Site icon Vistara News

YouTube Videos: ಹಲ್ಲುನೋವು ಶಮನಕ್ಕೆ ಯುಟ್ಯೂಬ್‌ನಲ್ಲಿ ಸೂಚಿಸಿದ ಬೀಜ ಸೇವಿಸಿದ, ಮರುಕ್ಷಣವೇ ಪ್ರಾಣವೇ ಹೋಯ್ತು!

Youtube

ನವದೆಹಲಿ: ನಮಗೆ ಯಾವುದೇ ಸಮಸ್ಯೆಗಳು ಎದುರಾದಾಗ ಅಥವಾ ಯಾವುದಾದರೂ ಹೊಸ ವಿಷಯ ಬಗ್ಗೆ ತಿಳಿದುಕೊಳ್ಳಬೇಕಾದರೆ, ಯುಟ್ಯೂಬ್ (YouTube) ಮೊರೆ ಹೋಗುತ್ತಿವೆ. ಅಲ್ಲಿ ಸಾಕಷ್ಟು ಮಾಹಿತಿಗಳ ವಿಡಿಯೋಗಳ ಲಭ್ಯ ಇರುತ್ತವೆ. ನಮ್ಮ ಸಮಸ್ಯೆಗಳಿಗೆ ಸ್ವ ಪರಿಹಾರ ಸಿಗುತ್ತದೆ. ಆದರೆ, ಈ ಪದ್ಧತಿ ಕೆಲವೊಮ್ಮೆ ನಮ್ಮ ಜೀವಕ್ಕೆ ಅಪಾಯ ತರುತ್ತದೆ. ವಿಶೇಷವಾಗಿ ವೈದ್ಯಕೀಯ (Self Medicine) ಕುರಿತಾದ ಸಮಸ್ಯೆಗಳಿಗೆ ಸ್ವ ಪರಿಹಾರ ಮಾಡಲು ಹೋದಾಗ ಜೀವವನ್ನೇ ಕಳೆದುಕೊಳ್ಳಬಹುದು. ಅಂಥದ್ದೇ ಒಂದು ಘಟನೆ ನಡೆದಿದೆ. 26 ವರ್ಷದ ಯುವಕನೊಬ್ಬ ತನ್ನ ಹಲ್ಲು ನೋವು ಶಮನ ಮಾಡಿಕೊಳ್ಳಲು ಯುಟ್ಯೂಬ್ ವಿಡಿಯೋ (YouTube Videos) ಮೊರೆ ಹೋಗಿದ್ದಾನೆ. ಆದರೆ, ವಿಡಿಯೋದಲ್ಲಿ ಹೇಳಲಾದ ಔಷಧ ಸೇವಿಸಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಈ ಘಟನೆಯ ಜಾರ್ಖಂಡ್‌ನಲ್ಲಿ ಶನಿವಾರ ನಡೆದಿದೆ. ಟೈಮ್ಸ್ ಇಂಡಿಯಾ ವರದಿಯ ಪ್ರಕಾರ, 26 ವರ್ಷದ ಅಜಯ್ ಮಹತೋ ಎಂಬಾತ, ಭಾರಿ ಪ್ರಮಾಣದಲ್ಲಿ ಕಣಿಗಲು ಬೀಜಗಳನ್ನು ತಿಂದ ಪರಿಣಾಮ, ಮೃತಪಟ್ಟಿದ್ದಾನೆ. ಹಲ್ಲು ನೋವಿಗೆ ಕಣಗಿಲು ಬೀಜಗಳನ್ನು ತಿನ್ನಬೇಕು ಎಂಬ ವಿಡಿಯೋದಲ್ಲಿ ಹೇಳಲಾಗಿತ್ತು. ಅದೇ ಔಷಧವನ್ನು ಅನುಸರಿಸಿದ್ದರಿಂದ ಹುಡುಗ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು.

ಓಲಿಯಾಂಡರ್ ಬೀಜಗಳನ್ನು ಸೇವಿಸಿದ ನಂತರ ಮಹತೋ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ನಂತರ ಮಹತೋ ಅವರನ್ನು ಹಜಾರಿಬಾಗ್‌ನಲ್ಲಿರುವ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Dental Health: ಹಲ್ಲುಗಳ ಆರೋಗ್ಯ ರಕ್ಷಣೆಗಾಗಿ ಇಲ್ಲಿವೆ ಕೆಲವು ಸಲಹೆಗಳು

ಯುಟ್ಯೂಬ್‌ ವಿಡಿಯೋದಲ್ಲಿ ತಿಳಿಸಿರುವಂತೆ ಹಲ್ಲು ನೋವು ಶಮನ ಮಾಡುವ ಯಾವುದೇ ವೈದ್ಯಕೀಯ ಇತಿಹಾಸ ಕಣಗಿಲು ಬೀಜಗಳಿಗಿಲ್ಲ. ಅಸಲಿಗೆ ಕಣಗಿಲು ಬೀಜಗಳು ಅಥವಾ ಎಲೆಗಳ ಸೇವನೆಯು ವಿಷಪೂರಿತವಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಮೃತನ ತಂದೆ ನುನುಚಂದ್ ಮಹತೋ ಮಾತನಾಡಿ, ತಮ್ಮ ಮಗ ನೂತನ್ ನಗರ ಕಾಲೋನಿಯಲ್ಲಿರುವ ಲಾಡ್ಜ್‌ನಲ್ಲಿ ಉಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಒಂದು ವಾರದ ಹಿಂದೆ ಆತ ತೀವ್ರವಾದ ಹಲ್ಲುನೋವು ಅನುಭವಿಸುತ್ತಿದ್ದ ಎಂದು ಹೇಳಿದ್ದಾರೆ. ಯುಟ್ಯೂಬ್‌ನಲ್ಲಿ ವಿಡಿಯೋ ನೋಡಿದ ಬಳಿಕ ಕಣಗಿಲು ಬೀಜಗಳು ತನ್ನ ಹಲ್ಲು ನೋವು ಶಮನ ಮಾಡಬಲ್ಲವು ಎಂದು ತಿಳಿದುಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version