Site icon Vistara News

Reliance AGM | 5ಜಿಗಾಗಿ ಟೆಕ್ ದೈತ್ಯ ಕಂಪನಿಗಳ ಜತೆ ಟೈಅಪ್, ಅಗ್ಗದ ದರದಲ್ಲಿ 5ಜಿ ಫೋನ್: ರಿಲಯನ್ಸ್

mukesh ambani

mukesh ambani

ಮುಂಬೈ: ದೀಪಾವಳಿ ಹಬ್ಬದ ಹೊತ್ತಿಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆಯನ್ನು ಒದಗಿಸಲು ಮುಂದಾಗಿರುವ ರಿಲಯನ್ಸ್ ಕಂಪನಿ, ಇದಕ್ಕಾಗಿ ಟೆಕ್ ದೈತ್ಯ ಕಂಪನಿಗಳೊಂದಿಗೆ ಜಂಟಿ ಸಹಭಾಗಿತ್ವವನ್ನು ಪ್ರಕಟಿಸಿದೆ. ಈಗಾಗಲೇ ಮೆಟಾವರ್ಸ್‌ಗೆ ಸಂಬಂಧಿಸಿದಂತೆ, ಜಿಯೋ ಮತ್ತು ಮೆಟಾ ನಡುವೆ ಒಪ್ಪಂದ ಏರ್ಪಟ್ಟಿದೆ. ಅದೇ ರೀತಿ, ಗೂಗಲ್, ಮೈಕ್ರೋಸಾಫ್ಟ್, ಇಂಟೆಲ್ ಕಂಪನಿಗಳೊಂದಿಗೆ ಟೈ ಅಪ್ ಮಾಡಿಕೊಳ್ಳುತ್ತಿದೆ. ಈ ವಿಷಯವನ್ನು ರಿಲಯನ್ಸ್ ಇಂಡ್‌ಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ಅವರು ರಿಲಯನ್ಸ್ ವಾರ್ಷಿಕ ಸಭೆ(Reliance AGM)ಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಗೊತ್ತಿರುವಂತೆ ರಿಲಯನ್ಸ್, ಮೆಟಾವರ್ಸ್‌ಗೆ ಸಂಬಂಧಿಸಿದಂತೆ ಮೆಟಾ ಜತೆ ಕೈಜೋಡಿಸಿದೆ. ಅದೇ ರೀತಿ, ಕ್ಲೌಡ್‌ಗೆ ಗೂಗಲ್ ಜತೆ, ಕ್ಲೌಡ್ ಕಂಪ್ಯೂಟಿಂಗ್‌ಗಾಗಿ ಮೈಕ್ರೋ ಸಾಫ್ಟ್ ಜತೆ, ಇನ್ಫ್ರಾಸ್ಟ್ರಕ್ಚರ್, ಕಂಪ್ಯೂಟಿಂಗ್ ಮತ್ತು 5ಜಿ ಎಡ್ಜ್ ಕಂಪ್ಯೂಟಿಂಗ್‌ಗಾಗಿ ಇಂಟೆಲ್ ಜತೆ ಟೈ ರಿಲಯನ್ಸ್ ಟೈ ಅಪ್ ಮಾಡಿಕೊಳ್ಳಲಿದೆ ಎಂದು ರಿಲಯನ್ಸ್ ಇಂಡ್‌ಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಭಾರತದಲ್ಲಿ 5ಜಿ ಪರಿಹಾರಗಳಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಕ್ವಾಲ್‌ಕಾಮ್ ಜತೆಗೂ ಪಾರ್ಟರ್ನರ್‌ಶಿಪ್ ಮಾಡಿಕೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ. ನಮ್ಮ ‘ಮೇಡ್ ಇನ್ ಇಂಡಿಯಾ’ 5G ಸಹಯೋಗದಲ್ಲಿ ಮೆಟಾ, ಗೂಗಲ್, ಮೈಕ್ರೋಸಾಫ್ಟ್, ಎರಿಕ್ಸನ್, ನೋಕಿಯಾ, ಸ್ಯಾಮ್‌ಸಂಗ್, ಸಿಸ್ಕೋದಂತಹ ವಿಶ್ವದ ಪ್ರಮುಖ ಟೆಕ್ ಕಂಪನಿಗಳನ್ನು ನಮ್ಮ ಪಾಲುದಾರರನ್ನಾಗಿ ಹೊಂದಲು ನಾವು ಸವಲತ್ತು ಪಡೆದಿದ್ದೇವೆ. ಇಂದು, ನಾನು ಕ್ವಾಲ್ಕಾಮ್‌ನೊಂದಿಗೆ ಉತ್ತೇಜಕ ಪಾಲುದಾರಿಕೆಯನ್ನು ಪ್ರಕಟಿಸುತ್ತಿದ್ದೇನೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಕೈಗೆಟುಕುವ ದರದಲ್ಲಿ 5ಜಿ ಫೋನ್
ರಿಲಯನ್ಸ್ ಕಂಪನಿಯ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಂಬಾನಿ ಅವರು, ಕೈಗೆಟುಕುವ ದರದಲ್ಲಿ 5ಜಿ ಫೋನುಗಳನ್ನು ತಯಾರಿಸುವ ಸಂಬಂಧ ರಿಲಯನ್ಸ್ ಗೂಗಲ್ ಜತೆ ಸಹಭಾಗಿತ್ವ ಮಾಡಿಕೊಂಡಿದೆ. ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಂಬಂಧ ಗೂಗಲ್ ಜತೆಗೂಡಿ ಕೆಲಸ ಮಾಡುತ್ತಿರುವುದಾಗಿ ಅವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ | WhatsApp JioMart | ಇನ್ನು ವಾಟ್ಸ್ಆ್ಯಪ್‌ನಿಂದಲೇ ತರಕಾರಿ, ಹಣ್ಣು ಖರೀದಿಸಿ!

Exit mobile version