ಬೆಂಗಳೂರು: ಜಾಗತಿಕ ಪ್ರೀಮಿಯಂ ತಂತ್ರಜ್ಞಾನ ಬ್ರ್ಯಾಂಡ್ ಆದ ಒನ್‌ಪ್ಲಸ್ (OnePlus) ಇದೀಗ ಭಾರತದಲ್ಲಿ ಸ್ಟ್ಯಾಂಡ್ ಅಲೋನ್ 5G ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ತರಲು ಅತಿದೊಡ್ಡ ಡಿಜಿಟಲ್ ಸೇವೆಗಳ ಸಂಸ್ಥೆ ಜಿಯೋ (Jio) ಜತೆ ಸಹಯೋಗ ಹೊಂದಿದೆ. ಈ ಕಾರಣದಿಂದಾಗಿ ಎಲ್ಲ ಒನ್‌ಪ್ಲಸ್ 5G (OnePlus 5G) ಸಾಧನಗಳು ಜಿಯೋ ಟ್ರೂ 5G (Jio True 5G) ತಂತ್ರಜ್ಞಾನದಿಂದ ಚಾಲಿತ ಆಗುತ್ತವೆ. ಡಿಸೆಂಬರ್ 1ರಿಂದ ಜಿಯೋ ಟ್ರೂ 5G ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿರುವ ಒನ್‌ಪ್ಲಸ್ ಸಾಧನಗಳು ಇತ್ತೀಚಿನ ಒನ್‌ಪ್ಲಸ್ 10 ಸರಣಿ, ಒನ್‌ಪ್ಲಸ್ 9R, ಒನ್‌ಪ್ಲಸ್ 8 ಸರಣಿಗಳು ಜತೆಗೆ ನಾರ್ಡ್, ನಾರ್ಡ್ 2T, ನಾರ್ಡ್ 2, ನಾರ್ಡ್ CE, ನಾರ್ಡ್ CE 2 ಮತ್ತು ನಾರ್ಡ್ CE 2 ಲೈಟ್ ಅನ್ನು ಒಳಗೊಂಡಿವೆ. ಅದೇ ರೀತಿ ಒನ್‌ಪ್ಲಸ್ 9 ಪ್ರೊ, ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9RT ಕೂಡ ಶೀಘ್ರದಲ್ಲೇ ಜಿಯೋ ಟ್ರೂ 5G ನೆಟ್‌ವರ್ಕ್‌ಗೆ ಸಂಪರ್ಕ ಪಡೆಯುತ್ತವೆ(OnePlus and Jio).
ಜಿಯೋ ಮತ್ತು ಒನ್‌ಪ್ಲಸ್ ತಂಡಗಳು ಭಾರತೀಯ ಗ್ರಾಹಕರಿಗೆ 5G ತಂತ್ರಜ್ಞಾನ ಹೆಚ್ಚು ಸಂಪರ್ಕಿಸುವಂತೆ ಮಾಡಲು ಬ್ಯಾಕ್‌ಎಂಡ್‌ನಲ್ಲಿ ಸಕ್ರಿಯವಾಗಿ ಒಟ್ಟಿಗೆ ಕೆಲಸ ಮಾಡುತ್ತಿವೆ ಮತ್ತು ಉತ್ಪನ್ನ ಪೋರ್ಟ್‌ಫೋಲಿಯೊದಾದ್ಯಂತ ತಮ್ಮ 5G ತಂತ್ರಜ್ಞಾನ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.
ಡಿಸೆಂಬರ್ 13 ರಿಂದ ಡಿಸೆಂಬರ್ 18 ರವರೆಗೆ ಒನ್‌ಪ್ಲಸ್ ವಾರ್ಷಿಕೋತ್ಸವದ ಮಾರಾಟದ ಅವಧಿಯಲ್ಲಿ ಅರ್ಹ ಒನ್‌ಪ್ಲಸ್ ಮತ್ತು ಜಿಯೋ 5G ಬಳಕೆದಾರರಿಗೆ ಒದಗಿಸಲಾಗುವ ರೂ. 10,800 ಮೌಲ್ಯದ ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಗ್ರಾಹಕರು ಆನಂದಿಸಬಹುದು. ಮೊದಲ 1000 ಮಂದಿಗೆ ಹೆಚ್ಚುವರಿಯಾಗಿ ರೂ. 1499 ಮೌಲ್ಯದ ಪೂರಕ ರೆಡ್ ಕೇಬಲ್ ಕೇರ್ ಯೋಜನೆ ಮತ್ತು ರೂ. 399 ಮೌಲ್ಯದ ಜಿಯೋ ಸಾವನ್ ಪ್ರೊ ಯೋಜನೆ ಪಡೆಯುತ್ತಾರೆ.
ಈ ಬೆಳವಣಿಗೆ ಬಗ್ಗೆ ಒನ್‌ಪ್ಲಸ್ ಇಂಡಿಯಾ ಸಿಇಒ ಮತ್ತು ಭಾರತದ ವಲಯದ ಮುಖ್ಯಸ್ಥ ನವನಿತ್ ನಕ್ರಾ ಅವರು ಮಾತನಾಡಿ, “ಭಾರತದಲ್ಲಿರುವ ನಮ್ಮ ಸಮುದಾಯಕ್ಕೆ 5G ತಂತ್ರಜ್ಞಾನವನ್ನು ತರಲು ಜಿಯೋ ತಂಡದೊಂದಿಗೆ ಸಹಯೋಗ ಹೊಂದಲು ನಾವು ಸಂತೋಷಪಡುತ್ತೇವೆ. 5G ತಂತ್ರಜ್ಞಾನದೊಂದಿಗೆ, ಬಳಕೆದಾರರು ತಮ್ಮ ದೈನಂದಿನ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ಅವರು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಮೂಲಕ ನಿಜವಾದ ತಡೆರಹಿತ, ವೇಗದ ಇಂಟರ್‌ನೆಟ್ ಅನುಭವವನ್ನು ಆನಂದಿಸುತ್ತಾರೆ. 5G ಜಾರಿಗೆ ಬರುವುದರೊಂದಿಗೆ ಒನ್‌ಪ್ಲಸ್ 5G ಸಂಶೋಧನೆ ಮತ್ತು ಅಭಿವೃದ್ಧಿ (R&D)ಯಲ್ಲಿ ನಾಯಕತ್ವ ಪ್ರದರ್ಶಿಸುವುದನ್ನು ಮುಂದುವರಿಸಿದೆ ಮತ್ತು ಜಗತ್ತಿನಾದ್ಯಂತ ಗ್ರಾಹಕರಿಗೆ 5G ಸಾಧನಗಳನ್ನು ತರಲು ಉದ್ಯಮದಲ್ಲಿ ವೇಗವಾಗಿ ಮುನ್ನಡೆದಿದೆ. ಒನ್‌ಪ್ಲಸ್ 2020ರಲ್ಲಿ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಮೊದಲ ಶ್ರೇಣಿಯನ್ನು ಬಿಡುಗಡೆ ಮಾಡಿತು, ಏಪ್ರಿಲ್ 2020ರಲ್ಲಿ ಒನ್‌ಪ್ಲಸ್ 8 ಸರಣಿಯೊಂದಿಗೆ. ಅಂದಿನಿಂದ, ನಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳು 5G-ಸಿದ್ಧವಾಗಿಯೇ ಬರುತ್ತಿವೆ,” ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಸುನಿಲ್ ದತ್, “ಭಾರತದಲ್ಲಿ ಗಟ್ಟಿಯಾದ 5G ಸಾಧನ ಪರಿಸರ ವ್ಯವಸ್ಥೆಯನ್ನು ಜಿಯೋಗೆ ಸಕ್ರಿಯಗೊಳಿಸಲು ನಮ್ಮೊಂದಿಗೆ ಕೆಲಸ ಮಾಡಿದ ಒನ್‌ಪ್ಲಸ್ ಕಾರ್ಯತಂತ್ರದ ಪಾಲುದಾರರಾಗಿರಲು ನಾವು ಸಂತೋಷಪಡುತ್ತೇವೆ. 5G ಸ್ಮಾರ್ಟ್‌ಫೋನ್‌ನ ನೈಜ ಶಕ್ತಿಯನ್ನು ಜಿಯೋದಂಥ ನಿಜವಾದ 5G ನೆಟ್‌ವರ್ಕ್‌ನಿಂದ ಮಾತ್ರ ಬಿಡುಗಡೆ ಮಾಡಬಹುದು, ಅದು ಸ್ವತಂತ್ರ 5G ನೆಟ್‌ವರ್ಕ್‌ನಂತೆ ರೂಪಿಸಿದೆ. ಇದು ಈ ರೀತಿಯ ಅತ್ಯಾಧುನಿಕ ನೆಟ್‌ವರ್ಕ್ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | Jio True | ಆರೋಗ್ಯ ಕ್ಷೇತ್ರದ ಆಧುನಿಕ ಪ್ರಗತಿಗಾಗಿ ಜಿಯೋ ಟ್ರೂ 5G- ಐಎಲ್‌ಬಿಎಸ್ ಪಾಲುದಾರಿಕೆ