Site icon Vistara News

ಎಲೆಕ್ಟ್ರಿಕ್ ವಾಹನ ಓಡಿದಂತೆ ಬ್ಯಾಟರಿ ಚಾರ್ಜ್ ಮಾಡಬಲ್ಲ ವಿಶ್ವದ ಮೊದಲ ಶಾಶ್ವತ ‘ವಿದ್ಯುದ್ದಿಕೃತ ರಸ್ತೆ’ ಸ್ವಿಡನ್‌ನಲ್ಲಿ ಸಿದ್ಧ!

World's first electrified road ready to launch in sweden which helps to electric vehicles

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳು ಸಂಚರಿಸಿದಂತೆ, ಬ್ಯಾಟರಿ ಚಾರ್ಜ್‌ ಮಾಡಬಲ್ಲ ವಿಶ್ವದ ಮೊದಲ ವಿದ್ಯುದ್ದಿಕೃತ ರಸ್ತೆ(Electrified Road)ಯನ್ನು ಲಾಂಚ್ ಮಾಡಲು ಸ್ವೀಡನ್ (sweden) ಸಜ್ಜಾಗಿದೆ. ಭಾರತವು ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಸಾಂಪ್ರದಾಯಿಕ ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ (electric vehicles) ಬಳಕೆಗೆ ಉತ್ತೇಜಿನ ನೀಡುತ್ತಿವೆ. ಈಗ ಸ್ವೀಡನ್ ರೂಪಿಸಿರುವ ರಸ್ತೆ ವ್ಯವಸ್ಥೆಯೇನಾದರೂ ಸಕ್ಸೆಸ್ ಕಂಡರೆ ವಿದ್ಯುತ್ ಚಾಲಿತ ವಾಹನಗಳ ಬಲಕೆಯಲ್ಲಿ ಕ್ರಾಂತಿ ಸಂಭವಿಸಲಿದೆ.

ಲೋಕಾರ್ಪಣೆಗೆ ಸಿದ್ಧವಾಗಿರುವ ಈ ವಿದ್ಯುದ್ದಿಕೃತ ರಸ್ತೆಯು ಸ್ಟಾಕ್‌ಹೋಮ್, ಗೋಥೆನ್‌ಬರ್ಗ್, ಮಾಲ್ಮೋ ಸೇರಿದಂತೆ ಸ್ವೀಡನ್‌ನ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ವಿಶ್ವದ ಮೊದಲ ಶಾಶ್ವತ ವಿದ್ಯುದ್ದಿಕೃತ ರಸ್ತೆ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾಹಿತಿಯನ್ನು ಸ್ವಿಡನ್ ಒದಗಿಸಿಲ್ಲ. ಆದರೆ, ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ಇಂಗಾಲ್ ಡೈ ಆಕ್ಸೈಡ್ ಕಡಿಮೆ ಮಾಡುವ ನಿಟ್ಟಿನ ಪ್ರಯತ್ನದ ಭಾಗವಾಗಿ ಸ್ವೀಡನ್, 3000 ಕಿ.ಮೀ. ರಸ್ತೆಯನ್ನು ವಿದ್ಯುದ್ದೀಕರಣ ಮಾಡುತ್ತಿದೆ. ಹಸಿರು ಸಾರಿಗೆ ಸಂಪರ್ಕ ಬಳಕೆಯಲ್ಲಿ ಸ್ವೀಡನ್‌ ಜಗತ್ತಿನಲ್ಲೇ ಮುಂಚೂಣಿಯಲ್ಲಿದ್ದು, ಲೋಕಾರ್ಪಣೆಗೆ ಸಜ್ಜಾಗಿರುವ ಈ ವಿದ್ಯುದ್ದಿಕೃತ ರಸ್ತೆಯನ್ನು ಸಾಕ್ಷಷ್ಟು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ರಸ್ತೆಯಲ್ಲಿ ಭಾರೀ ವಾಹನಗಳ ಚಾರ್ಜ್‌ಗಾಗಿ ಓವರ್ ಎಲೆಕ್ಟ್ರಿಕ್ ಲೈನ್ ಇದ್ದರೆ, ರಸ್ತೆ ಮೇಲ್ಮೈಯ ಒಳಗೆ ಇಂಡಕ್ಷನ್ ಕ್ವಾಯಿಲ್ ಅಳವಡಿಸಲಾಗಿದೆ. ಹಾಗೆಯೇ ಎಲೆಕ್ಟ್ರಿಕ್ ಟ್ರಕ್‌ಗಳಿಗಾಗಿ ಚಾರ್ಜಿಂಗ್ ರೈಲ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಸ್ವೀಡನ್‌ ಮಾತ್ರ ಈ ರೀತಿಯ ರಸ್ತೆಯನ್ನು ಹೊಂದಿದೆ. ಒಂದು ವೇಳೆ, ಈ ವಿದ್ಯುದ್ದಿಕೃತ ರಸ್ತೆ ಯಶಸ್ವಿಯಾದರೆ, ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರಗಳಲ್ಲಿ ಬದಲಾವಣೆಗಳಾಗಲಿವೆ.

ಇದನ್ನೂ ಓದಿ: EV Vehicles : ಎಲೆಕ್ಟ್ರಿಕ್​ ವಾಹನ ಮಾಲೀಕರಿಗೆ ಭರ್ಜರಿ ಆಫರ್​ ಕೊಟ್ಟ ಯೋಗಿ ನೇತೃತ್ವದ ಯುಪಿ ಸರಕಾರ, ಏನದು?

ಸಾಂಪ್ರದಾಯಿಕ ಇಂಧನ ವಾಹನಗಳಿಂದ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಜನರು ಬಾರದಿರಲು, ಮೂಲಭೂತ ಸೌಕರ್ಯದ ಕೊರತೆಯೇ ಕಾರಣ. ವಿಶೇಷವಾಗಿ ಬ್ಯಾಟರಿ ಚಾರ್ಜಿಂಗ್‌ ಸಮಸ್ಯೆದ್ದೇ ದೊಡ್ಡ ಸವಾಲು ಆಗಿದೆ. ಹಾಗಾಗಿ, ಸ್ವೀಡನ್‌ನ ಈ ಕ್ರಾಂತಿಕಾರಿ ಉಪಕ್ರಮವು ಇಡೀ ಜಗತ್ತಿಗೇ ಹೊಸ ದಾರಿಯನ್ನು ತೋರಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version