ಗ್ಯಾಜೆಟ್ಸ್
YouTube: ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ಸ್‌ಗೆ ಗುಡ್ ನ್ಯೂಸ್! ಉಚಿತವಾಗಿ ವಿಡಿಯೋ ಡಬ್ ಮಾಡಬಹುದು
YouTube: ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ಸ್ ತಮ್ಮ ವಿಡಿಯೋವನ್ನು ಇತರ ಭಾಷೆಗಳಿಗೆ ಡಬ್ ಮಾಡಲು ಈವರೆಗೆ ಥರ್ಡ್ ಪಾರ್ಟಿ ಆ್ಯಪ್ ಬಳಸುತ್ತಿದ್ದರು. ಈಗ ಯುಟ್ಯೂಬ್ ಆ ಸೌಲಭ್ಯವನ್ನು ಒದಗಿಸಲಿದೆ.
ನವದೆಹಲಿ: ಯುಟ್ಯೂಬ್ ವಿಡಿಯೋ ಕಂಟೆಂಟ್ ಕ್ರಿಯೇಟರ್ಸ್‌ಗೆ (YouTube Video Content Creators) ಇದು ಶುಭ ಸುದ್ದಿ. ಇನ್ನು ಮುಂದೆ ಯುಟ್ಯೂಬ್ (YouTube) ಉಚಿತವಾಗಿಯೇ ಕಂಟೆಂಟ್ ವಿಡಿಯೋಗಳನ್ನು ಬೇರೆ ಇತರ ಭಾಷೆಗಳಿಗೆ ಡಬ್ (Dub) ಮಾಡಲು ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಯುಟ್ಯೂಬ್ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಗುರುವಾರದ ವಿಡ್‌ಕಾನ್ 2023 (VidCon 2023)ನಲ್ಲಿ ಯುಟ್ಯೂಬ್, ಗೂಗಲ್‌ನ ಏರಿಯಾ 120 ಇನ್‌ಕ್ಯುಬೆಟರ್‌ನ ಉತ್ಪನ್ನವಾದ ಅಲೌಡ್(Aloud)ವನ್ನು ಡಬ್ ಮಾಡಲು ಬಳಸುವುದಾಗಿ ಘೋಷಿಸಿತು.
ಅಲೌಡ್ ಎಐ ಚಾಲಿತ ಡಬ್ಬಿಂಗ್ ಉತ್ಪನ್ನವಾಗಿದೆ. ಗೂಗಲ್ ಕಳೆದ ವರ್ಷ ಈ ಉತ್ಪನ್ನವನ್ನು ಲಾಂಚ್ ಮಾಡಿತ್ತು. ವಿಡಿಯೋ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ಅನುವಾದ ಮಾಡುತ್ತದೆ ಮತ್ತು ಅದರ ಡಬ್ಬಿಂಗ್ ಆವೃತ್ತಿಯನ್ನು ಉತ್ಪಾದಿಸುತ್ತದೆ. ಡಬ್ ಜನರೇಟ್ ಮಾಡುವ ಮುಂಚೆಯೇ ಬಳಕೆದಾರರಿಗೆ ಪರಿಶೀಲಿಸಲು ಮತ್ತು ಎಡಿಟ್ ಮಾಡಲು ಅವಕಾಶವನ್ನೂ ಕಲ್ಪಿಸುತ್ತದೆ. ಕಂಟೆಂಟ್ ಕ್ರಿಯೇಟರ್ಸ್ ತಮ್ಮ ವಿಡಿಯೋ ಕಂಟೆಂಟ್ ಅನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲು ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಅವಲಂಬಿಸಿದ್ದರು. ಇದೀಗ ಯುಟ್ಯೂಬ್ ಆ ಕೆಲಸವನ್ನು ತಾನೇ ಮಾಡಲಿದೆ.
ಈ ಸುದ್ದಿಯನ್ನೂ ಓದಿ: YouTube : ಯೂಟ್ಯೂಬ್ ನೂತನ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ
ಅಲೌಡ್ ಸದ್ಯ ಇಂಗ್ಲಿಷ್, ಪೋರ್ಚುಗೀಸ್, ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿವಿದೆ. ಶೀಘ್ರವೇ ಇದು ಹಿಂದಿ ಮತ್ತು ಭಾಷಾ ಇಂಡೋನೇಷಿಯನ್ ಭಾಷೆಗಳ ಸೇವೆಯವನ್ನು ಒದಗಿಸಲಿದೆ. ಯುಟ್ಯೂಬ್‌ನ ಕ್ರಿಯೇಟರ್ ಪ್ರಾಡಕ್ಟ್ಸ್‌ನ ಉಪಾಧ್ಯಕ್ಷ ಅಮ್ಜದ್ ಹನೀಫ್ ಅವರು, ಈಗಾಗಲೇ ನೂರಾರು ಕಂಟೆಂಟ್ ಕ್ರಿಯೇಟರ್ಸ್ ಅವರು ಈ ಅಲೌಡ್ ಟೂಲ್ ಬಳಸುತ್ತಿದ್ದಾರೆ. ಶೀಘ್ರವೇ ಈ ಟೂಲ್ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ. ಭವಿಷ್ಯದಲ್ಲಿ, ಧ್ವನಿ ಸಂರಕ್ಷಣೆ, ತುಟಿ ಮರು-ಅನಿಮೇಷನ್ ಮತ್ತು ಭಾವನೆ ವರ್ಗಾವಣೆಯಂತಹ ಕಾರ್ಯಗಳನ್ನು ಸೇರಿಸಲು ಜನರೇಟಿವ್ ಎಐ ಅಲೌಡ್ ಅನ್ನು ಅನುಮತಿಸುತ್ತದೆ ಎಂದು ಹನೀಫ್ ಹೇಳಿದ್ದಾರೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
WhatsApp Accounts: 74 ಲಕ್ಷ ಖಾತೆ ಬ್ಯಾನ್ ಮಾಡಿದ ವಾಟ್ಸಾಪ್, ಕಾರಣ ಏನು?
WhatsApp Accounts: 2021ರ ಹೊಸ ಐಟಿ ನಿಯಮಗಳ ಅನುಸಾರ ವಾಟ್ಸಾಪ್, ನಿಯಮಗಳನ್ನು ಉಲ್ಲಂಘಿಸಿದ 74 ಲಕ್ಷ ಭಾರತೀಯ ಖಾತೆಗಳನ್ನು ಡಿಲಿಟ್ ಮಾಡಿದೆ.
ನವದೆಹಲಿ: 2021ರ ಹೊಸ ಐಟಿ ನಿಯಮಗಳ (IT Rules of 2021) ಅನುಸಾರ ವಾಟ್ಸಾಪ್ ಭಾರತದ ಸುಮಾರು 74 ಲಕ್ಷ ವಾಟ್ಸಾಪ್ ಖಾತೆಗಳನ್ನು(WhatsApp Accounts) ಡಿಲೀಟ್ ಮಾಡಿದೆ. ವರದಿಯ ಪ್ರಕಾರ, ಆಗಸ್ಟ್ 1ರಿಂದ 31ರ ಅವಧಿಯಲ್ಲಿ ವಾಟ್ಸಾಪ್ ಕನಿಷ್ಠ 7,420,748 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ(WhatsApp Accounts Ban). ಅಲ್ಲದೇ, ಯಾವುದೇ ಬಳಕೆದಾರರು ವರದಿ ಮಾಡುವ ಮುನ್ನವೇ ವಾಟ್ಸಾಪ್ ನಿಯಮಗಳನ್ನು ಉಲ್ಲಂಘಿಸಿದ 3,506,905 ಖಾತೆಗಳನ್ನು ನಿಷೇಧಿಸಿದೆ.
ಮೆಟಾ-ಮಾಲೀಕತ್ವದ ಅಪ್ಲಿಕೇಶನ್, ಅದರ ಮಾಸಿಕ ಅನುಸರಣೆ ವರದಿಯಲ್ಲಿ, ಭಾರತದಲ್ಲಿ ಆಗಸ್ಟ್‌ನಲ್ಲಿ ದಾಖಲೆಯ 14,767 ದೂರು ವರದಿಗಳನ್ನು ಸ್ವೀಕರಿಸಿದೆ. ವಾಟ್ಸಾಪ್ ವರದಿಯ ಆಧಾರದ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು “ಖಾತೆಗಳು ಕ್ರಮಬದ್ಧಗೊಳಿಸಲಾಗಿದೆ” ಎಂದು ಸೂಚಿಸುತ್ತದೆ ಮತ್ತು ಕ್ರಮವನ್ನು ತೆಗೆದುಕೊಳ್ಳುವುದರಿಂದ ಖಾತೆಯನ್ನು ನಿಷೇಧಿಸುವುದು ಅಥವಾ ಈ ಹಿಂದೆ ನಿಷೇಧಿತ ಖಾತೆಯನ್ನು ಮರುಸ್ಥಾಪಿಸುವುದನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.
ಖಾತೆಗಳ ಕುರಿತು ಬಳಕೆದಾರರು ಮಾಡಿದ ರಿಪೋರ್ಟ್ ಮತ್ತು ಆ ಮನವಿಗಳು ಕುರಿತು ತೆಗೆದುಕೊಳ್ಳಲಾದ ಕ್ರಮಗಳನ್ನು ಈ ವರದಿಯು ಹೊಂದಿದೆ. ಅಲ್ಲದೇ, ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಖಾತೆಗಳ ಕುರಿತು ಸ್ವಯಂ ಆಗಿ ಕ್ರಮಗಳನ್ನು ಕೈಗೊಂಡ ವಿವರ ಕುರಿತು ಮಾಹಿತಿಯನ್ನು ನೀಡಲಾಗಿದೆ. ಬಳಕೆದಾರರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಆರಂಭಿಸಿದೆ. ಈ ಮೂಲಕ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ.
ವಾಟ್ಸಾಪ್‌ನಲ್ಲಿ ಇನ್ನು ಎಚ್‌ಡಿ ಫೋಟೋ ಕಳುಹಿಸಬಹುದು!
ಫೋಟೋ ಸೆಂಡ್ ಮಾಡಲು ಸ್ಟ್ಯಾಂಡರ್ಡ್ ಗುಣಮಟ್ಟವು ಡೀಫಾಲ್ಟ್ ಆಯ್ಕೆಯಾಗಿದ್ದು, ಇದರಲ್ಲಿ ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಕಳುಹಿಸಲಾಗುತ್ತದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರು ಕಡಿಮೆ ಬ್ಯಾಂಡ್‌ವಿಡ್ತ್ ಸಂಪರ್ಕದಲ್ಲಿ ವಾಟ್ಸಾಪ್‌ನಲ್ಲಿ ಚಿತ್ರವನ್ನು ಸ್ವೀಕರಿಸಿದರೆ, ಅವನು/ಅವಳು ಪ್ರಮಾಣಿತ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆ ಅಥವಾ ಅದನ್ನು ಎಚ್‌ಡಿಗೆ ಅಪ್‌ಗ್ರೇಡ್ ಮಾಡಬೇಕೇ ಎಂಬುದನ್ನು ಫೋಟೋ-ಬೈ-ಫೋಟೋ ಆಧಾರದ ಮೇಲೆ ಆಯ್ಕೆ ಮಾಡಬಹುದಾಗಿದೆ.
ಈ ಸುದ್ದಿಯನ್ನೂ ಓದಿ: WhatsApp New Feature: ವಾಟ್ಸಾಪ್‌ನಲ್ಲಿ 32 ಜನರೊಂದಿಗೆ ವಿಡಿಯೋ ಕಾಲ್ ಮಾಡಬಹುದು!
ಎಚ್‌ಡಿ ಫೋಟೋಗಳ ಫೀಚರ್ ಮುಂದಿನ ಕೆಲವು ವಾರಗಳಲ್ಲಿ ಜಾಗತಿಕವಾಗಿ ಬಳಕೆಗೆ ಸಿಗಲಿದೆ. ಇದಾದ ಬಳಿಕ ಶೀಘ್ರವೇ ಎಚ್‌ಡಿ ವಿಡಿಯೋಗಳನ್ನು ಕಳುಹಿಸಲು ವಾಟ್ಸಾಪ್ ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು, ವಾಟ್ಸಾಪ್ ಬಳಕೆದಾರರು ತಮ್ಮ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ವಿಡಿಯೋ ಷೇರಿಂಗ್ ಫೀಚರ್ ಪರಿಚಯಸಲಾಗುತ್ತಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಘೋಷಿಸಿದ್ದರು. ಈ ವೈಶಿಷ್ಟ್ಯವು ಬಳಕೆದಾರರಿಗೆ ಕಾಲ್ ಸಮಯದಲ್ಲಿ ಸ್ಕ್ರೀನ್ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಅಂದರೆ, ಕಾಲ್ ಮಧ್ಯೆಯೇ, ನೀವು ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು, ಕುಟುಂಬದೊಂದಿಗೆ ಫೋಟೋಗಳನ್ನು ಬ್ರೌಸ್ ಮಾಡುವುದು, ರಜೆಯ ಯೋಜನೆ ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದನ್ನು ಒಳಗೊಂಡಿರಬಹುದು.
ಕ್ರಿಕೆಟ್
ICC World Cup 2023: ವಿಶ್ವಕಪ್ ಪಂದ್ಯಾವಳಿ ನಡೆಯುವ ಭಾರತದ ಪ್ರತಿ ಮೈದಾನದಲ್ಲೂ ಜಿಯೋ ಡೌನ್ ಲೋಡ್ ವೇಗ ಆನಂದಿಸಿ
ICC World Cup 2023: ಜಿಯೋದ ಒಟ್ಟು ಡೌನ್‌ಲೋಡ್ ವೇಗ ಏರ್‌ಟೆಲ್‌ಗಿಂತ ಎರಡು ಪಟ್ಟು, ವೊಡಾಫೋನ್ ಐಡಿಯಾಕ್ಕಿಂತ 3.5
ನವದೆಹಲಿ: ಐಸಿಸಿ ವಿಶ್ವಕಪ್ 2023 (ICC World Cup 2023) ನಡೆಯಲಿರುವ ಭಾರತದ ಕ್ರಿಕೆಟ್ ಮೈದಾನಗಳಲ್ಲಿ (Indian Cricket Stadiums) ಕ್ರಿಕೆಟ್ ಅಭಿಮಾನಿಗಳಿಗೆ ಇಲ್ಲಿದೆ ಒಳ್ಳೆಯ ಸುದ್ದಿ. ಅದೇನೆಂದರೆ, ರಿಲಯನ್ಸ್ ಜಿಯೋ (Reliance Jio) ಡೌನ್‌ಲೋಡ್ ವೇಗವು (Download Speed) ಏರ್‌ಟೆಲ್‌ಗಿಂತ (Airtel) ಎರಡು ಪಟ್ಟು ವೇಗವಾಗಿದೆ ಮತ್ತು ವೊಡಾಫೋನ್‌ಗಿಂತ 3.5 ಪಟ್ಟು ವೇಗವಾಗಿದೆ. ಓಪನ್ ಸಿಗ್ನಲ್ (Open Signal) ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ಮೈದಾನಗಳ ಒಳಗೆ ಮತ್ತು ಹೊರಗೆ ಅಳೆಯಲಾದ ಡೌನ್‌ಲೋಡ್ ವೇಗದಲ್ಲಿ ಜಿಯೋ ಗೆದ್ದಿದೆ. ರಿಲಯನ್ಸ್ ಜಿಯೋದ ಸರಾಸರಿ ಡೌನ್‌ಲೋಡ್ ವೇಗವನ್ನು 61.7 ಎಂಬಿಪಿಎಸ್ ಎಂದು ಅಳೆಯಲಾಗಿದೆ. ಏರ್‌ಟೆಲ್ 30.5 ಎಂಬಿಪಿಎಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವೊಡಾಫೋನ್ ಐಡಿಯಾ 17.7 ಎಂಬಿಪಿಎಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಓಪನ್ ಸಿಗ್ನಲ್ ವರದಿಯಲ್ಲಿ, 5ಜಿ ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋದ 5ಜಿ ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ ಶೇ 25.5ರಷ್ಟು ಹೆಚ್ಚಾಗಿದೆ. ಜಿಯೋದ ಸರಾಸರಿ 5ಜಿ ಡೌನ್‌ಲೋಡ್ ವೇಗವು 344.5 ಎಂಬಿಪಿಎಸ್ ನಲ್ಲಿ ದಾಖಲಾಗಿದ್ದರೆ, ಏರ್‌ಟೆಲ್ 274.5 ಎಂಬಿಪಿಎಸ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ವೊಡಾಫೋನ್ ಐಡಿಯಾ ಸದ್ಯಕ್ಕೆ 5ಜಿ ಸೇವೆಯನ್ನು ಒದಗಿಸುತ್ತಿಲ್ಲ. ಐಸಿಸಿ ವಿಶ್ವಕಪ್ 2023ರ ಪಂದ್ಯಗಳು ದೇಶದ 10 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಇವುಗಳಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಂತಹ ಹೊಸ ಕ್ರೀಡಾಂಗಣಗಳು ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್‌ನಂತಹವು ಸೇರಿವೆ. ಇದಲ್ಲದೇ ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಲಖನೌ ಮತ್ತು ಧರ್ಮಶಾಲಾ ಕ್ರಿಕೆಟ್ ಮೈದಾನಗಳಲ್ಲೂ ಪಂದ್ಯಗಳು ನಡೆಯಲಿವೆ.
ಈ ಸುದ್ದಿಯನ್ನೂ ಓದಿ: Jio True 5G: ಜಿಯೋ 5ಜಿ ಡೌನ್‌ಲೋಡ್ ವೇಗದಲ್ಲಿ ಮೈಲಿಗಲ್ಲು! ಬಳಕೆದಾರರಿಗೆ 315 ಎಂಪಿಬಿಎಸ್ ಸ್ಪೀಡ್ ಲಭ್ಯ
ಕ್ರಿಕೆಟ್ ಮೈದಾನಗಳಲ್ಲಿ ಒಟ್ಟಾರೆ ಅಪ್‌ಲೋಡ್ ವೇಗದ ವಿಷಯದಲ್ಲಿ ಬಿರುಸಿನ ಪೈಪೋಟಿ ಇತ್ತು. ಏರ್‌ಟೆಲ್‌ನ ಸರಾಸರಿ ಅಪ್‌ಲೋಡ್ ವೇಗವನ್ನು 6.6 ಎಂಬಿಪಿಎಸ್ ಎಂದು ಅಳೆಯಲಾಗಿದ್ದರೆ, ಜಿಯೋ 6.3 ಎಂಬಿಪಿಎಸ್ ಇದೆ. ವೊಡಾಫೋನ್ ಐಡಿಯಾ ಎಂಬಿಪಿಎಸ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಸರಾಸರಿ 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ ಅಗ್ರಸ್ಥಾನದಲ್ಲಿದೆ, ಏರ್‌ಟೆಲ್‌ನ ವೇಗ 26.3 ಎಂಬಿಪಿಎಸ್ ಆಗಿದ್ದರೆ, ರಿಲಯನ್ಸ್ ಜಿಯೋ 21.6 ಎಂಬಿಪಿಎಸ್ ಆಗಿತ್ತು.
ಓಪನ್ ಸಿಗ್ನಲ್ ಐಸಿಸಿ ವಿಶ್ವಕಪ್ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗೆ 5ಜಿ ಸಂಪರ್ಕದ ಲಭ್ಯತೆಯನ್ನು ಪರಿಶೀಲಿಸಿದೆ. ನೆಟ್‌ವರ್ಕ್ ಲಭ್ಯತೆಯನ್ನು ಗ್ರಾಹಕರು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುವ ಸಮಯದಿಂದ ಅಳೆಯಲಾಗುತ್ತದೆ. ವರದಿಯ ಪ್ರಕಾರ, ವಿಶ್ವಕಪ್ ಸ್ಟೇಡಿಯಂಗಳಲ್ಲಿ 5ಜಿ ಲಭ್ಯತೆಯ ವಿಷಯದಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಜಿಯೋ ಗ್ರಾಹಕರು ಶೇ 53ಕ್ಕಿಂತ ಹೆಚ್ಚು ಸಮಯ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದರು. ಆದರೆ ಏರ್‌ಟೆಲ್ ಗ್ರಾಹಕರು 5ಜಿ ನೆಟ್‌ವರ್ಕ್‌ಗೆ ಕೇವಲ ಶೇ 20.7ರಷ್ಟು ಸಮಯವನ್ನು ಮಾತ್ರ ಸಂಪರ್ಕಿಸಬಹುದು. ಇದರ ಪ್ರಕಾರ, ಜಿಯೋದ 5ಜಿ ನೆಟ್‌ವರ್ಕ್‌ನ ಲಭ್ಯತೆ ಏರ್‌ಟೆಲ್‌ಗಿಂತ 2.6 ಪಟ್ಟು ಹೆಚ್ಚು ಎಂದು ದಾಖಲಿಸಲಾಗಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
Google: ಭಾರತೀಯ ಬಳಕೆದಾರರಿಗೆ ಭೂಕಂಪ ಎಚ್ಚರಿಕೆ ಸಿಸ್ಟಮ್ ಫೀಚರ್ ಆರಂಭಿಸಿದ ಗೂಗಲ್
Google: 2020ರಲ್ಲಿ ಘೋಷಣೆ ಮಾಡಿದ್ದ ಭೂಕಂಪ ಎಚ್ಚರಿಕೆಯ ಸಿಸ್ಟಮ್ ಫೀಚರ್ ಅನ್ನು ಗೂಗಲ್ ಈಗ ಭಾರತೀಯ ಬಳಕೆದಾರರಿಗೂ ವಿಸ್ತರಿಸಿದೆ.
ನವದೆಹಲಿ: ಟೆಕ್ ದೈತ್ಯ ಗೂಗಲ್ (Google) ಭಾರತೀಯ ಆ್ಯಂಡ್ರಾಯ್ಡ್ ಬಳಕೆದಾರರಿಗೆ (Android Users) ಭೂಕಂಪದ ಬಗ್ಗೆ ಎಚ್ಚರಿಸುವ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಗೂಗಲ್ ಕಂಪನಿ ಈ ಅರ್ಥ್‌ಕ್ವೇಕ್ ಅಲರ್ಟ್ ಸಿಸ್ಟಮ್ (Earthquake Alert System) ಬಗ್ಗೆ 2020ರಲ್ಲಿ ಘೋಷಣೆ ಮಾಡಿತ್ತು. ಅದನ್ನೀಗ ಭಾರತಕ್ಕೂ ವಿಸ್ತರಿಸುತ್ತಿದೆ ಮತ್ತು ಈ ಕುರಿತು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಕೇಂದ್ರ ಭೂ ವಿಜ್ಞಾನ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA)ಮತ್ತು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ(NCS) ಗೂಗಲ್ ಆಂಡ್ರಾಯ್ಡ್ ಅರ್ಥ್‌ಕ್ವೇಕ್ ಅಲರ್ಟ್ ಸಿಸ್ಟಮ್ ಲಾಂಚ್ ಮಾಡಿದೆ. ಭೂಕಂಪ ಎಚ್ಚರಿಸುವ ಈ ವ್ಯವಸ್ಥೆಯು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಿರುತ್ತದೆ.
ಭೂಕಂಪಗಳು ಸಾಮಾನ್ಯ ನೈಸರ್ಗಿಕ ವಿಪತ್ತುಗಳಗಿವೆ. ಈ ಕುರಿತಾದ ಪೂರ್ವ ಎಚ್ಚರಿಕೆಗಳು ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಪ್ರಮುಖ ವ್ಯತ್ಯಾಸವನ್ನು ಮಾಡಬಹುದು. ಆ್ಯಂಡ್ರಾಯ್ಡ್ ಭೂಕಂಪ ಎಚ್ಚರಿಕೆ ವ್ಯವಸ್ಥೆಯು, ಅಕ್ಸೆಲೆರೊಮೀಟರ್ಸ್ ಎಂದು ಕರೆಯಲಾಗುವ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತ ಸಂವೇದಕಗಳನ್ನು ಬಳಸಿಕೊಳ್ಳುತ್ತದೆ. ಅಕ್ಸೆಲೆರೊಮೀಟರ್‌ಗಳು ಮಿನಿಯೇಚರ್ ಸೀಸ್ಮೋಮೀಟರ್‌ಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಗೂಗಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಪ್ಲಗ್-ಇನ್ ಮತ್ತು ಚಾರ್ಜಿಂಗ್ ಆಂಡ್ರಾಯ್ಡ್ ಫೋನ್ ಭೂಕಂಪದ ಆರಂಭಿಕ ಕಂಪನ ಪತ್ತೆಹಚ್ಚಿದಾಗ, ಅದು ಈ ಡೇಟಾವನ್ನು ಕೇಂದ್ರ ಸರ್ವರ್‌ಗೆ ಕಳುಹಿಸುತ್ತದೆ. ಒಂದೇ ಪ್ರದೇಶದಲ್ಲಿನ ಅನೇಕ ಫೋನ್‌ಗಳು ಒಂದೇ ರೀತಿಯ ಅಲುಗಾಡುವಿಕೆಯನ್ನು ಪತ್ತೆಹಚ್ಚಿದರೆ, ಸರ್ವರ್ ಭೂಕಂಪದ ಗುಣಲಕ್ಷಣಗಳನ್ನು ಅದರ ಕೇಂದ್ರಬಿಂದು ಮತ್ತು ಪರಿಮಾಣವನ್ನು ಒಳಗೊಂಡಂತೆ ಅಂದಾಜು ಮಾಡತ್ತದೆ. ತರುವಾಯ, ಇದು ವೇಗವಾಗಿ ಹತ್ತಿರದ ಆ್ಯಂಡ್ರಾಯ್ಡ್ ಸಾಧನಗಳಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಈ ಎಚ್ಚರಿಕೆಗಳು ಅಂತರ್ಜಾಲದಲ್ಲಿ ಬೆಳಕಿನ ವೇಗದಲ್ಲಿ ಚಲಿಸುತ್ತವೆ, ಹೆಚ್ಚು ತೀವ್ರವಾದ ಅಲುಗಾಡುವಿಕೆಗೆ ಹಲವಾರು ಸೆಕೆಂಡುಗಳ ಮೊದಲು ಬಳಕೆದಾರರನ್ನು ತಲುಪುತ್ತವೆ ಹೀಗೆ ಭೂಕಂಪದ ಅಲರ್ಟ್ ಸಿಸ್ಟಮ್ ಕೆಲಸ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ
ಭೂಕಂಪದ ಅಲರ್ಟ್ ಸಿಸ್ಟಮ್ ಅನ್ನು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಆಂಡ್ರಾಯ್ಡ್ ಬೆಂಬಲಿತ ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ವ್ಯಾಪಕ ಶ್ರೇಣಿಯ ಬಳಕೆದಾರರಿಗೆ ಪ್ರವೇಶವನ್ನು ಖಾತ್ರಿಪಡಿಸುತ್ತದೆ. ಆಂಡ್ರಾಯ್ಡ್ 5 ಮತ್ತು ಅದಕ್ಕಿಂತ ಹೊಸದಾದ ಎಲ್ಲ ಆವೃತ್ತಿಯ ಸಾಧನಗಳಿಗೆ ಈ ಅಲರ್ಟ್ ಸಿಸ್ಟಮ್ ಹೊಂದಾಣಿಕೆಯಾಗುತ್ತದೆ. ಬಳಕೆದಾರರು ಅರ್ಥ್‌ಕ್ವೇಕ್ ನಿಯರ್ ಮೀ ಎಂದು ಸರ್ಚ್ ಕೂಡ ಮಾಡಬಹುದು. ಆಗ, ಸೂಕ್ತ ಮಾಹಿತಿಯನ್ನು ಗೂಗಲ್ ಒದಗಿಸುತ್ತದೆ ಮತ್ತು ಬಳಕೆದಾರರು ಸುರಕ್ಷಿತವಾಗಿರು ನೆರವು ನೀಡುತ್ತದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
ChatGPT: ಚಾಟ್‌ಜಿಪಿಟಿಯಲ್ಲೀಗ ಇಂಟರ್ನೆಟ್ ಬ್ರೌಸ್ ಮಾಡಬಹುದು! ಹೊಸ ಫೀಚರ್‌ನ ಲಾಭ ಏನು?
ChatGPT: ತಂತ್ರಜ್ಞಾನ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಚಾಟ್‌ಜಿಪಿಟಿಗೆ ಹೊಸ ಫೀಚರ್ ಅಳವಡಿಸಲಾಗಿದೆ. ಶೀಘ್ರವೇ ಈ ಹೊಸ ಫೀಚರ್ ಎಲ್ಲ ಬಳಕೆದಾರರಿಗೆ ದೊರೆಯಲಿದೆ.
ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ (Artificial Intelligence Technology) ಕ್ರಾಂತಿ ಮಾಡಿರುವ ಚಾಟ್‌ಜಿಪಿಟಿಗೆ (ChatGPT) ಹೊಸ ಫೀಚರ್ ಪರಿಚಯಿಸಲಾಗಿದೆ. ಈ ಕುರಿತು ಎಕ್ಸ್‌ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮೈಕ್ರೋಸಾಫ್ಟ್ (Microsoft) ಬೆಂಬಲಿತ ಓಪನ್ಎಐ(OpenAI), ಪ್ರಸ್ತುತ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸಲು ಚಾಟ್‌ಜಿಪಿಟಿ ಈಗ ಇಂಟರ್ನೆಟ್ ಬ್ರೌಸ್ (Internet Browse) ಮಾಡಬಹುದು ಎಂದು ಹೇಳಿದೆ. ಈ ಹಿಂದೆ, ಚಾಟ್‌ಜಿಪಿಟಿಯು 2021ರವರೆಗಿನ ಮಾಹಿತಿಯನ್ನು ಒಳಗೊಂಡಿತ್ತು. ಹಾಗಾಗಿ, ರಿಯಲ್ ಟೈಮ್ ಮಾಹಿತಿಯನ್ನು (Real Time Information) ಒದಗಿಸಲು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈಗ ಇಂಟರ್ನೆಟ್ ಬ್ರೌಸಿಂಗ್ ಫೀಚರ್ ಅಳವಡಿಸಿರುವುದರಿಂದ ಬಳಕೆದಾರರಿಗೆ ಸದ್ಯದ ಮಾಹಿತಿ ಕೂಡ ದೊರೆಯಲಿದೆ.
ಹೊಸ ಫೀಚರ್, 2021ಕ್ಕಿಂತ ಹಿಂದಿನ ಮಾಹಿತಿ ಮಾತ್ರವಲ್ಲದೇ, ಇಂಟರ್ನೆಟ್‌ನಲ್ಲಿ ಪ್ರಸ್ತುತದ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸಲಿದೆ. ಇದಕ್ಕಾಗಿ ಬ್ರೌಸ್ ವಿಥ್ ಬಿಂಗ್ ಆಯ್ಕೆಯನ್ನು ನೀಡಲಾಗಿದೆ. ಈ ಫೀಚರ್ ಸದ್ಯಕ್ಕೆ ಶುಲ್ಕ ಪಾವತಿದಾರರಿಗೆ ಮಾತ್ರ ದೊರೆಯುತ್ತಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಓಪನ್ಎಐ ಹೇಳಿದೆ.
ಓಪನ್ ಎಐ ಈ ಹಿಂದೆ ತನ್ನ ಪ್ರೀಮಿಯಂ ಚಾಟ್‌ಜಿಪಿಟಿ ಪ್ಲಸ್ ಕೊಡುಗೆಯೊಳಗೆ ಬಿಂಗ್ ಸರ್ಚ್ ಎಂಜಿನ್ ಮೂಲಕ ಇತ್ತೀಚಿನ ಮಾಹಿತಿಯನ್ನು ಪ್ರವೇಶಿಸಲು ಬಳಕೆದಾರರಿಗೆ ಅನುಮತಿಸುವ ವೈಶಿಷ್ಟ್ಯವನ್ನು ಪರೀಕ್ಷಿಸಿತ್ತು. ಈ ಫೀಚರ್ ಅನ್ನು ಮೇ ತಿಂಗಳಲ್ಲೇ ಸೇರಿಸಲಾಗಿದ್ದರೂ ಬಳಕೆಗೆ ಲಭ್ಯವಿರಲಿಲ್ಲ. ಇದೀಗ ಗೂಗಲ್ ಬ್ರಾಡ್ ರೀತಿಯಲ್ಲೇ ಹೊಸ ಫೀಚರ್ ಅನ್ನು ಇಂಟ್ರಿಗ್ರೇಟ್ ಮಾಡಲಾಗಿದೆ.
ಚಾಟ್‌ಜಿಪಿಟಿಯ ಇಂಟರ್ನೆಟ್ ಬ್ರೌಸಿಂಗ್ ಅವಕಾಶ ಕಲ್ಪಿಸುವ ಮೂಲಕ ಗೂಗಲ್ ಮಾರುಕಟ್ಟೆ ಷೇರ್ ಪಡೆಯಲು ಓಪನ್ ಎಐ ಮುಂದಾಗಿದೆ ಎಂದು ರಿಸ್ಟ್ರಿಬ್ಯೂಟೆಡ್ ಎಐ ರಿಸರ್ಚ್ ಇನ್ಸ್‌ಟಿಟ್ಯೂ ಮ್ತತು ಗೂಗಲ್‌ನ ಎಥಿಕಲ್ ಎಐನ ಮಾಜಿ ಸಂಶೋಧನಾ ವಿಜ್ಞಾನಿ ಅಲೆಕ್ಸ್ ಹೆನ್ನಾ ಹೇಳಿದ್ದಾರೆ.
ChatGPT: ಚಾಟ್‌ಜಿಪಿಟಿ ಜತೆ ನೀವಿನ್ನು ಮಾತನಾಡಬಹುದು! ಹೊಸ ಫೀಚರ್ ಪರಿಚಯಿಸಿದ ಓಪನ್ಎಐ
ಮೈಕ್ರೋಸಾಫ್ಟ್ (Microsoft) ಬೆಂಬಲಿತ ಓಪನ್ಎಐ (OpenAI) ತನ್ನ ಜನರೇಟಿವ್ ಕೃತಕ ಬುದ್ಧಿಮತ್ತೆ (Generative AI) ಆಧರಿತ ಚಾಟ್‌ಬಾಟ್ ಚಾಟ್‌ಜಿಪಿಟಿಗೆ (ChatGPT) ಹೊಸ ಫೀಚರ್ ಪರಿಚಯಿಸಿದೆ. ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತಿರುವ ಚಾಟ್ ಜಿಪಿಟಿ, ಬಳಕೆದಾರರಿಗೆ ಐದು ವಿಭಿನ್ನ ಧ್ವನಿಗಳಲ್ಲಿ ಉತ್ತರಗಳನ್ನು ನೀಡಲು ಮತ್ತು ಅವರು ಸಲ್ಲಿಸುವ ಚಿತ್ರಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ ಎಂದು ಕಂಪನಿಯು ಹೇಳಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿರುವ ಓಪನ್ಎಐ, ಚಾಟ್‌ಜಿಪಿಟಿ ಈಗ ನೋಡುತ್ತದೆ, ಕೇಳುತ್ತದೆ ಮತ್ತು ಮಾತನಾಡುತ್ತದೆ. ಮುಂದಿನ ಎರಡು ವಾರಗಳಲ್ಲಿ ಪ್ಲಸ್ ಬಳಕೆದಾರರು ಚಾಟ್‌ಜಿಪಿಟಿ ಜತೆ ಇಮೇಜ್ ಸಂಭಾಷಣೆ ಜತೆಗೆ ಧ್ವನಿ ಸಂಭಾಷಣೆ ಕೂಡ ನಡೆಸಬಹುದು ಎಂದು ಹೇಳಿದೆ.
ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳು ನಿಮಗೆ ಧ್ವನಿ ಸಂಭಾಷಣೆ ನಡೆಸಲು ಅಥವಾ ಚಾಟ್‌ಜಿಪಿಟಿಗೆ ನೀವು ಏನು ಮಾತನಾಡುತ್ತಿರುವಿರಿ ಎಂಬುದನ್ನು ತೋರಿಸಲು ಅನುಮತಿಸುವ ಮೂಲಕ ಹೊಸ, ಹೆಚ್ಚು ಅರ್ಥಗರ್ಭಿತ ಇಂಟರ್ಫೇಸ್ ಅನ್ನು ಒದಗಿಸುತ್ತವೆ ಎಂದು ಸ್ಯಾಮ್ ಆಲ್ಟ್‌ಮ್ಯಾನ್ ನೇತೃತ್ವದ ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಈ ಸುದ್ದಿಯನ್ನೂ ಓದಿ: ChatGPT: 3 ವರ್ಷವಾದ್ರೂ 17 ವೈದ್ಯರಿಗೆ ಗೊತ್ತಾಗದ ಬಾಲಕನ ಹಲ್ಲು ನೋವಿನ ಕಾರಣ ಪತ್ತೆ ಹಚ್ಚಿದ ಚಾಟ್‌ಜಿಪಿಟಿ!
ಐದು ವಿಭಿನ್ನ ಧ್ವನಿಗಳಲ್ಲಿ ಚಾಟ್‌ಜಾಪಿಟಿಯು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಧ್ವನಿಯನ್ನು ಆಯ್ಕೆ ಮಾಡಬಹುದಾಗಿದೆ. ಪ್ರತಿ ವಿಭಿನ್ನ ಧ್ವನಿಯನ್ನು ರಚಿಸಲು ವೃತ್ತಿಪರ ಧ್ವನಿ ನಟರ ಸಹಾಯವನ್ನು ಪಡೆದಿದೆ. ಹಾಗೆಯೇ ಮಾತನಾಡುವ ಪದಗಳನ್ನು ಪಠ್ಯಕ್ಕೆ ನಕಲಿಸಲು ಕಂಪನಿಯ ಸ್ವಾಮ್ಯದ ವಿಸ್ಪರ್ ಸ್ಪೀಚ್ ಗುರುತಿಸುವಿಕೆ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಓಪನ್ ಎಐ ಹೇಳಿದೆ.
ಚಾಟ್‌ಜಿಪಿಟಿಯ ಹೊಸ ಧ್ವನಿ ಸಾಮರ್ಥ್ಯಗಳು ಹೊಸ ಪಠ್ಯದಿಂದ ಭಾಷಣದ ಮಾದರಿಯಿಂದ ಚಾಲಿತವಾಗಿದೆ. ಓಪನ್ಎಐ ಹೇಳಿಕೊಳ್ಳುವ ಪ್ರಕಾರ, ಪಠ್ಯ ಮತ್ತು ಕೆಲವು ಸೆಕೆಂಡುಗಳ ಮಾತಿನ ಮಾದರಿಗಳಿಂದ ಮಾನವ ತರಹದ ಆಡಿಯೊವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ತಾಂತ್ರಿಕ ವ್ಯವಸ್ಥೆಯು ಇದು ಅನೇಕ “ಸೃಜನಶೀಲ ಮತ್ತು ಪ್ರವೇಶಿಸುವಿಕೆ-ಕೇಂದ್ರಿತ ಅಪ್ಲಿಕೇಶನ್‌ಗಳಿಗೆ” ಬಾಗಿಲು ತೆರೆಯಲಿದೆ ಎಂದು ಓಪನ್ಎಐ ಅಭಿಪ್ರಾಯಪಟ್ಟಿದೆ.
-
ಪ್ರಮುಖ ಸುದ್ದಿ24 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ15 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ