Site icon Vistara News

Content Creators | ಯುಟ್ಯೂಬ್‌ನಿಂದ 7 ಲಕ್ಷ ಉದ್ಯೋಗ, ದೇಶದ ಜಿಡಿಪಿಗೆ 6,800 ಕೋಟಿ ರೂ. ಕೊಡುಗೆ!

YouTube

ನವ ದೆಹಲಿ: ಭಾರತದ ಕ್ರಿಯೇಟಿವ್ ಆರ್ಥಿಕತೆ ಈಗ ಫುಲ್‌ ಬೂಮಿಂಗ್‌ನಲ್ಲಿದ್ದು, ಯುಟ್ಯೂಬ್‌ನಲ್ಲಿ ಸ್ಥಳೀಯ ಕ್ರಿಯೇಟರ್‌ಗಳು (Content Creators) ದೇಶದ ಆರ್ಥಿಕತೆಗೆ(ಜಿಡಿಪಿ) ವಾರ್ಷಿಕ 6,800 ಕೋಟಿ ರೂ. ಕೊಡುಗೆ ನೀಡುತ್ತಿದ್ದಾರೆ. ಜತೆಗೆ, ಸುಮಾರು 7 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂಬ ಮಾಹಿತಿಯನ್ನು ಯುಟ್ಯೂಬ್ (YouTube) ಹೊರ ಹಾಕಿದೆ. ಯುಟ್ಯೂಬ್‌ನ ಚೀಫ್ ಪ್ರಾಡಕ್ಟ್ ಆಫೀಸರ್ ಮತ್ತು ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿರುವ ನೀಲ್ ಮೋಹನ್ ಅವರು ತಿಳಿಸಿದ್ದಾರೆ.

ಆಬ್ಸರ್ವರ್ ರಿಸರ್ಚ್ ಫೌಂಡೇಷನ್(ಒಆರ್‌ಎಫ್) ಸಂಘಟಿಸಿದ್ದ Technology, Innovation and Society ಸಮಾವೇಶದಲ್ಲಿ ವರ್ಚವಲ್ ಆಗಿ ಮಾತನಾಡಿದ ನೀಲ್ ಮೋಹನ್ ಅವರು, ಭಾರತದಲ್ಲಿ ನಿಜವಾಗಲೂ ಕ್ರಿಯೇಟರ್ ಆರ್ಥಿಕ ಹೆಚ್ಚು ಅರಳುತ್ತಿದೆ. 7 ಲಕ್ಷ ಉದ್ಯೋಗ ಸೃಷ್ಟಿಯಿಂದ ಭಾರತದ ಆರ್ಥಿಕತೆಗೆ ಸುಮಾರು 6,800 ಕೋಟಿ ರೂ. ಕಾಣಿಕೆಯನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು.

ಕ್ರಿಯೇಟರ್ಸ್‌ಗೆ ತಮ್ಮ ವೀಕ್ಷಕರನ್ನು ಸೃಷ್ಟಿಸಲು ಮಾತ್ರವೇ ಅವಕಾಶ ಕಲ್ಪಿಸದೇ ಯುಟ್ಯೂಬ್, ವ್ಯಾಪಾರವನ್ನು ಬೆಳೆಸಲು ಆರ್ಥಿಕ ಅವಕಾಶಗಳನ್ನೂ ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದರು. ಯುಟ್ಯೂಬ್ ಜಾಹೀರಾತುಪ್ರೇರಿತ ಮಾಧ್ಯಮ ವೇದಿಕೆಯಾಗಿದ್ದು, ವಿಶೇಷ ಸಣ್ಣ ವ್ಯಾಪಾರ ಸೇರಿದಂತೆ ಎಲ್ಲ ಮಾದರಿಯ ವ್ಯಾಪರೋದ್ಯಮ ಬೆಳವಣಿಗೆಗೆ ನೆರವು ಒದಗಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕ್ರಿಯೇಟಿವ್ ಸಕ್ಸೆಸ್ ಎಂದು ವ್ಯಾಖ್ಯಾನಿಸುವುದಾದರೆ ನಮ್ಮ ವೇದಿಕೆಯಲ್ಲಿ ಲಿಂಗ ವೈವಿಧ್ಯತೆಯೊಂದಿಗೆ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೆ ಪ್ರಾತಿನಿಧಿತ್ವ ನೀಡಲಾಗಿದೆ. ಈ ವೇದಿಕೆ ಸುರಕ್ಷಿತವಾಗಿ ಮತ್ತು ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಬಳಕೆದಾರರಿಗೂ ಜಾಗ ಒದಗಿಸುವ ಟೂಲ್‌ಗಳನ್ನು ಹೊಂದಿದೆ ಎಂದು ನೀಲ್ ಮೋಹನ್ ತಿಳಿಸಿದ್ದಾರೆ.

ಇದನ್ನೂ ಓದಿ | 45 Videos Blocked | ಅಗ್ನಿಪಥ ಕುರಿತು ಸುಳ್ಳು ಮಾಹಿತಿ, ಯುಟ್ಯೂಬ್‌ನ 45 ವಿಡಿಯೊ ಬ್ಲಾಕ್‌ ಮಾಡಿದ ಕೇಂದ್ರ

Exit mobile version