ನವ ದೆಹಲಿ: ಬಹು ನಿರೀಕ್ಷೆಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾಗಿದ್ದು, ಮೊದಲನೇ ದಿನವೇ ಫೋಕೋ ಎಂ4 5ಜಿ (POCO M4 5g), ಪೋಕೋ ಎಕ್ಸ್4 ಪ್ರೋ 5ಜಿ, ಪೋಕೋ ಎಫ್4 5ಜಿ, ಪೋಕೋ ಎಂ4 ಪ್ರೋ 5ಜಿ ಮತ್ತು ಪೋಕೋ ಎಂ5 ಸ್ಮಾರ್ಟ್‌ಫೋನ್ ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ದೊರೆಯುತ್ತಿವೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೇ, ಲ್ಯಾಪ್‌ಟ್ಯಾಪ್, ಟಿವಿ ಮತ್ತಿತರ ಎಲೆಕ್ಟ್ರಾನಿಕ್ಸ್ ವಸ್ತುಗಳು ಡಿಸ್ಕೌಂಟ್ ರೇಟಿಗೆ ಮಾರಾಟ ಮಾಡಲಾಗುತ್ತಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿನ ರಿಯಾಯಿತಿ ಮಾದರಿಗಳ ಪಟ್ಟಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ Poco M5 ಸರಣಿ ಫೋನುಗಳು ಸೇರ್ಪಡೆಯಾಗಿವೆ. ಐಸಿಐಸಿಐ ಬ್ಯಾಂಕ್ ಬ್ಯಾಂಕ್ ಅಥವಾ ಆಕ್ಸಿಸ್ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ, ಹೆಚ್ಚುವರಿಯಾಗಿ 10% ಡಿಸ್ಕೌಂಟ್ ಸಿಗಲಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪೋಕೋ ಎಂ5 ಸ್ಮಾರ್ಟ್‌ಫೋನ್, 1,500 ರೂ. ಡಿಸ್ಕೌಂಟ್‌ನೊಂದಿಗೆ 10,999 ರೂ. ಮತ್ತು 12,999 ರೂ.ವರೆಗೆ ಸಿಗಲಿವೆ. ಪೋಕೋ ಎಫ್4 5ಜಿ ಸ್ಮಾರ್ಟ್‌ಫೋನ್ ಮೇಲೆ ವಿಶೇಷ ಡಿಸ್ಕೌಂಟ್ 8000 ರೂ. ಘೋಷಿಸಲಾಗಿದೆ. ಹಾಗೆಯೇ, ಪೋಕೋ ಎಕ್ಸ್4 ಪ್ರೋ 5ಜಿ ಫೋನ್ ಕೂಡ 5000 ರೂ. ಡಿಸ್ಕೌಂಟ್‌ನೊಂದಿಗೆ 13,999 ರೂ.ಗೆ ದೊರೆಯಲಿದೆ.
ಪೋಕೋ ಎಂ4 5ಜಿ ಸ್ಮಾರ್ಟ್‌ಫೋನ್‌ಗೆ 3,000 ರೂ. ಹಾಗೂ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ 3,500 ರೂ. ರಿಯಾಯ್ತಿಯೊಂದಿಗೆ ದೊರೆಯಲಿವೆ. ಇದೇ ರೀತಿ ಹಲವು ಫೋನುಗಳಿಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಡಿಸ್ಕೌಂಟ್‌ನೊಂದಿಗೆ ಮಾರಾಟವಾಗುತ್ತಿವೆ.
ಬೃಹತ್ ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಪ್ರತಿ ವರ್ಷ ಹಬ್ಬದ ಸೀಸನ್‌ನಲ್ಲಿ ಬೃಹತ್ ಸೇಲ್ ಆಯೋಯಿಸುತ್ತವೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಹೆಸರಿನಲ್ಲಿ ಡಿಸ್ಕೌಂಟ್ ಮಾರಾಟ ಆರಂಭಿಸಿದರೆ, ಅಮೆಜಾನ್ ದಿ ಗ್ರೇಟ್ ಇಂಡಿಯನ ಫೆಸ್ಟಿವಲ್ ಹೆಸರಿನಲ್ಲಿ ಮಾರಾಟ ಮಾಡುತ್ತವೆ. ಒಂದು ವಾರದ ಈ ಸೇಲ್‌ನಲ್ಲಿ ಸಾವಿರಾರು ಕೋಟಿ ರೂ. ಮೊತ್ತದ ವ್ಯಾಪಾರ ನಡೆಯುತ್ತದೆ.
ಇದನ್ನೂ ಓದಿ | Shopping | ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಆರಂಭ