಜನಶೀಲತೆ, ನಾವೀನ್ಯತೆ ಮತ್ತು ಉತ್ಸಾಹವನ್ನು ಮೈಕ್ರೋಸಾಫ್ಟ್ ಗುರುತಿಸುತ್ತದೆ.

ಈ ಕಾರ್ಯಕ್ರಮದೊಂದಿಗೆ ನಾವು ಡೆವಲಪರ್‌ಗಳು ಮತ್ತು ಅಕಾಡೆಮಿಗಳನ್ನು ಪ್ಲಾಟ್‌ಫಾರ್ಮ್‌ಗಳು ಮತ್ತು ಪರಿಕರಗಳೊಂದಿಗೆ ಉನ್ನತ ಕೌಶಲ್ಯ ಮತ್ತು ಸಬಲೀಕರಣದ ಮೂಲಕ ಭವಿಷ್ಯಕ್ಕೆ ತಯಾರು ಮಾಡುತ್ತಿದ್ದೇವೆ. ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡೆವಲಪರ್ ಸಮುದಾಯವನ್ನು ನಿರ್ಮಿಸಲು ಸಮಾನವಾಗಿ ಪ್ರೇರೇಪಿಸಲ್ಪಟ್ಟ ಮತ್ತು ಬದ್ಧವಾಗಿರುವ ಪಾಲುದಾರರ ಬಲವಾದ ಗುಂಪಿನೊಂದಿಗೆ ಕೈಜೋಡಿಸಿ ಹೆಚ್ಚಿನದನ್ನು ಸಾಧಿಸಲು ನಾವು ಸಂತೋಷಪಡುತ್ತೇವೆ ” ಎಂದು ಗುಪ್ತಾ ಹೇಳಿದರು.

ಇದನ್ನೂ ಓದಿ | Satya Nadella | ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾಡೆಳ್ಳಾಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

Exit mobile version