Site icon Vistara News

New Arrival | ಗೇಮಿಂಗ್‌ ಪ್ರಿಯರಿಗಾಗಿ ಬರಲಿದೆ Motorola ಎಡ್ಜ್‌ 30 ಫೋನ್‌

ಮೇ 12ಕ್ಕೆ ಮೊಟೊರೊಲಾ ಹೊಸ ಮೊಬೈಲ್‌ ಮಾರುಕ್ಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ. ಮೊಟೊರೊಲಾ ಎಡ್ಜ್‌ 30 (Motorola Edge 30) ಎಂಬ ಹೊಸ ಫೋನ್‌ ಬಿಡುಗಡೆಗೊಳ್ಳಲ್ಲಿದ್ದು ಈಗಾಗಲೇ ಗ್ರಾಹಕರಲ್ಲಿ ಹಲವು ಕುತೂಹಲ ಮೂಡಿಸಿದೆ. ಈ ನೂತನ ಫೋನ್‌ನ ಮೊತ್ತ ಅಂದಾಜು ₹36,000 ಇರಬಹುದು ಎಂದು ತಿಳಿಸಲಾಗಿದೆ.

ಈ ಹಿಂದೆ ಮೊಟೊರೊಲಾ ವತಿಯಿಂದ ಎಡ್ಜ್‌ 30 ಪ್ರೋ ಎಂಬ ಫೋನ್‌ ಬಿಡುಗಡೆಯಾಗಿತ್ತು. ಎಡ್ಜ್‌ 30 ಕೂಡ ಸರಿಸುಮಾರು ಈ ಫೋನಿನ ಫೀಚರ್‌ಗಳನ್ನೇ ಹೊಂದಿದ್ದು, ಅದರ ನವೀಕರಿಸಿದ ವರ್ಷನ್‌ ಎಂದು ಹೇಳಲಾಗಿದೆ. ಆದರೆ ಈ ಫೋನ್‌ ಈ ವಿಬಾಗದಲ್ಲಿ ಲಭ್ಯವಿರುವ ಅತ್ಯಂತ ತೆಳ್ಳಗಿರುವ ಹಾಗೂ ಹಗುರವಾದ ಫೋನ್‌ ಎಂದು ಹೇಳಲಾಗಿದೆ. ಹಾಗೂ ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಬಿಡುಗಾಡಗೊಲ್ಳುವ ಸಾಧ್ಯತೆಯಿದೆ.

ಫೋನನ್ನು ಹಗುರಗೊಲಿಸಲು ಹಾಗೂ ಸಪೂರವಾಗಿಸಲು ಪ್ಲಾಸ್ಟಿಕ್‌ನಂತಹ ಹಗುರ ವಸ್ತವನ್ನು ಬಲಸಿ ಈ ಫೋನ್‌ನ್ನು ತಯಾರಿಸಿರಬಹುದು ಎಂದು ಹೇಳಲಾಗುತ್ತಿದೆ.

ಫೀಚರ್ಸ್‌ ಏನಿರಬಹುದು?

  1. Performance: ಮೊಟೊರೊಲಾ ಎಡ್ಜ್‌ 30 ಫೋನ್‌ನಲ್ಲಿ ಮುಖ್ಯವಾಗಿ ಸ್ನಾಪ್‌ಡ್ರಾಗನ್‌ 778G+(Snapdragon 778G+) ಚಿಪ್‌ ಅಳವಡಿಸಲಾಗಿದೆ. ಹಾಗಾಗಿ ಇದು ಮುಖ್ಯವಾಗಿ ಗೇಮಿಂಗ್‌ ಆಸಕ್ತರು ಗಮನಿಸುವ ಸಂಗತಿ. ಗೇಮಿಂಗ್‌ಗೆ ಹೆಚ್ಚಿನ ಅನುಕೂಲ ಈ ಫೋನ್‌ನಲ್ಲಿದೆ.
  2. Dislplay: ಈ ಫೋನ್‌ನ ಡಿಸ್‌ಪ್ಲೇ ಕೂಡ ಕಣ್ಣಿಗೆ ಅನುಕೂಲವಾಗುವಂತೆ ಮಾಡಲಾಗಿದೆ. 6.7 ಇಂಚ್‌ನ ಫುಲ್‌ ಹೈ ಡೆಫಿನಿಷನ್‌ ಹಾಗೂ OLED ಡಿಸ್‌ಪ್ಲೇ ನೀಡಲಾಗಿದೆ. ಇದು ಕಣ್ಣಿಗೆ ತೊಂದರೆ ಆಗದಂತೆ ಕೆಲಸ ಮಾಡುತ್ತದೆ. ಇದರ ಜತೆಗೆ 144Hz ರಿಫ್ರೆಶ್‌ ರೇಟ್‌ ಹೊಂದಿದೆ. ಇದರಿಂದ ನೀವು ಫೋನ್‌ ಬಳಸುವಾಗ ಒಂದು ಆಪ್‌ ಓಪನ್‌ ಮಾಡುವಾಗ ಅಥವಾ ಕ್ಲೋಸ್‌ ಮಾಡುವಾಗ ವಿಳಂಬವಾದ ಅನುಭವ ಆಗುವುದಿಲ್ಲ.
  3. OS: ಈ ಫೋನ್‌ನಲ್ಲಿ ಆಂಡ್ರಾಯ್ಡ್‌ 12 ಜತೆಗೆ ಮೊಟೊರೊಲಾದ MyUX ಎಂಬ ಆಪರೇಟಿಂಗ್‌ ಸಿಸ್ಟಮ್‌ ಕೂಡ ಅಳವಡಿಸಲಾಗಿದೆ. ಇದು ಕಳೆದ ಮೊಟೊರೊಲಾ ಎಡ್ಜ್‌ 30 ಪ್ರೋ ಅಲ್ಲಿದ್ದ ಆಪರೇಟಿಂಗ್‌ ಸಿಸ್ಟಮ್‌ ಆಗಿದೆ.
  4. Camera: ಈ ಫೋನ್‌ನ ಕ್ಯಾಮೆರಾ ಮೊಟೊರೊಲಾ ಎಡ್ಜ್‌ 30 ಪ್ರೋ ಮಾದರಿಯಲ್ಲೇ ಅಳವಡಿಸಲಾಗಿದೆ. ಮುಖ್ಯ ಕ್ಯಾಮೆರಾ ಹಾಗೂ ಅಲ್ಟ್‌ರಾ ವೈಡ್‌ ಕ್ಯಾಮೆರಾ 50ಮೆಗಾಪಿಕ್ಸಲ್‌ ಕ್ಯಾಮೆರಾಗಳು. ಇನ್ನು ಪೋರ್ಟ್ರೇಟ್‌ನಲ್ಲಿ 2 ಮೆಗಾಪಿಕ್ಸಲ್‌ ಡೆಪ್ತ್‌ ನೀಡಲಾಗಿದೆ. ಅಲ್ಲದೆ, ಸೆಲ್ಫಿ ತೆಗೆಯಲು ಮುಂದಿರುವ ಕ್ಯಾಮೆರಾಗೆ 32 ಮೆಗಾಪಿಕ್ಸಲ್‌ ನೀಡಲಾಗಿದೆ.
  5. Battery: ಮೊಟೊರೊಲಾ ಎಡ್ಜ್‌ 30 ಫೊನ್ 4020mAh ಬ್ಯಾಟರಿ ಹೊಂದಿದೆ.‌ ಈ ಬ್ಯಟರಿಯ ಶಕ್ತಿಯಲ್ಲಿ ಒಮ್ಮೆ ಫೋನ್‌ನ್ನು ಪೋರ್ತಿಯಾಗಿ ಚಾರ್ಜ್‌ ಮಾಡಿದರೆ ಸುಮಾರು 38 ಗಂಟಗಳ ಕಾಲ ಬಳಸಬಹುದು. ಅದು ಫೋನ್‌ನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಆಧಾರದ ಮೇಲಿದೆ. ಈ ಫೊನ್‌ ವೇಗವಾಗಿ ಚಾರ್ಜ್‌ ಮಾಡಲು 33W ಚಾರ್ಜಿಂಗ್‌ ಕಿಟ್‌ ನೀಡಲಾಗಿದೆ.

ಇನ್ನು ಈ ಫೊನ್‌ನ ಮೊತ್ತದ ವಿಭಾಗದ ಇತರ ಫೋನ್‌ಗಳಾದ ಸ್ಯಾಮ್‌ಸಂಗ್‌ ಹಾಗೂ ರಿಯಲ್‌ಮಿ ಇನ್ನೂ ಹೆಚ್ಚಿನ ಫೀಚರ್‌ಗಳಿರುವ ಫೋನ್‌ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಹಾಗಾಗಿ ಮೊಟೊರೊಲಾ ಅವುಗಳಿಗೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡಬಹುದು ಎಂಬ ಪ್ರಶ್ನೆ ಉಳಿಯುತ್ತದೆ.

ಇದನ್ನೂ ಓದಿ: ನಿಮ್ಮ ಟ್ವೀಟ್‌ ಈಗ ನಿಮ್ಮವರು ಮಾತ್ರ ನೋಡಬಹುದು!

Exit mobile version