ನವ ದೆಹಲಿ: ಚೀನಾ ಮೂಲದ ರೆಡ್‌ಮಿ (Redmi) ಕಂಪನಿಯು ಭಾರತೀಯ ಮಾರುಕಟ್ಟೆಗೆ ರೆಡ್‌ಮಿ ಎ1 ಪ್ಲಸ್ (Redmi A1+) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದೊಂದು ಬಜೆಟ್ ಸ್ಮಾರ್ಟ್‌ಫೋನ್ ಆಗಿದ್ದು, ಮೀಡಿಯಾಟೆಕ್ ಪ್ರೊಸೆಸರ್ ಒಳಗೊಂಡಿದೆ. ಡುಯಲ್ ಕ್ಯಾಮೆರಾ, 5,000mAh ಬ್ಯಾಟರಿ ನೀಡಲಾಗಿದೆ. ಈ ಫೋನ್ ಬೆಲೆ ಅಂದಾಜು 6,999 ರೂ. ಎಂದು ಹೇಳಲಾಗುತ್ತಿದೆ.
ಡುಯಲ್ ಕ್ಯಾಮೆರಾ, 5,000mAh ಬ್ಯಾಟರಿ ಜತೆಗೆ ಈ ಫೋನಿನಲ್ಲಿ ನೀವು ಫಿಂಗರ್ ಪ್ರಿಂಟ್ ಸೆನ್ಸರ್, ಎಚ್‌ಡಿ ಪ್ಲಸ್ ರೆಸಲ್ಯೂಷನ್ ಇರುವ 6.52 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದು. ಫೋನಿನ ಬ್ಯಾಕ್ ಪ್ಯಾನೆಲ್ ಲೆದರ್ ಟೆಕ್ಸಚರ್ ಇರುವ ಫಿನಿಶಿಂಗ್ ಕಾಣಬಹುದು. ಈ ಫೋನ್ ಕಪ್ಪು, ನೀಲಿ ಮತ್ತು ಸಿಲ್ವರ್ ಮೂರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಮೀಡಿಯಾಟೆಕ್ ಹೆಲಿಯೋ ಎ22 ಪ್ರೊಸೆಸರ್ ಹೊಂದಿದ್ದು, 3 ಜಿಬಿ RAMನೊಂದಿಗೆ ಸಂಯೋಜಿತವಾಗಿದೆ. 32 ಜಿಬಿ ಸ್ಟೋರೇಜ್ ದೊರೆಯಲಿದೆ. ಬಳಕೆದಾರರು ಈ ಸ್ಟೋರೇಜ್ ಮೆಮೋರಿಯನ್ನು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಹೆಚ್ಚಿಸಿಕೊಳ್ಳಬಹುದಾಗಿದೆ.
ಈಗಾಗಲೇ ಹೇಳಿದಂತೆ ಡುಯಲ್ ಕ್ಯಾಮೆರಾಗಳಿವೆ. ಮೊದಲನೆಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಕಂಪನಿಯು 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ. ಕಡಿಮೆ ರೇಟಿಗೆ ಒಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಫೋನ್ ಆಗಿದೆ ಎಂದು ಹೇಳಬಹುದು.
ಇದನ್ನೂ ಓದಿ | Redmi 11 Prime | ಭಾರತದಲ್ಲಿ ರೆಡ್‌ಮಿ 11 ಪ್ರೈಮ್ ಸಿರೀಸ್ ಲಾಂಚ್, ಕಡಿಮೆ ರೇಟಿಗೆ 5ಜಿ ಫೋನ್!