Site icon Vistara News

WhatsApp: ವಾಟ್ಸಾಪ್ ಏಕೆ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡುತ್ತಿದೆ?

WhatsApp Accounts

ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ 74.52 ಲಕ್ಷ ಭಾರತೀಯ ಬಳಕೆದಾರರ (Indian accounts) ಖಾತೆಗಳನ್ನು ಡಿಲಿಟ್ ನಿಷೇಧ ಮಾಡಿರುವುದಾಗಿ ಮೆಟಾ (Meta) ಒಡೆತನದ ವಾಟ್ಸಾಪ್ (WhatsApp) ಹೇಳಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳು ಅನುಸಾರವಾಗಿ ಪ್ರತಿ ತಿಂಗಳ ಮೊದಲ ದಿನ ಸೋಷಿಯಲ್ ಮೀಡಿಯಾಗಳು ವರದಿಯನ್ನು ಪ್ರಕಟಿಸಬೇಕಾಗುತ್ತದೆ. ಅದರನ್ವಯ ಈಗ ವರದಿಯ ಪ್ರಕಟವಾಗಿದ್ದು, ಬಳಕೆದಾರರ ಮನವಿ ಹಾಗೂ ದೂರುಗಳ ಆಧಾರದ ಮೇಲೆ ವಾಟ್ಸಾಪ್, ಲಕ್ಷಾಂತರ ಖಾತೆಗಳನ್ನು ಡಿಲಿಟ್ ಮಾಡಿದೆ.

ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ಅಪಾಯಕಾರಿ ನಡವಳಿಕೆಯನ್ನು ತಡೆಯಲು ಟೂಲ್ಸ್ ಮತ್ತು ಸಂಪನ್ಮೂಲಗಳನ್ನು ನಿಯೋಜಿಸುತ್ತದೆ. ಹಾನಿ ಸಂಭವಿಸಿದ ನಂತರ ಅದನ್ನು ಪತ್ತೆಹಚ್ಚುವುದಕ್ಕಿಂತಲೂ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸವುದೇ ಉತ್ತಮ ಎಂದು ಕಂಪನಿಯು ಹೇಳಿಕೊಂಡಿದೆ.

ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ಕೈಗೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ. ಹಾಗೆಯೇ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ನಿಯಂತ್ರಸಲು ವಾಟ್ಸಾಪ್ ತನ್ನದೇ ಆದ ತಡೆಗಟ್ಟುವ ಕ್ರಮಗಳನ್ನು ಹೊಂದಿದೆ . ಇದರ ಭಾಗವಾಗಿಯೇ ವಾಟ್ಸಾಪ್ ಏಪ್ರಿಲ್ ತಿಂಗಳಲ್ಲಿ 7.4 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಮತ್ತು ಬಳಕೆದಾರರಿಂದ ಯಾವುದೇ ವರದಿಗಳ ಮೊದಲು ಈ ಖಾತೆಗಳಲ್ಲಿ 2.4 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.

ನಿಂದನೆ ಪತ್ತೆ ಕಾರ್ಯಾಚರಣೆಯು ಮರು ಹಂತದಲ್ಲಿ ನಡೆಯುತ್ತದೆ. ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ನೀಡುವಾಗ ಪತ್ತೆ ಹಚ್ಚಲಾಗುತ್ತದೆ. ನಾವು ಬಳಕೆದಾರರ ವರದಿಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ಸ್ವೀಕರಿಸುತ್ತೇವೆ. ಈ ಕೇಸ್‌ಗಳನ್ನು ಮೌಲ್ಯಮಾಪನ ಮಾಡಲು ಮತ್ತು ಕಾಲಾನಂತರದಲ್ಲಿ ನಮ್ಮ ಪರಿಣಾಮಕಾರಿತ್ವವನ್ನು ಸುಧಾರಿಸಲು ಸಹಾಯ ಮಾಡಲು ವಿಶ್ಲೇಷಕರ ತಂಡವು ಈ ವ್ಯವಸ್ಥೆಗಳನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್

ಜೂನ್ 1ರಂದು ವಾಟ್ಸಾಪ್, ತನ್ನ ಹೊಸ ಗ್ಲೋಬಲ್ ಸೆಕ್ಯುರಿಟಿ ಸೆಂಟರ್ ಅನಾವರಣ ಮಾಡಿದೆ. ಅನ್ ವಾಂಟೆಂಡ್ ಕಾಂಟಾಕ್ಟ್ಸ್ ಮತ್ತು ಸ್ಪ್ಯಾಮರ್‌ಗಳಿಂದ ಬಳಕೆದಾರರು ಹೇಗೆ ತಪ್ಪಿಸಿಕೊಳ್ಳುವುದನ್ನು ಈ ಸೆಂಟರ್‌ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ಹೊಸ ಪುಟವು ಇಂಗ್ಲಿಷ್ ಮಾತ್ರವಲ್ಲದೇ, ಕನ್ನಡವೂ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version