ನವದೆಹಲಿ: ಭಾರತೀಯ ಉನ್ನತ ಶಿಕ್ಷಣವು ಈ ವರ್ಷ ಎರಡು ಪ್ರಮುಖ ಉಪಕ್ರಮಗಳಿಗೆ ಸಾಕ್ಷಿಯಾಗಲಿದೆ. ಭಾರತದ ಮೊದಲ ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯ (National Digital University) ಹಾಗೂ ಹೈಯರ್ ಎಜುಕೇಷನ್ ಕಮಿಷನ್(HECI) ಈ ವರ್ಷವೇ ಆರಂಭವಾಗಲಿವೆ.
ಉನ್ನತ ಶಿಕ್ಷಣ ಸಂಸ್ಥೆಗಳು ಅಥವಾ ಡಿಜಿಟಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆಯಲು ಉನ್ನತ ಶಿಕ್ಷಣಾರ್ಥಿಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತದೆ. ಉದಯೋನ್ಮುಖ ಕ್ಷೇತ್ರಗಳಲ್ಲಿನ ಉದ್ಯೋಗಶೀಲತೆಯನ್ನು ಹೆಚ್ಚಿಸುವಲ್ಲಿ ಡಿಜಿಟಿಲ ವಿಶ್ವವಿದ್ಯಾಲಯದ ಆರಂಭವು ಪ್ರಮುಖ ಹೆಜ್ಜೆಯಾಗಿದೆ.
ಈ ಡಿಜಿಟಲ್ ವಿಶ್ವ ವಿದ್ಯಾಲಯವು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಡಿಜಿಟಲ್ ಕಂಟೆಂಟ್ ಅನ್ನು ಸ್ಟಡಿ ವೆಬ್ಸ್ ಆಫ್ ಆ್ಯಕ್ಟಿವ್-ಲರ್ನಿಂಗ್ ಫಾರ್ ಯಂಗ್ ಅಸ್ಪೈರಿಂಗ್ ಮೈಂಡ್ಸ್(ಸ್ವಯಂ) ವೇದಿಕೆ ನೀಡಲಾಗುತ್ತದೆ. ಇದೇ ವೇಳೆ, ಸಮರ್ಥ್ ವೇದಿಕೆಯ ಮೂಲಕ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಕಾರ್ಯವನ್ನೂ ಖಾತ್ರಿಗೊಳಿಸಲಾಗುತ್ತದೆ.
ಇದನ್ನೂ ಓದಿ | ವಿಶ್ವವಿದ್ಯಾಲಯ ಸಭೆಗಳು ಇನ್ನು ಖುಲ್ಲಂ ಖುಲ್ಲಾ: ಎಲ್ಲವನ್ನೂ ನೇರ ಪ್ರಸಾರ ಮಾಡಲು ಸರ್ಕಾರ ನಿರ್ಧಾರ