ನವದೆಹಲಿ: ಕಳೆದ ಕೆಲವು ದಿನಗಳಿಂದ ಟ್ವಿಟರ್ ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿರುವ ಮಾಲೀಕ ಎಲಾನ್ ಮಸ್ಕ್ (Elon Musk) ಅವರು ಇದೀಗ, ತಾವು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಬಳಕೆದಾರರಿಗೆ ಕೇಳಿಕೊಂಡಿದ್ದಾರೆ. ಈ ಬಗ್ಗೆ, ಟ್ವಿಟರ್‌ನಲ್ಲಿ ಪೋಲ್ ಕೂಡಾ ಆರಂಭಿಸಿದ್ದಾರೆ. ಮತ್ತೊಂದೆಡೆ, ಬಳಕೆದಾರರು ತಮ್ಮ ಪೋಸ್ಟ್‌ಗಳಲ್ಲಿ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಲಿಂಕ್‌ಗಳನ್ನು ಸೇರಿಸುವುದನ್ನು ನಿಷೇಧಿಸಲಾಗುವುದು ಎಂದು ಟ್ವಿಟರ್ ಹೇಳಿದೆ. ಟ್ವಿಟರ್‌ನ ಈ ನಿರ್ಧಾರವು ಸಾಕಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಗಳಿವೆ.
ಇತ್ತೀಚೆಗೆ ಟ್ವಿಟರ್ ಖರೀದಿಸಿರುವ ಎಲಾನ್ ಮಸ್ಕ್ ಅವರು ತಮ್ಮ ವಿಶಿಷ್ಟ ನಿರ್ಧಾರಗಳಿಂದ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈಗ ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ತಾವು ಕೆಳಗಿಳಿಯಬೇಕೇ ಎಂಬ ಪೋಲ್ ಅನ್ನು ಆರಂಭಿಸಿದ್ದಾರೆ. ಈಗಾಗಲೇ 12,892,479 ಜನರು ವೋಟ್ ಮಾಡಿದ್ದಾರೆ. ಶೇ.56.5 ಬಳಕೆದಾರರು ಮಸ್ಕ್ ಟ್ವಿಟರ್ ಮುಖ್ಯಸ್ಥ ಹುದ್ದೆ ತೊರೆಯಬೇಕು ಎಂದು ಹೇಳಿದ್ದರೆ, ಶೇ.43.5ರಷ್ಟು ಬಳಕೆದಾರರು ಮುಂದುವರಿಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ಈ ಟ್ವೀಟ್ ಪೋಲ್ ಮುಗಿಯಲು ಇನ್ನೂ ಸಮಯವಿದ್ದು, ಅಂತಿಮ ಫಲಿತಾಂಶ ಯಾವ ರೀತಿಯಲ್ಲಿ ಇರಲಿದೆ ನೋಡಬೇಕು.
ಲಿಂಕ್ ಸೇರಿಸುವಂತಿಲ್ಲ
ತಮ್ಮ ಸೋಷಿಯಲ್ ಮೀಡಿಯಾಗಳನ್ನು ಪ್ರಚಾರ ಮಾಡುವುದಕ್ಕಾಗಿ ಟ್ವಿಟರ್‌ನಲ್ಲಿ ತೆರೆಯಲಾಗಿರುವ ಖಾತೆಗಳನ್ನು ತೆಗೆದು ಹಾಕಲಾಗುವುದು ಎಂದು ಟ್ವಟಿರ್ ಹೇಳಿದೆ. ಅಲ್ಲದೇ, ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಮಸ್ಟೋಡಾನ್, ಟ್ರುತ್ ಸೋಷಿಯಲ್, ಟ್ರೈಬೆಲ್, ನಾಸ್ಟರ್ ಮತ್ತು ಪೋಸ್ಟ್ ಸೋಷಿಯಲ್ ಮೀಡಿಯಾಗಳ ಯುಸರ್ ನೇಮ್ ಅಥವಾ ಲಿಂಕ್ ಇರುವ ಕಂಟೆಂಟ್ ಪೋಸ್ಟ್ ಮಾಡಲು ಅವಕಾಶ ನೀಡುವುದಿಲ್ಲ ಟ್ವಿಟರ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ | Elon Musk | ಟ್ವಿಟರ್ ಓನರ್ ಎಲಾನ್ ಮಸ್ಕ್‌ಗೆ ಹತ್ಯೆಯಾಗುವ ಹೆದರಿಕೆ!