Site icon Vistara News

Jio True 5G: ಕರ್ನಾಟಕದ ರಾಯಚೂರು ಸೇರಿ ದೇಶದ ಮತ್ತೆ 20 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಶುರು

Jio True 5G launched at Ramnagar, Bhadravati, Doddaballapur, Chintamani

ಮುಂಬೈ: ರಿಲಯನ್ಸ್ ಜಿಯೋ ಫೆಬ್ರವರಿ 21, ಮಂಗಳವಾರದಂದು ಟ್ರೂ 5ಜಿ ಸೇವೆಗಳನ್ನು (Reliance Jio True 5G) ಕರ್ನಾಟಕದ ರಾಯಚೂರಿನಲ್ಲಿ ಆರಂಭಿಸಿತು. ಇದರ ಜತೆಗೆ ಬೊಂಗೈಗಾಂವ್, ಉತ್ತರ ಲಖಿಂಪುರ, ಶಿವಸಾಗರ್, ತಿನ್ಸುಕಿಯಾ (ಅಸ್ಸಾಂ), ಭಾಗಲ್ಪುರ್, ಕತಿಹಾರ್ (ಬಿಹಾರ), ಮರ್ಮಗೋವಾ (ಗೋವಾ) ಸೇರಿದಂತೆ 20 ನಗರಗಳಲ್ಲಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿತು.

ಡಿಯು (ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು), ಗಾಂಧಿಧಾಮ್ (ಗುಜರಾತ್), ಬೊಕಾರೊ ಸ್ಟೀಲ್ ಸಿಟಿ, ದಿಯೋಘರ್, ಹಜಾರಿಬಾಗ್ (ಜಾರ್ಖಂಡ್), ಸತ್ನಾ (ಮಧ್ಯಪ್ರದೇಶ), ಚಂದ್ರಾಪುರ್, ಇಚಲಕರಂಜಿ (ಮಹಾರಾಷ್ಟ್ರ), ತೌಬಲ್ (ಮಣಿಪುರ), ಫೈಜಾಬಾದ್, ಫಿರೋಜಾಬಾದ್ , ಮುಜಾಫರ್‌ನಗರ (ಉತ್ತರ ಪ್ರದೇಶ) ಸೇರಿ ಇದೀಗ ಜಿಯೋ ಟ್ರೂ 5ಜಿ ಅನ್ನು ಪಡೆಯುತ್ತಿರುವ ನಗರಗಳ ಒಟ್ಟು ಸಂಖ್ಯೆ 277ಕ್ಕೆ ಏರಿಕೆಯಾಗಿದೆ.

ರಿಲಯನ್ಸ್ ಜಿಯೋ ಬಹುತೇಕ ರಾಯಚೂರಿನಲ್ಲಿ (ಕರ್ನಾಟಕ) 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನುವೆಲ್ಕಮ್ ಕೊಡುಗೆಗೆ ಆಹ್ವಾನಿಸಲಾಗುತ್ತದೆ.

ಇದನ್ನೂ ಓದಿ: Jio True 4G digital Life: ರಿಲಯನ್ಸ್ ಜಿಯೋದಿಂದ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್ ಆರಂಭ

ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, ರಾಯಚೂರು ಮತ್ತು 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 20 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಹೆಮ್ಮೆಪಡುತ್ತೇವೆ. ಇದರೊಂದಿಗೆ 277 ನಗರಗಳಾದ್ಯಂತ ಜಿಯೋ ಬಳಕೆದಾರರು ಹೊಸ ವರ್ಷ 2023ರಲ್ಲಿ ಜಿಯೋ ಟ್ರೂ 5ಜಿ ರೂಪಾಂತರದ ಪ್ರಯೋಜನಗಳನ್ನು ಆನಂದಿಸಬಹುದು ಎಂದು ತಿಳಿಸಿದರು.

Exit mobile version