ನವ ದೆಹಲಿ: ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್ (Whatsapp) ನಲ್ಲಿ ಬರೀ ಮೆಸೇಜ್ ಮಾಡುತ್ತಾ ಕಾಲ ಕಳೆಯಬೇಡಿ. ನಿಮ್ಮ ಸ್ನೇಹಿತರಿಗೆ ಹಣ ಕಳಿಸಿ, 105ರೂ.ಗಳವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ! ಹೌದು, ವಾಟ್ಸ್‌ಆ್ಯಪ್ ಹಣಪಾವತಿಸುವ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಇಂತಹದ್ದೊಂದು ಆಫರ್ ನೀಡಿದೆ.
ಈಗ ನೀವು ಒಮ್ಮೆ ವಾಟ್ಸ್‌ಆ್ಯಪ್ ಮೂಲಕ ನಿಮ್ಮ ಸಂಪರ್ಕದಲ್ಲಿರುವವರಿಗೆ ಹಣ ಪಾವತಿಸಿದರೆ 35ರೂ. ವಾಪಸ್ ಬರುತ್ತದೆ. ಮೂರು ಬಾರಿ ಹಣಪಾವತಿಗೆ ಈ ರೀತಿಯ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಅಂದರೆ ಒಟ್ಟು 105 ರೂ. ಹಣವನ್ನು ವಾಟ್ಸ್‌ಆ್ಯಪ್ ನೀಡುತ್ತದೆ.
ಅಂದ ಹಾಗೆ ಹಣ ಪಾವತಿ ಮಾಡಲು ಯಾವುದೇ ಮಿತಿಯಲ್ಲ. ನೀವು ಒಂದು ರೂಪಾಯಿ ಪಾವತಿ ಮಾಡಿ 35 ರೂ.ಗಳನ್ನು ಕ್ಯಾಶ್‌ಬ್ಯಾಕ್ ಆಗಿ ಪಡೆಯಬಹುದು. ಆಹಾ! ಇದನ್ನು ಕೇಳಿದರೇ ಎಷ್ಟು ಖುಷಿ ಆಗುತ್ತದೆ ಅಲ್ವಾ? ಆದರೆ ಇದು ದೀರ್ಘಸಮಯದ ಖುಷಿಯಾಗಿ ಉಳಿಯುವುದಿಲ್ಲ. ಅಂದರೆ ಒಟ್ಟು ₹105 ಹಣವನ್ನು ನೀವು ವಾಪಾಸ್ ಪಡೆದ ನಂತರ ಈ ಅವಕಾಶವಿರುವುದಿಲ್ಲ. ಈ ಕ್ಯಾಶ್ ಬ್ಯಾಕ್ ಆಫರ್ ಸೀಮಿತ ಅವಧಿಯಲ್ಲಿ, ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.
ಹಣ ಪಾವತಿಸುವುದು ಹೇಗೆ?
- ವಾಟ್ಸ್ಆ್ಯಪ್ಗೆ ಓಪನ್ ಮಾಡಿ.
- ಹಣ ಕಳುಹಿಸಬೇಕಾದವರ ಸಂಪರ್ಕ ಸಂಖ್ಯೆಯನ್ನು ಆಯ್ಕೆ ಮಾಡಿ.
- ಚಾಟ್ ಬಾಕ್ಸ್ ಬಳಿ ಇರುವ ಪೇಮೆಂಟ್ ಆಯ್ಕೆಯನ್ನು ಒತ್ತಿ (₹- ಈ ಚಿಹ್ನೆ ಒತ್ತಿ).
- ಪಾವತಿಸಬೇಕಾದ ಮೊತ್ತವನ್ನು ತುಂಬಿ (ಯಾವ ಕಾರಣಕ್ಕೆ ಹಣ ನೀಡಲಾಗುತ್ತಿದೆ ಎಂದೂ ಅಲ್ಲಿ ತಿಳಿಸಬಹುದು).
- ನಿಮ್ಮ ಬ್ಯಾಂಕ್ ಖಾತೆಯನ್ನು ಇದಕ್ಕೆ ಜೋಡಿಸಬೇಕು: ʼಗೆಟ್ ಸ್ಟಾರ್ಟೆಡ್ʼ ಎಂಬುದನ್ನು ಒತ್ತಿ.
- ನಿಮ್ಮ ಬ್ಯಾಂಕ್ ಯಾವುದು ಎಂಬುದನ್ನು ಆಯ್ಕೆ ಮಾಡಿ.
- ನಿಮ್ಮ ವಿವರಗಳನ್ನು ಖಚಿತಗೊಳಿಸಿ ನಂತರ ʼವೆರಿಫೈʼ ಎಂಬುದನ್ನು ಒತ್ತಿ.
- ನಿಮ್ಮ ಬ್ಯಾಂಕ್ ವಿವರಗಳು ಖಚಿತವಾದ ಬಳಿಕ ನಿಮ್ಮ ಖಾತೆಯ ವಿವರವನ್ನು ನೀಡಿ.
- ಎಲ್ಲವೂ ಖಚಿತಗೊಂಡ ಬಳಿಕ ಮೊತ್ತವನ್ನು ಹಾಕಿ.
- ಯುಪಿಐ ಪಿನ್ ಹಾಕಿ ಖಚಿತಪಡಿಸಿ.
ಇಷ್ಟು ಮಾಡಿದರೆ ಸಾಕು. ನಿಮ್ಮ ಪರಿಚಯಸ್ಥರಿಗೆ ನೀವು ಪಾವತಿಸಿದ ಹಣ ತಲುಪುತ್ತದೆ ಹಾಗೂ ನಿಮ್ಮ ಖಾತೆಗೆ ₹35 ಹಣ ಜಮಾ ಆಗುತ್ತದೆ.
ಇದನ್ನೂ ಓದಿ: ವಾಟ್ಸ್ ಆ್ಯಪ್‌ನಿಂದ ಏಪ್ರಿಲ್‌ನಲ್ಲಿ 16 ಲಕ್ಷ ಭಾರತೀಯರ ಖಾತೆಗಳ ನಿಷೇಧ