ನವದೆಹಲಿ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ರೆಡ್‌ಮಿ ನೋಟ್ 12(Redmi Note 12), ರೆಡ್‌ಮಿ ನೋಟ್ 12 ಪ್ರೋ (Note 12 Pro) ಮತ್ತು ರೆಡ್‌ಮಿ ನೋಟ್ 12 ಪ್ರೋ ಪ್ಲಸ್ (Note 12 Pro+) ಲಾಂಚ್ ಆಗಿದ್ದು, ಬುಧವಾರದಿಂದ ಮಾರಾಟ ಶುರುವಾಗಿದೆ. ಈ ಸರಣಿಯ ಎಲ್ಲ ಫೋನುಗಳು ಬೆಲೆ 10 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೆ ಇದೆ.
ರೆಡ್‌ಮಿ ನೋಟ್ 12 5ಜಿ ಫೋನ್ 6.67 ಇಂಚ್ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ನೋಟ್ 12 ಪ್ರೋ ಮತ್ತು ಪ್ರೋ ಪ್ಲಸ್‌ಗೂ ಇದೇ ರೀತಿಯ ಡಿಸ್‌ಪ್ಲೇಗಳಿವೆ. ಆದರೆ, ರಿಫ್ರೆಶ್ ದರದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಪ್ರೋ ಪ್ಲಸ್ ಮಾದರಿ ಫೋನಿಗೆ ಗೊರಿಲ್ಲಾ ಪ್ರೊಟೆಕ್ಷನ್ ಗ್ಲಾಸ್ ಇರಲಿದೆ.
ಕ್ಯಾಮೆರಾ ಬಗ್ಗೆ ಹೇಳುವುದಾದರೆ, ರೆಡ್‌ಮಿ ನೋಟ್ 12 ಫೋನಿನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್ ಅಪ್ ಇದೆ. ಈ ಪೈಕಿ ಮೊದಲನೆ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಉಳಿದೆರಡು ಕ್ಯಾಮೆರಾಗಳು 8 ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿವೆ. ಅದೇ ರೀತಿ, ರೆಡ್‌ಮಿ ನೋಟ್ ಪ್ರೋನಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2 ಎಂಪಿ ಮ್ಯಾಕ್ರೋ ಲೆನ್ಸ್ ಕ್ಯಾಮೆರಾಗಳಿವೆ.
ಆದರೆ, ರೆಡ್‌ಮಿ ನೋಟ್ 12 ಪ್ರೋ ಪ್ಲಸ್ ಫೋನ್ ಹಿಂಬದಿಯಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಅದೇ ರೀತಿ, ರೆಡ್‌ಮಿ ನೋಟ್ 12 ಕ್ಯಾಮೆರಾದಲ್ಲಿ ಸೆಲ್ಫಿಗಾಗಿ 13 ಎಂಪಿ ಕ್ಯಾಮೆರಾ ನೀಡಲಾಗಿದ್ದು, ಉಳಿದರೆಡು ವೆರಿಯೆಂಟ್‌ಗಳಿಗೆ 16 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇನ್ನುಳಿದಂತೆ ಕನೆಕ್ಟಿವಿಟಿ ಹಾಗೂ ಬ್ಯಾಟರಿಗಳ ವಿಷಯದಲ್ಲೂ ರೆಡ್‌ಮಿ ನೋಟ್ ಸರಣಿ ಫೋನುಗಳ ಗಮನಾರ್ಹವಾಗಿವೆ. ಹಲವು ಫೀಚರ್‌ಗಳು ಗಮನ ಸೆಳೆಯುವಂತಿವೆ.
ಇದನ್ನೂ ಓದಿ | Motorola and Jio | ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಿಗೂ ಜಿಯೋ ಟ್ರೂ 5ಜಿ ಸೇವೆ ಬೆಂಬಲ!