ನವದೆಹಲಿ: ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆ ಪಾಲು ಹೊಂದಿರುವ ಸ್ಯಾಮ್ಸ್ಂಗ್ ಕಂಪನಿಯು ಜನವರಿ 18ಕ್ಕೆ ಗ್ಯಾಲಕ್ಸಿ ಎ23 5ಜಿ(Samsung Galaxy A32 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಸ್ಯಾಮ್ಸಂಗ್‌ನ ಅಧಿಕೃತ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್‌ಫೋನ್ ಮೂರು ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಆಸಮ್ ಬ್ಲ್ಯಾಕ್, ಆಸಮ್ ಬರ್ಗಂಡಿ ಮತ್ತು ಆಸಮ್ ಗ್ರೀನ್ ಬಣ್ಣ ಆಯ್ಕೆಯಲ್ಲಿ ಗ್ರಾಹಕರು ಫೋನ್ ಖರೀದಿಸಬಹುದಾಗಿದೆ. ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಈ ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ.
ಈ ಫೋನ್ 5.8 ಇಂಚ್ HD+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಆಂಡ್ರಾಯ್ಡ್ 12 ಆಪರೇಟಿಂಗ್ ಸಾಫ್ಟ್‌ವೇರ್ ಆಧರಿತವಾಗಿದೆ. ಮೀಡಿಯಾಟೆಕ್ ಡಿಮೆನ್ಸಿಟಿ 700 ಚಿಪ್‌ಸೆಟ್ ಇದ್ದು, 4ಜಿಬಿ RAM ಜತೆ ಸಂಯೋಜಿಸಲಾಗಿದೆ ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ಇರಲಿದೆ. ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿಕೊಂಡು ಮೆಮೋರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಫೋನ್ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಈ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಉಳಿದಂತೆ ಎರಡು 2 ಮೆಗಾ ಪಿಕ್ಸೆಲ್ ಮತ್ತು ಒಂದು 5 ಮೆಕಾಪಿಕ್ಸೆಲ್ ಕ್ಯಾಮೆರಾಗಳಿವೆ. ಫ್ರಂಟ್‌ನಲ್ಲಿ ಸೆಲ್ಫಿಗಾಗಿ, 5 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. 4000mAh ಬ್ಯಾಟರಿ ಇದೆ. ಆದರೆ, ಈ ಫೋನ್ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ನೀಡಿಲ್ಲ.
ಇದನ್ನೂ ಓದಿ | Smartphone Shipment | ಒಪ್ಪೋ ನಂ.1, ನಂತರದ ಸ್ಥಾನದಲ್ಲಿ ಸ್ಯಾಮ್ಸಂಗ್, ಲಾವಾ ಕೂಡ ಅಗ್ರಸ್ಥಾನಿ!