Site icon Vistara News

YouTube: ಯುಟ್ಯೂಬ್‌ ಕಂಟೆಂಟ್ ಕ್ರಿಯೇಟರ್ಸ್‌ಗೆ ಗುಡ್ ನ್ಯೂಸ್! ಉಚಿತವಾಗಿ ವಿಡಿಯೋ ಡಬ್ ಮಾಡಬಹುದು

YouTube logo with Aloud Logo

ನವದೆಹಲಿ: ಯುಟ್ಯೂಬ್ ವಿಡಿಯೋ ಕಂಟೆಂಟ್ ಕ್ರಿಯೇಟರ್ಸ್‌ಗೆ (YouTube Video Content Creators) ಇದು ಶುಭ ಸುದ್ದಿ. ಇನ್ನು ಮುಂದೆ ಯುಟ್ಯೂಬ್ (YouTube) ಉಚಿತವಾಗಿಯೇ ಕಂಟೆಂಟ್ ವಿಡಿಯೋಗಳನ್ನು ಬೇರೆ ಇತರ ಭಾಷೆಗಳಿಗೆ ಡಬ್ (Dub) ಮಾಡಲು ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಯುಟ್ಯೂಬ್ ಹೊಸ ಫೀಚರ್ ‌ಪರಿಚಯಿಸಲು ಮುಂದಾಗಿದೆ. ಗುರುವಾರದ ವಿಡ್‌ಕಾನ್ 2023 (VidCon 2023)ನಲ್ಲಿ ಯುಟ್ಯೂಬ್, ಗೂಗಲ್‌ನ ಏರಿಯಾ 120 ಇನ್‌ಕ್ಯುಬೆಟರ್‌‌ನ ಉತ್ಪನ್ನವಾದ ಅಲೌಡ್(Aloud)ವನ್ನು ಡಬ್‌ ಮಾಡಲು ಬಳಸುವುದಾಗಿ ಘೋಷಿಸಿತು.

ಅಲೌಡ್‌ ಎಐ ಚಾಲಿತ ಡಬ್ಬಿಂಗ್ ಉತ್ಪನ್ನವಾಗಿದೆ. ಗೂಗಲ್ ಕಳೆದ ವರ್ಷ ಈ ಉತ್ಪನ್ನವನ್ನು ಲಾಂಚ್ ಮಾಡಿತ್ತು. ವಿಡಿಯೋ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ಅನುವಾದ ಮಾಡುತ್ತದೆ ಮತ್ತು ಅದರ ಡಬ್ಬಿಂಗ್ ಆವೃತ್ತಿಯನ್ನು ಉತ್ಪಾದಿಸುತ್ತದೆ. ಡಬ್ ಜನರೇಟ್ ಮಾಡುವ ಮುಂಚೆಯೇ ಬಳಕೆದಾರರಿಗೆ ಪರಿಶೀಲಿಸಲು ಮತ್ತು ಎಡಿಟ್ ಮಾಡಲು ಅವಕಾಶವನ್ನೂ ಕಲ್ಪಿಸುತ್ತದೆ. ಕಂಟೆಂಟ್ ಕ್ರಿಯೇಟರ್ಸ್ ತಮ್ಮ ವಿಡಿಯೋ ಕಂಟೆಂಟ್ ಅನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲು ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಅವಲಂಬಿಸಿದ್ದರು. ಇದೀಗ ಯುಟ್ಯೂಬ್ ಆ ಕೆಲಸವನ್ನು ತಾನೇ ಮಾಡಲಿದೆ.

ಈ ಸುದ್ದಿಯನ್ನೂ ಓದಿ: ‌YouTube : ಯೂಟ್ಯೂಬ್‌ ನೂತನ ಸಿಇಒ ಆಗಿ ಭಾರತೀಯ ಮೂಲದ ನೀಲ್‌ ಮೋಹನ್‌ ನೇಮಕ

ಅಲೌಡ್‌ ಸದ್ಯ ಇಂಗ್ಲಿಷ್, ಪೋರ್ಚುಗೀಸ್, ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿವಿದೆ. ಶೀಘ್ರವೇ ಇದು ಹಿಂದಿ ಮತ್ತು ಭಾಷಾ ಇಂಡೋನೇಷಿಯನ್ ಭಾಷೆಗಳ ಸೇವೆಯವನ್ನು ಒದಗಿಸಲಿದೆ. ಯುಟ್ಯೂಬ್‌ನ ಕ್ರಿಯೇಟರ್‌ ಪ್ರಾಡಕ್ಟ್ಸ್‌ನ ಉಪಾಧ್ಯಕ್ಷ ಅಮ್ಜದ್ ಹನೀಫ್ ಅವರು, ಈಗಾಗಲೇ ನೂರಾರು ಕಂಟೆಂಟ್ ಕ್ರಿಯೇಟರ್ಸ್ ಅವರು ಈ ಅಲೌಡ್ ಟೂಲ್ ಬಳಸುತ್ತಿದ್ದಾರೆ. ಶೀಘ್ರವೇ ಈ ಟೂಲ್ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ. ಭವಿಷ್ಯದಲ್ಲಿ, ಧ್ವನಿ ಸಂರಕ್ಷಣೆ, ತುಟಿ ಮರು-ಅನಿಮೇಷನ್ ಮತ್ತು ಭಾವನೆ ವರ್ಗಾವಣೆಯಂತಹ ಕಾರ್ಯಗಳನ್ನು ಸೇರಿಸಲು ಜನರೇಟಿವ್ ಎಐ ಅಲೌಡ್ ಅನ್ನು ಅನುಮತಿಸುತ್ತದೆ ಎಂದು ಹನೀಫ್ ಹೇಳಿದ್ದಾರೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version