ನವದೆಹಲಿ: ಎಲಾನ್ ಮಸ್ಕ್ ಒಡೆತನದ ಟ್ವಿಟರ್ ತನ್ನ ಬ್ಲೂ ಸಬ್‌ಸ್ಕ್ರಿಪ್ಷನ್ (Twitter Blue) ಸೇವೆಯನ್ನು ಭಾರತದಲ್ಲೂ ಆರಂಭಿಸಿದೆ. ಈ ಸೇವೆ, ವೆಬ್ (Web) ಸೇರಿದಂತೆ ಐಒಎಸ್ (iOS) ಮತ್ತು ಆಂಡ್ರಾಯ್ಡ್ (Android) ಎರಡೂ ಸಾಧನಗಳಲ್ಲಿ ದೊರೆಯಲಿದೆ. ಟ್ವಿಟರ್ ಬ್ಲೂ ಚಂದಾದಾರರಿಗೆ ಅವರ ಪ್ರೊಫೈಲ್‌ನಲ್ಲಿ ಕೆಲವು ಇತರ ವೈಶಿಷ್ಟ್ಯಗಳೊಂದಿಗೆ ಪರಿಶೀಲಿಸಿದ ನೀಲಿ ಟಿಕ್ ಮಾರ್ಕ್ ನೀಡಲಾಗುತ್ತದೆ. ಈ ಟಿಕ್ ಮಾರ್ಕ್ ಪಡೆದ ಪ್ರೊಫೈಲ್‌ಗಳಿಗೆ ಅಧಿಕೃತೆ ಲಭ್ಯವಾಗುತ್ತದೆ.
ಒಂದು ವೇಳೆ ನೀವು, ಮೊಬೈಲ್‌ನಲ್ಲಿ ಮಾಸಿಕ ಟ್ವಿಟರ್ ಸಬ್‌ಸ್ಕ್ರಿಪ್ಷನ್ ಸೇವೆ ಆಯ್ಕೆ ಮಾಡಿಕೊಂಡರೆ, 900 ರೂ. ನೀಡಬೇಕಾಗುತ್ತದೆ. ಇದೇ ವೇಳೆ, ವೆಬ್‌ನಲ್ಲಿ ಪ್ರತಿ ತಿಂಗಳಿಗೆ 650 ರೂ. ಆಗಲಿದೆ. ಮಾಸಿಕ ಮಾತ್ರವಲ್ಲದೇ ವಾರ್ಷಿಕ ಚಂದಾದಾರಿಕೆಯನ್ನು ಭಾರತದಲ್ಲಿ ಟ್ವಿಟರ್ ನೀಡುತ್ತಿದೆ. ಅದರನ್ವಯ, ವಾರ್ಷಿಕ 6800 ರೂ. ಪಾವತಿಸಬೇಕಾಗುತ್ತದೆ. ಆಗ, ಮಾಸಿಕ ಅಂದಾಜು 566 ರೂ. ಆಗುತ್ತದೆ.
ಬ್ಲೂ ಟಿಕ್‌ನಿಂದ ಏನೇನು ಲಾಭ?
- ಎಡಿಟ್ ಟ್ವೀಟ್ ಬಟನ್ ಸೌಲಭ್ಯ ದೊರೆಯಲಿದೆ
- ಟ್ವೀಟ್ ಅನ್ ಡು ಮಾಡಬಹುದು
- ದೀರ್ಘ ಮತ್ತು ಗುಣಾತ್ಮಕ ವಿಡಿಯೋ ಪೋಸ್ಟ್ ಮಾಡಬಹುದು
- ಸಂಭಾಷಣೆಯಲ್ಲಿ ಆದ್ಯತೆ ದೊರೆಯುತ್ತದೆ
- ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ, ಚಂದಾದಾರರಿಗೆ ಕಡಿಮೆ ಜಾಹೀರಾತು ಪ್ರದರ್ಶನ
- ಆ್ಯಪ್ ಐಕಾನ್ ಕಸ್ಟಮೈಸ್ ಮಾಡಿಕೊಳ್ಳಬಹುದು
- ಎನ್ಎಫ್ಟಿ ಪ್ರೊಫೈಲ್ ಪಿಕ್ಚರ್, ಥೀಮ್ಸ್
- ನ್ಯಾವಿಗೇಷನ್ ಆಯ್ಕೆ ಕಸ್ಟಮೈಸ್ ಮಾಡಬಹುದು
- ಸ್ಪೇಸ್ ಟ್ಯಾಬ್ ಅಕ್ಸೆಸ್, ಇದರಿಂದ ಟ್ವೀಟ್ ಅನ್ ಡು ಮಾಡಬಹುದು
- ಅನ್ಲಿಮಿಟಿಡ್ ಬುಕ್ ಮಾರ್ಕ್ಸ್, ಫೋಲ್ಡರ್ ಕೂಡ ಬುಕ್ ಮಾರ್ಕ್ ಮಾಡಬಹುದು
ಇದನ್ನೂ ಓದಿ: Twitter Outage: ಟ್ವಿಟರ್ನಲ್ಲಿ ತಾಂತ್ರಿಕ ದೋಷ, ಟ್ವೀಟ್ ಮಾಡಲಾಗದೆ ಬಳಕೆದಾರರ ಪರದಾಟ; ಕಂಪನಿ ಹೇಳಿದ್ದೇನು?