Site icon Vistara News

ಜನವರಿ 16ಕ್ಕೆ Oppo A78 5G ಲಾಂಚ್! ಬೆಲೆ ಎಷ್ಟು, ಏನೆಲ್ಲ ವಿಶೇಷತೆಗಳಿವೆ?

Oppo A78 5G @ India

ನವದೆಹಲಿ: ಈಗಾಗಲೇ ಮಲೇಷ್ಯಾ ಮಾರುಕಟ್ಟೆಯನ್ನು ಪ್ರವೇಶಿಸಿರುವ ಒಪ್ಪೋ ಎ78 5ಜಿ (Oppo A78 5G) ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಕಂಪನಿಯು ಟ್ವೀಟ್ ಮಾಡಿ, ಈ ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಜನವರಿ 16ರಂದು ಒಪ್ಪೋ ಎ78 5ಜಿ ಸ್ಮಾರ್ಟ್‌ಫೋನ್ ಭಾರತೀಯ ಗ್ರಾಹಕರಿಗೆ ದೊರೆಯಲಿದೆ.

ಕಂಪನಿಯು ಟ್ವಿಟರ್ ಮೂಲಕ ಬಿಡುಗಡೆಯ ಮಾಹಿತಿಯನ್ನು ಖಚಿತಪಡಿಸಿದೆಯಾದರೂ, ಫೋನ್ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಇತ್ತೀಚಿನ ಕೆಲವು ಮಾಹಿತಿಗಳು ಪ್ರಕಾರ, ಈ ಫೋನ್ ಬೆಲೆ ಅಂದಾಜು 19 ಸಾವಿರ ರೂ. ಇರಬಹುದು ಎಂದು ಹೇಳಲಾಗುತ್ತಿದೆ. ತನ್ನದೇ ವಿಶಿಷ್ಟ ಫೀಚರ್ಸ್ ಮೂಲಕ ಈ ಫೋನ್ ಗಮನ ಸೆಳೆಯುತ್ತಿದೆ.

ಒಪ್ಪೋ ಎ78 5ಜಿ ಸ್ಮಾರ್ಟ್‌ಫೋನ್, 6.56-ಇಂಚಿನ HD+ (720×1,1612 ಪಿಕ್ಸೆಲ್‌ಗಳು) LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 90Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. MediaTek Dimensity 700 SoC ಇದ್ದು, Mali-G57 MC2 GPU ಜತೆ ಸಂಯೋಜನೆಗೊಂಡಿದೆ. 8ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ದೊರೆಯಲಿದೆ. ಇದಕ್ಕೆ ಹೆಚ್ಚುವರಿಯಾಗಿ ಬಳಕೆದಾರರು 8ಜಿಬಿ ವರೆಗೆ ವರ್ಚವಲ್ ಆಗಿ RAM ಹೆಚ್ಚಿಸಿಕೊಳ್ಳಬಹುದು.

ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳ ಸೆಟ್‌ಅಪ್ ಇದೆ. ಮೊದಲನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಮತ್ತೊಂದು 2 ಮೆಗಾ ಪಿಕ್ಸೆಲ್ ಕ್ಯಾಮೆರಾ. ಮುಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಲೆನ್ಸ್ ನೀಡಲಾಗಿದೆ. ಈ ಎರಡೂ ಕ್ಯಾಮೆರಾಗಳು 30fps ದರದಲ್ಲಿ ಫುಲ್ ಎಚ್‌ಡಿ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿವೆ. 33W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ನೀವು ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದು. ಸ್ಮಾರ್ಟ್‌ಫೋನ್ 16 ಗಂಟೆಗಳವರೆಗೆ ತಡೆರಹಿತ ವೀಡಿಯೊ ಸ್ಟ್ರೀಮಿಂಗ್ ಬೆಂಬಲವನ್ನು ಒದಗಿಸುತ್ತದೆ ಎದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ | Redmi Note 12 | ರೆಡ್‌ಮಿ ನೋಟ್ 12 ಮತ್ತು ಪ್ರೋ ಮಾಡೆಲ್ಸ್ ಸ್ಮಾರ್ಟ್‌ಫೋನ್ ಸೇಲ್ ಶುರು

Exit mobile version