Site icon Vistara News

Mobile World Congress: ಜಾಗತಿಕ ಮಾರುಕಟ್ಟೆಗೆ Realme GT 3 ಲಾಂಚ್, ಇದು ಫಾಸ್ಟೆಸ್ಟ್ ಚಾರ್ಜಿಂಗ್ ಫೋನ್!

Realme GT 3 launched at Mobile World Congress

ನವದೆಹಲಿ: ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 2023ರ ಸಾಲಿನ ಮೊಬೈಲ್ ವರ್ಲ್ಡ್ ಕಾಂಗ್ರೆಸ್(Mobile World Congress – MWC)ನಲ್ಲಿ ರಿಯಲ್‌ಮಿ ತನ್ನ ಹೊಸ ರಿಯಲ್‌ಮಿ ಜಿಟಿ 3 (Realme GT 3) ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಹೊಸ ಜಿಟಿ ಸೀರೀಸ್‌ಫೋನ್‌ಗಳು ಐದು ವಿಭಿನ್ನ RAM ಮತ್ತು ಸ್ಟೋರೇಜ್ ವೆರಿಯಂಟ್‌ಗಳನ್ನು ಹೊಂದಿವೆ. ಈ ಫೋನ್ ಜಗತ್ತಿನ ಅತ್ಯಂತ ಫಾಸ್ಟ್ ಚಾರ್ಜಿಂಗ್ ಫೋನ್ ಎಂಬ ಖ್ಯಾತಿಯನ್ನು ಬೆನ್ನಿಗಂಟಿಸಿಕೊಂಡಿದೆ. ಯಾಕೆಂದರೆ, ಈ ಫೋನ್ 240W ಫಾಸ್ಟ್‌ ಚಾರ್ಚಿಂಗ್‌ಗೆ ಸಪೋರ್ಟ್ ಮಾಡುತ್ತದೆ.

Realme GT 3 ಸ್ಮಾರ್ಟ್‌ಫೋನ್, ಸ್ನಾಪ್‌ಡ್ರಾಗನ್ 8+ Gen 1ನಿಂದ ಚಾಲಿತವಾಗಿದೆ. RGB LED ಅಧಿಸೂಚನಾ ಫಲಕವನ್ನು ಹಿಂಭಾಗದಲ್ಲಿ ಹೊಂದಿದ್ದು, ಇದನ್ನು ಕಂಪನಿಯು ಪಲ್ಸ್ ಇಂಟರ್ಫೇಸ್ ಎಂದು ನಾಮಕರಣ ಮಾಡಿದೆ.

ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಸೋನಿ IMX890 ಮೇನ್ ಕ್ಯಾಮೆರಾ ಇದ್ದು, ಒಟ್ಟು ಮೂರು ಕ್ಯಾಮೆರಾಗಳನ್ನು ಫೋನ್ ಹಿಂಬದಿಯಲ್ಲಿ ಕಾಣಬಹುದು. ಇನ್ನು Realme GT 3 ಸ್ಮಾರ್ಟ್ ಫೋನ್, 4,600mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿ 21 ದಿನಗಳವರೆಗೆ ಸ್ಟ್ಯಾಂಡ್‌ಬೈ ಬಾಳಕೆ ಬರುತ್ತದೆ. ಈ ಬ್ಯಾಟರಿ ಅತ್ಯಂತ ವೇಗದಲ್ಲಿ ಚಾರ್ಜಿಂಗ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ Xiaomi 13 Pro ಲಾಂಚ್, ಮಾರ್ಚ್ 6ರಿಂದ ಮಾರಾಟ, ಬೆಲೆ ಎಷ್ಟು?

Realme GT 3 ಬೆಲೆ ಎಷ್ಟು?

Realme GT 3 ಐದು ವಿಭಿನ್ನ RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. 8 GB ಮತ್ತು 128GB, 12GB ಮತ್ತು 256GB, 16GB ಮತ್ತು 256GB, 16GB ಮತ್ತು 512GB, ಹಾಗೂ 16GB ಪ್ಲಸ್ 1TB ವೆರಿಯಂಟ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಈ ಫೋನ್ ಆರಂಭಿಕ ಬೆಲೆ ಅಂದಾಜು 649 ಡಾಲರ್ ಇದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 53,500 ರೂ. ಆಗುತ್ತದೆ. ಬೂಸ್ಟರ್ ಕಪ್ಪು ಮತ್ತು ಪಲ್ಸ್ ವೈಟ್ ಬಣ್ಣಗಳಲ್ಲಿ ಈ ಫೋನ್ ದೊರೆಯಲಿದೆ. ಭಾರತೀಯ ಮಾರುಕಟ್ಟೆಗೆ ಯಾವಾಗ ಈ ಫೋನ್ ಬಿಡುಗಡೆಯಾಗಲಿದೆ ಎಂಬ ಯಾವುದೇ ಮಾಹಿತಿ ಇಲ್ಲ.

Exit mobile version