ನವದೆಹಲಿ: ಟ್ವಿಟರ್ (Twitter) ಓನರ್ ಆಗುತ್ತಿದ್ದಂತೆ ಎಲಾನ್ ಮಸ್ಕ್ (Elon Musk), ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಟ್ವಿಟರ್ ಒಟ್ಟಾರೆ ಸಂರಚನೆಯಲ್ಲಿ ಈ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ, ತಮ್ಮ ವೇಗಕ್ಕೆ ತಕ್ಕಂತೆ ಟ್ವಿಟರ್ ಉದ್ಯೋಗಿಗಳು ಕೆಲಸ ಮಾಡಬೇಕೆಂದು ಅವರು ಬಯಸುತ್ತಿರುವಂತಿದೆ. ವಾರದ ಏಳೂ ದಿನ, ದಿನದ 12 ಗಂಟೆ ಕೆಲಸ ಮಾಡಬೇಕೆಂದು ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಒಂದೊಮ್ಮೆ ಮಾಡಲು ಸಾಧ್ಯವಾಗದಿದ್ದರೆ ಕೆಲಸದಿಂದ ವಜಾ ಮಾಡುವ ಸೂಚನೆಯನ್ನು ನೀಡಲಾಗಿದೆ. ಇದರ ಮಧ್ಯೆ, ಸಾಕಷ್ಟು ಉದ್ಯೋಗಗಳನ್ನು ಕಡಿತ ಮಾಡುವ ಆತಂಕವೂ ಉದ್ಯೋಗಿಗಳನ್ನು ಕಾಡುತ್ತಿದೆ. ಬದಲಾವಣೆಗಳನ್ನು ಪೂರ್ಣಗೊಳಿಸಲು ಎಲಾನ್ ಮಸ್ಕ್ ಅವರ ಡೆಡ್‌ಲೈನ್ (Deadline) ಪೂರೈಸಲು ಎಲ್ಲರೂ ಹೆಚ್ಚುವರಿ ಗಂಟೆಗಳನ್ನು ಕೆಲಸ ಮಾಡಬೇಕೆಂದು ತಿಳಿಸಲಾಗಿದೆ.
ಯಾವುದೇ ಓವರ್ ಟೈಂ ಪೇ ಅಥವಾ ಕಾಂಪ್ ಟೈಮ್, ಉದ್ಯೋಗ ಭದ್ರತೆಯ ಬಗ್ಗೆ ಪ್ರಶ್ನೆ ಮಾಡದೇ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುವಂತೆ ಕೆಲವು ಉದ್ಯೋಗಿಗಳಿಗೆ ತಿಳಿಸಲಾಗಿದೆ. ನವೆಂಬರ್ ಮೊದಲ ವಾರದವರೆಗೆ ಕೆಲವು ಎಂಜಿನಿಯರ್ಸ್‌ಗೆ ಡೆಡ್ ಲೈನ್ ನೀಡಲಾಗಿದೆ. ಒಂದೊಮ್ಮೆ ಈ ಡೆಡ್‌ಲೈನ್ ಮೀರಿದರೆ ಅಂಥ ಎಂಜಿನಿಯರ್‌ಗಳನ್ನು ಮನೆಗೆ ಕಳುಹಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ಮಾಡಿರುವ ಎಲಾನ್ ಮಸ್ಕ್ ಅವರು, ಟ್ವಿಟರ್ ಬ್ಲೂಟಿಕ್ ಬಳಕೆದಾರರ ಚಂದಾ ಶುಲ್ಕವನ್ನು 8 ಡಾಲರ್‌ಗೆ (660 ರೂ.) ಏರಿಕೆ ಮಾಡಲಾಗಿದೆ. ಪೇಯ್ಡ್ ವೆರಿಫಿಕೇಷನ್ ಫೀಚರ್ ಲಾಂಚ್ ಮಾಡಲು ನವೆಂಬರ್ 7 ಡೆಡ್‌ಲೈನ್ ನೀಡಲಾಗಿದೆ. ಒಂದು ವೇಳೆ ಈ ಡೆಡ್‌ಲೈನ್ ಒಳಗೆ ಜಾಬ್ ಪೂರ್ತಿ ಮಾಡಲಲ್ಲ ಎಂದರೆ ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Twitter | ಟ್ವಿಟರ್‌ಗೆ ಮತ್ತೊಬ್ಬ ಭಾರತೀಯ ಸಿಇಒ? ಮಸ್ಕ್‌ಗೆ ಶ್ರೀರಾಮ್ ಕೃಷ್ಣನ್ ಹೆಲ್ಪ್