Site icon Vistara News

ವಿಸ್ತಾರ Explainer: Thread Launch: ಟ್ವಿಟರ್‌ನಂತೆ ಥ್ರೆಡ್‌ ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

thread launch

ಹೊಸದಿಲ್ಲಿ: ಟ್ವಿಟರ್‌ಗೆ ಪ್ರತಿಸ್ಪರ್ಧಿ ಎಂದೇ ಭಾವಿಸಲಾಗಿರುವ ಮೆಟಾದ ನೂತನ ಸೋಶಿಯಲ್‌ ಮೀಡಿಯಾ ವೇದಿಕೆ ಥ್ರೆಡ್‌ (Thread) ನಿನ್ನೆ ಅನಾವರಣಗೊಂಡಿದೆ (Thread Launch). ಪ್ರಾರಂಭವಾದ ಕೇವಲ 7 ಗಂಟೆಗಳಲ್ಲಿ 1 ಕೋಟಿ ಸೈನ್ ಅಪ್‌ಗಳನ್ನು ಕಂಡಿದೆ.

“ಮೊದಲ ಎರಡು ಗಂಟೆಗಳಲ್ಲಿ ಥ್ರೆಡ್‌ 20 ಲಕ್ಷ ಸದಸ್ಯರನ್ನು ಪಡೆದವು. ನಾಲ್ಕು ಗಂಟೆಗಳಲ್ಲಿ 50 ಲಕ್ಷ ಹಾಗೂ 7 ಗಂಟೆಗಳಲ್ಲಿ ಒಂದು ಕೋಟಿ ಸೈನ್‌ ಅಪ್‌ಗಳನ್ನು ಪಡೆದವು- ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಪೋಸ್ಟ್‌ ಮಾಡಿ ಮಾಹಿತಿ ನೀಡಿದ್ದಾರೆ.

ಥ್ರೆಡ್‌ ವೇದಿಕೆ ಟ್ವಿಟರ್‌ ಅನ್ನು ಸದಸ್ಯರ ಸಂಖ್ಯೆಯಲ್ಲಿ ಮೀರಿಸಲಿದೆಯೇ ಎಂಬುದರ ಕುರಿತು ಮಿಶ್ರ ಅಭಿಪ್ರಾಯಗಳಿವೆ. ಥ್ರೆಡ್‌ಗೆ ಇನ್‌ಸ್ಟಾಗ್ರಾಮ್‌ ಮೂಲಕ ಬರಬೇಕಿರುವುದರಿಂದ ಅದರ ಲಿಂಕ್‌ಗಳು ಸಿದ್ಧ ಬಳಕೆದಾರರ ಸಂಖ್ಯೆಯನ್ನು ಒದಗಿಸಲಿವೆ. ಇತ್ತ ಎಲಾನ್ ಮಸ್ಕ್ ಮತ್ತು ಹೊಸ ಸಿಇಒ ಲಿಂಡಾ ಯಾಕರಿನೊ ಅವರು ಟ್ವಿಟರ್ ಅನ್ನು ಸುಧಾರಿಸಲು ಹೆಣಗಾಡುತ್ತಿದ್ದಾರೆ. ಈ ಸಮಯ ಥ್ರೆಡ್‌ಗೆ ಅನುಕೂಲರವಾಗಲಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಸುದ್ದಿ-ಆಧಾರಿತ ದೃಷ್ಟಿಕೋನವನ್ನು ಹೊಂದಿರುವ ಟ್ವಿಟರ್ ಹಾಗೆಯೇ ಉಳಿಯಲಿದೆ ಎಂದು ಇನ್ನು ಹಲವರು ಭಾವಿಸಿದ್ದಾರೆ.

“ನಮ್ಮ ಉದ್ದೇಶ Instagramನ ಅತ್ಯುತ್ತಮ ಅಂಶಗಳನ್ನು ತೆಗೆದುಕೊಳ್ಳುವುದು; ಪಠ್ಯ, ಆಲೋಚನೆಗಳು ಮತ್ತು ನಿಮ್ಮ ಮನಸ್ಸಿನಲ್ಲಿರುವುದನ್ನು ಚರ್ಚಿಸಲು ಹೊಸ ಅನುಭವವನ್ನು ಸೃಷ್ಟಿಸುವುದು. ಜಗತ್ತಿಗೆ ಈ ರೀತಿಯ ಸ್ನೇಹಪರ ಸಮುದಾಯದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಥ್ರೆಡ್‌ನ ಮಾಲಿಕ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ.

ಇನ್‌ಸ್ಟಾಲ್‌ ಮಾಡುವುದು ಹೇಗೆ?

ಮೆಟಾ ಸಂಸ್ಥೆಯು ಈ ಅಪ್ಲಿಕೇಶನ್ ಅನ್ನು Instagramನ ವಿಸ್ತರಣೆಯಾಗಿ ತಂದಿದೆ. Twitterನಿಂದ ನಕಲು ಮಾಡಲಾದ ಹಲವು ವೈಶಿಷ್ಟ್ಯಗಳೂ ಇದರಲ್ಲಿವೆ. ಉದಾಹರಣೆಗೆ, ಬಳಕೆದಾರರು Twitter ಥ್ರೆಡ್‌ಗಳಂತೆಯೇ ಇಲ್ಲಿಯೂ ಪೋಸ್ಟ್‌ಗಳ ಸರಣಿಯನ್ನು ಪ್ರಕಟಿಸಬಹುದು.

ಹೊಸ Thread ಅಪ್ಲಿಕೇಶನ್ ಅನ್ನು Android ಸ್ಮಾರ್ಟ್‌ಫೋನ್‌ಗಳಲ್ಲಿ Google Play ಮೂಲಕ ಮತ್ತು iPhoneಗಳಲ್ಲಿ Apple ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. Instagramನ ಗ್ರಾಹಕರನ್ನು ಆಕರ್ಷಿಸಲು, ಅಲ್ಲಿ ಬ್ಲೂ ಟಿಕ್‌ ಪಡೆದಿರುವ ಬಳಕೆದಾರರು ಇಲ್ಲಿಯು ಸೈನ್ ಅಪ್ ಮಾಡಿದಾಗ ಸ್ವಯಂಚಾಲಿತವಾಗಿ ನೀಲಿ ಟಿಕ್ ಅನ್ನು ಪಡೆಯುತ್ತಾರೆ. ಥ್ರೆಡ್‌ಗೆ ಲಾಗ್ ಇನ್ ಮಾಡಲು Instagram IDಯನ್ನು ಬಳಸಿ. ನೀವು ಈಗಾಗಲೇ Instagramಗೆ ಲಾಗ್ ಇನ್ ಆಗಿದ್ದರೆ, ಥ್ರೆಡ್‌ ಅನುಮತಿಯನ್ನು ಮಾತ್ರ ಕೇಳುತ್ತದೆ. ಅಂದರೆ ನೀವು ಮತ್ತೆ ಲಾಗಿನ್ ವಿವರಗಳನ್ನು ಸೇರಿಸುವ ಅಗತ್ಯವಿಲ್ಲ.

ಥ್ರೆಡ್‌ ಬಳಸುವುದು ಹೇಗೆ?

ಮೆಟಾ Instagram ಅನ್ನು ಫೋಟೋ-ಹಂಚಿಕೆ ಅಥವಾ ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಆಗಿ ರೂಪಿಸಿದೆ. ಥ್ರೆಡ್‌ ಪಠ್ಯ ಆಧಾರಿತ ಸಂವಾದದ ಅಪ್ಲಿಕೇಶನ್. ಫೇಸ್‌ಬುಕ್ ಇದ್ದರೂ, ಥ್ರೆಡ್‌ ಸುಮಾರಾಗಿ ಟ್ವಿಟರ್‌ ಅನ್ನು ಹೋಲುತ್ತದೆ. ಅಥವಾ ಟ್ವಿಟರ್‌ನ ಹಳೆಯ ಆವೃತ್ತಿಯನ್ನು ಹೋಲುತ್ತದೆ. ಪ್ರತಿ ಪೋಸ್ಟ್ 500 ಅಕ್ಷರಗಳಷ್ಟು ಉದ್ದವಾಗಿರಬಹುದು. ಲಿಂಕ್‌ಗಳು, ಫೋಟೋಗಳು (ಪ್ರತಿ ಪೋಸ್ಟ್‌ಗೆ ಗರಿಷ್ಠ ಹತ್ತು), ಮತ್ತು 5 ನಿಮಿಷಗಳಷ್ಟು ದೀರ್ಘವಾದ ವೀಡಿಯೊಗಳನ್ನು ಲಗತ್ತಿಸಬಹುದು. ನಿಮ್ಮ ಥ್ರೆಡ್‌ಗಳ ಪೋಸ್ಟ್‌ಗೆ ಯಾರು ಕಮೆಂಟ್‌ ಮಾಡಬಹುದು ಎಂಬುದನ್ನು ಸಹ ಬಳಕೆದಾರರು ನಿಯಂತ್ರಿಸಬಹುದು. ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ನೀವು ನಿಮ್ಮ ಪ್ರೊಫೈಲ್ ಅನ್ನು ಇತರರು ಅನುಸರಿಸುವುದನ್ನು ರದ್ದುಗೊಳಿಸಬಹುದು, ಬ್ಲಾಕ್‌ ಮಾಡಬಹುದು, ಅಥವಾ ರಿಪೋರ್ಟ್ ಮಾಡಬಹುದು. Instagramನಲ್ಲಿ ನೀವು ಬ್ಲಾಕ್‌ ಮಾಡಿದ ಯಾವುದೇ ಖಾತೆ‌ ಇಲ್ಲೂ ಸ್ವಯಂಚಾಲಿತವಾಗಿ ಬ್ಲಾಕ್‌ ಆಗುತ್ತೆ.

ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗೆ ನಿಮ್ಮ ಥ್ರೆಡ್ ಪೋಸ್ಟ್‌ ಸೇರಿಸುವುದು ಹೇಗೆ?

ಈಗ ವಿಸ್ತಾರ ನ್ಯೂಸ್‌ ಥ್ರೆಡ್‌ನಲ್ಲಿಯೂ ಲಭ್ಯ

ನಿಮ್ಮ ಪ್ರೀತಿಯ ʼವಿಸ್ತಾರ ನ್ಯೂಸ್‌ʼನ ಸುದ್ದಿಗಳು, ವಿಡಿಯೋಗಳು ಈಗ ಥ್ರೆಡ್‌ ಸೋಶಿಯಲ್‌ ಮೀಡಿಯಾದಲ್ಲಿಯೂ ಲಭ್ಯವಿದೆ. ಇದನ್ನು ಥ್ರೆಡ್‌ ಮೂಲಕ ಪಡೆಯಲು ನೀವು ಈ ಲಿಂಕ್‌ ಬಳಸಬಹುದು: https://www.threads.net/@vistaranews

Exit mobile version