Site icon Vistara News

xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!

Google has to Rs 1337 crore within 30 days, Say Tribunal

ನವದೆಹಲಿ: ಆರ್ಥಿಕ ಹಿಂಜರಿತ ಭೀತಿಯಲ್ಲಿ ಟೆಕ್ ದೈತ್ಯ ಕಂಪನಿ ಗೂಗಲ್ (Google) ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದೆ. ಹೀಗೆ ಕೆಲಸ ಕಳೆದಕೊಂಡವರ ಪೈಕಿ ಹೆನ್ರಿ ಕಿರ್ಕ್ (Henry Kirk) ಕೂಡ ಒಬ್ಬರು. ಕೆಲಸ ಹೋಯಿತು ಎಂದು ಕಿರ್ಕ್ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಲ್ಲದೇ ಅಧೈರ್ಯರೂ ಆಗಿಲಿಲ್ಲ. ಬದಲಿಗೆ ತಮ್ಮದೇ ಆದ ಸ್ವಂತ ಕಂಪನಿಯನ್ನು ಆರಂಭಿಸಿದ್ದಾರೆ. ಹೆನ್ರಿ ಕಿರ್ಕ್ ಅವರ ಪ್ರಯತ್ನಕ್ಕೆ ಗೂಗಲ್‌ನಿಂದ ಕೆಲಸ ಕಳೆದುಕೊಂಡು ಇತರ 7 ಉದ್ಯೋಗಿಗಳು ಬೆಂಬಲ ನೀಡಿದ್ದಾರೆ. ಅವರು ಈ ಹೊಸ ಕಂಪನಿಯೊಂದಿಗೆ ಹೆಜ್ಜೆ ಹಾಕಿದ್ದಾರೆ(xooglers).

ಹೆನ್ರಿ ಕಿರ್ಕ್ ಅವರು ಗೂಗಲ್‌ ಕಂಪನಿಯಲ್ಲಿ ಸುಮಾರು 8 ವರ್ಷಗಳಿಂದ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯ ಇತ್ತೀಚೆಗೆ ಒಟ್ಟು 12 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು. ಅದರಲ್ಲಿ ಈ ಹೆನ್ರಿ ಕೂಡ ಒಬ್ಬರು. ಕೆಲಸ ಕಳೆದುಕೊಂಡರೂ ಎದೆಗುಂದದೇ, ಹೆನ್ರಿ ಅವರು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಹೊಸ ಸ್ಟುಡಿಯೋ ನಿರ್ಮಿಸಿದ್ದಾರೆ. ಈ ಸ್ಟುಡಿಯೋ ವಿನ್ಯಾಸಕ್ಕಾಗಿ ಸುಮಾರು 6 ವಾರಗಳ ಕಾಲ ಚಿಂತಿಸಿದ್ದಾರೆ.

ಕಂಪನಿಯಿಂದ ವಜಾಗೊಳಿಸುವ 60 ದಿನಗಳ ನೋಟಿಫಿಕೇಷನ್ ಸಮಯ ಮುಗಿಯುವುದರೊಳಗೇ ಕಂಪನಿಯನ್ನು ಸ್ಥಾಪಿಸಿದ್ದಾರೆ. ನನಗೆ ಈಗ 25 ದಿನಗಳು ಉಳಿದಿವೆ. ನನಗೆ ನಿಮ್ಮ ಸಹಾಯ ಬೇಕು. ಕಠಿಣ ಪರಿಶ್ರಮ ಮತ್ತು ಫಲಿತಾಂಶಗಳು ನಿಮ್ಮನ್ನು ಜೀವನದಲ್ಲಿ ಮುಂದೆ ತರುತ್ತವೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಈ ಘಟನೆಯು ಆ ನಂಬಿಕೆಯಲ್ಲಿ ಅನುಮಾನವನ್ನು ಉಂಟುಮಾಡಬಹುದು, ಇದು ನನ್ನ ಅನುಭವವಾಗಿದೆ. ಈ ಜೀವನ ಸವಾಲುಗಳು ಅನನ್ಯ ಅವಕಾಶಗಳನ್ನು ನೀಡುತ್ತವೆ ಎಂದು ಹೆನ್ರಿ ಕಿರ್ಕ್ ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದರು. ಇದು ಭಾರೀ ವೈರಲ್ ಆಗಿತ್ತು.

ಇದನ್ನೂ ಓದಿ: Google AI chatbot Bard: ತಪ್ಪು ಮಾಹಿತಿ ನೀಡಿದ ಬಾರ್ಡ್, ಗೂಗಲ್‌ ಮಾತೃ ಸಂಸ್ಥೆ ಅಲ್ಫಾಬೆಟ್‌ಗೆ 100 ಶತಕೋಟಿ ಡಾಲರ್ ನಷ್ಟ!

ಈ ಹೊಸ ಪ್ರಯತ್ನದಲ್ಲಿ ಗೂಗಲ್‌ನ 6 ಮಾಜಿ ಉದ್ಯೋಗಿಗಳು ತಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆಂದು ಅವರೂ ಹೇಳಿಕೊಂಡಿದ್ದಾರೆ. ತಮ್ಮ ಸ್ಟಾರ್ಟ್‌ಪ್‌ನಲ್ಲಿ ಅವರು ಇತರ ಕಂಪನಿಗಳ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ವಿನ್ಯಾಸ ಮತ್ತು ಸಂಶೋಧನಾ ಪರಿಕರಗಳನ್ನು ಒದಗಿಸಲಿದ್ದಾರೆ. ಅಗತ್ಯ ಜ್ಞಾನವಿಲ್ಲದ ಸಂಸ್ಥೆಗಳಿಗೆ ಎಂಜಿನಿಯರಿಂಗ್ ಪ್ರಾಜೆಕ್ಟ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಬೆಳೆಯಲು ಮತ್ತು ಹಣಕಾಸು ಪಡೆಯಲು ಸಹಾಯ ಕೂಡ ಈ ಕಂಪನಿ ನೆರವು ನೀಡಲಿದೆ.

Exit mobile version