ನವದೆಹಲಿ: ವಾಟ್ಸ್ಆ್ಯಪ್ ಪೇ ಇಂಡಿಯಾ ಮುಖ್ಯಸ್ಥ(WhatsApp Pay Head) ವಿನಯ್ ಚೋಲೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅವರಿಗೆ ವಾಟ್ಸ್ಆ್ಯಪ್ ಪೇ ಇಂಡಿಯಾ ಮುಖ್ಯಸ್ಥನ ಜವಾಬ್ದಾರಿಯನ್ನು ವಹಿಸಲಾಗಿತ್ತು. ಚೋಲೆಟ್ಟಿ ರಾಜೀನಾಮೆಯೊಂದಿಗೆ ಕಳೆದ ಒಂದೂವರೆ ತಿಂಗಳಲ್ಲಿ ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಇಂಡಿಯಾದಲ್ಲಿ ನಾಲ್ವರು ಪ್ರಮುಖ ಅಧಿಕಾರಿಗಳು ಕಂಪನಿಯಿಂದ ಹೊರ ಬಿದ್ದಂತಾಗಿದೆ.
ಈ ಹಿಂದೆ ಮೆಟಾ ಇಂಡಿಯಾ ಎಂಡಿಯಾಗಿದ್ದ ಅಜಿತ್ ಮೋಹನ್, ವಾಟ್ಸ್ಆ್ಯಪ್ ಇಂಡಿಯಾ ಹೆಡ್ ಅಭಿಜಿತ್ ಬೋಸ್ ಮತ್ತು ಮೆಟಾ ಇಂಡಿಯಾ ಪಬ್ಲಿಕ್ ಪಾಲಿಸಿ ಹೆಡ್ ರಾಜೀವ್ ಅಗ್ರವಾಲ್ ಅವರು ಕಳೆದ ಒಂದೂವರೆ ತಿಂಗಳಲ್ಲಿ ರಾಜೀನಾಮೆ ನೀಡಿದ ಪ್ರಮುಖ ಅಧಿಕಾರಿಗಳಾಗಿದ್ದಾರೆ. ವಿನಯ್ ಚೋಲೆಟ್ಟಿ ಅವರು 2021 ಅಕ್ಟೋಬರ್‌ನಲ್ಲಿ ವಾಟ್ಸ್ಆ್ಯಪ್ ಪೇ ಮುಖ್ಯಸ್ಥರಾಗಿ ಸೇರಿಕೊಂಡಿದ್ದರು. ಅದಕ್ಕೂ ಮೊದಲ ಅವರು ಅಮೆಜಾನ್‌ನಲ್ಲಿದ್ದರು.
ವಾಟ್ಸ್ಆ್ಯಪ್ ಪೇನಲ್ಲಿ ಬುಧವಾರ ನನ್ನ ಕೊನೆಯ ದಿನವಾಗಿತ್ತು. ಭಾರತದಲ್ಲಿ ವಾಟ್ಸ್ಆ್ಯಪ್ ಪ್ರಭಾವ ಮತ್ತು ಅದು ಏರಿದ ಎತ್ತರದ ಬಗ್ಗೆ ನೋಡಿದಾಗ ವಿನಮ್ರಭಾವ ಮೂಡುತ್ತದೆ ಎಂದು ಚೋಲೆಟ್ಟಿ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Message Yourself | ವಾಟ್ಸ್ಆ್ಯಪ್‌ನ ಹೊಸ ಫೀಚರ್ ‘ಮೆಸೇಜ್ ಯುವರ್‌ಸೆಲ್ಫ್’ ಶುರು! ಬಳಸಲು ಹೀಗೆ ಮಾಡಿ…