Site icon Vistara News

Redmi Note 12 | ಬಹು ನಿರೀಕ್ಷೆಯ ರೆಡ್‌ಮಿ ನೋಟ್ 12 ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

Redmi Note 12

ಬೆಂಗಳೂರು: ಜನಪ್ರಿಯ ರೆಡ್‌ಮಿ ನೋಟ್ 11 ಸ್ಮಾರ್ಟ್‌ಫೋನ್ ಅಪ್‌ಗ್ರೇಡ್‌ಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್. ಕಂಪನಿಯು ರೆಡ್‌ಮಿ ನೋಟ್ 12 (Redmi Note 12 ) ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳು ಲಾಂಚ್ ಮಾಡಲಿದೆ. ಈ ಬಗ್ಗೆ ಪೋಸ್ಟರ್ ಲಾಂಚ್ ಮಾಡಿ, ಬಿಡುಗಡೆಯ ಸುದ್ದಿಯನ್ನು ಕಂಪನಿಯು ಖಚಿತಪಡಿಸಿದೆ. ಆದರೆ, ನಿರ್ದಿಷ್ಟವಾಗಿ ಯಾವ ದಿನದಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಂದ ಹಾಗೆ, ಮೊದಲಿಗೆ ಈ ಫೋನ್ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ, ಆ ಬಳಿಕ ಇತರ ಮಾರುಕಟ್ಟೆಗಳಿಗೂ ಪ್ರವೇಶವನ್ನು ಪಡೆದುಕೊಳ್ಳಲಿದೆ.

ರೆಡ್‌ಮಿ ನೋಟ್ 12 ಸ್ಮಾರ್ಟ್‌ಫೋನ್ ರಿಲೀಸ್ ಸಂಬಂಧ ಬಿಡುಗೆಡ ಮಾಡಿರುವ ಪೋಸ್ಟರ್‌ನಲ್ಲಿ ಫೋನ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಷೇರ್ ಮಾಡಿಕೊಳ್ಳಲಾಗಿದೆ. ಈ ಫೋನ್ ಎರಡು ಪ್ರಮುಖ ಟೆಕ್ನಾಲಜಿಗಳೊಂದಿಗೆ ಬರಲಿದೆ. ಈ ಪೈಕಿ ಒಂದು ವಿಶ್ವದಲ್ಲೇ ಮೊದಲ ಟೆಕ್ನಾಲಜಿ ಆಗಿರಲಿದೆ ಎಂದು ತಿಳಿಸಲಾಗಿದೆ. ಮತ್ತೊಂದೆಡೆ, ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಕಂಪನಿಯು ರೆಡ್‌ಮಿ ನೋಟ್ 12, ರೆಡ್‌ಮಿ ನೋಟ್ 12 ಪ್ರೋ ಮತ್ತು ರೆಡ್‌ಮಿ ನೋಟ್ 12 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳ್ಳಲಿವೆ.

ಈ ಫೋನುಗಳು 67, 120 ಮತ್ತು 210ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿವೆ. ಪ್ರೋ ಮಾಡೆಲ್‌ ಫೋನ್‌ಗಳಲ್ಲಿ ಮೀಡಿಯಾಟೆಕ್‌ನ ಹೊಸ Dimensity 1080 SoC ಇರಲಿದೆ ಎಂದು ಹೇಳಲಾಗುತ್ತಿದೆ. ಮತ್ತೆ ಕೆಲವು ವರದಿಗಳ ಪ್ರಕಾರ, Dimensity 1300 ಚಿಪ್ ಬರಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಈ ಎಲ್ಲ ಮೂರು ಫೋನುಗಳಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಲಿದೆ. ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಹಾಗೆಯೇ, ಈ ಹೊಸ ಫೋನುಗಳಲ್ಲಿ ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಕಾಣಬಹುದು. ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಫೋನುಗಳು ಮುಂದಿನ ದಿನಗಳಲ್ಲಿ ಬೇರೆ ಬೇರೆ ಮಾರುಕಟ್ಟೆಗೆ ಲಾಂಚ್ ಆಗಲಿವೆಯಾದರೂ ಭಾರತಕ್ಕೆ ಯಾವಾಗ ಕಾಲಿಡಲಿವೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.

ಇದನ್ನೂ ಓದಿ | Redmi 11 Prime | ಭಾರತದಲ್ಲಿ ರೆಡ್‌ಮಿ 11 ಪ್ರೈಮ್ ಸಿರೀಸ್ ಲಾಂಚ್, ಕಡಿಮೆ ರೇಟಿಗೆ 5ಜಿ ಫೋನ್!

Exit mobile version