ಬೆಂಗಳೂರು: ಅತಿ ಹೆಚ್ಚು ಜನರಿಂದ ಬಳಸಲ್ಪಡುವ ಇನ್‌ಸ್ಟಂಟ್ ಮೆಸೇಜ್ ಆ್ಯಪ್ ವಾಟ್ಸ್ಆ್ಯಪ್ (WhatsApp is OK) ಸರ್ವರ್ ಸಮಸ್ಯೆ ಬಗೆ ಹರಿದಿದ್ದು, ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿದೆ. ಮಂಗಳವಾರ ಮಧ್ಯಾಹ್ನನ ಸುಮಾರು 1 ಗಂಟೆಗಳ ಕಾಲ ವಾಟ್ಸ್ಆ್ಯಪ್ ಸರ್ವರ್ ಸಮಸ್ಯೆಯಿಂದಾಗಿ ಬಳಕೆದಾರರು ಭಾರೀ ತೊಂದರೆ ಎದುರಿಸುತ್ತಿದ್ದರು. ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಯು ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಹೇಳಿದ್ದರು. ಅದರಂತೆ, ಮಂಗಳವಾರ 2 ಗಂಟೆಯಿಂದ ವಾಟ್ಸ್ಆ್ಯಪ್ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿದೆ.
ಇದಕ್ಕೂ ಮೊದಲು ಸರ್ವರ್ ಡೌನ್ ಆದ್ದರಿಂದ ಬಳಕೆದಾರರು ತೀವ್ರ ತೊಂದರೆಯನ್ನು ಅನುಭವಿಸಿದ್ದರು. ಬಳಕೆದಾರರು ಯಾವುದೇ ಸಂದೇಶಗಳನ್ನು ಕಳುಹಿಸಲು ಇಲ್ಲವೇ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಡೌನ್ ಆಗಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ | WhatsApp Down | ವಾಟ್ಸ್ಆ್ಯಪ್‌ಗೆ ‘ಗ್ರಹಣ’! ಪರದಾಡುತ್ತಿರುವ ಬಳಕೆದಾರರು