Site icon Vistara News

ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಪಣಜಿ : ನಾಯಿ ಬಗ್ಗೆ ಸಾಕಷ್ಟು ಹಾಡುಗಳನ್ನು ಹಾಗೇ ಅಲ್ಲಲ್ಲಿ ನಾಯಿ ಪ್ರೇಮಿಗಳನ್ನ ನಾವು ನೋಡ್ತಾ ಇರ್ತೇವೆ. ಅಷ್ಟೇ ಅಲ್ಲದೇ ಸಾಕಷ್ಟು ಶ್ವಾನಗಳ ರೀಲ್ಸ್‌ಗಳು, ಶ್ವಾನದ ಸ್ಪರ್ಧೆ ಹಾಗೇ ಅನೇಕ ಸಿನಿಮಾಗಳು, ಕಾರ್ಟೂನ್‌ ಹೀಗೆ ಪಟ್ಟಿ ಮಾಡ್ತಾ ಹೋದ್ರೆ ಸಾಕಷ್ಟು ವಿಚಾರಗಳು ಸಿಗುತ್ತಲೇ ಇರುತ್ತವೆ. ನಾಯಿಯ ಕೇಂದ್ರಿತವಾದ ಕಥೆಯನ್ನಾಧರಿಸಿದ ಚಾರ್ಲಿ ಚಲನಚಿತ್ರ ಸದ್ಯದಲ್ಲೆ ಕನ್ನಡದಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿದೆ. ಇಲ್ಲಿನ ಕಥೆಯಲ್ಲಿ ಅದೇ ರೀತಿಯಲ್ಲಿ, ಶ್ವಾನ ಪ್ರೇಮಿಯ ಭಾವನಾತ್ಮಕವಾದ ಸಂಬಂಧ ಹೊಂದಿರುವ ವಿಶೇಷ ಪಯಣ ಇದೆ.

ತನ್ನ ಶ್ವಾನಕ್ಕೋಸ್ಕರ ಆಲ್‌ ಇಂಡಿಯಾ ಟೂರ್‌ ಮಾಡ್ತಾ ಇರೋ ವಿಶೇಷ ವ್ಯಕ್ತಿತ್ವ ಇರೋದು ಮಧ್ಯಪ್ರದೇಶದಲ್ಲಿ. 26 ವರ್ಷದ ರಜತ್‌ ಪರಾಶರ ಅವರು ತನ್ನ ಸಾಕಿದ ನಾಯಿಯೊಡನೆ ಆಲ್‌ ಇಂಡಿಯಾ ಟೂರ್‌ ಮಾಡ್ತಾ ಇರೋ ನಾಯಿ ಪ್ರೇಮಿ. ಹೌದು. ಜರ್ಮನ್‌ ಶೆಫರ್ಡ್‌ ತಳಿಯ ಮ್ಯಾಗಿ ಎಂದೇ ಕ್ಯೂಟ್‌ ಆಗಿ ಹೆಸರನ್ನು ಹೊಂದಿದ ಈ ಶ್ವಾನಕ್ಕೆ ಆಲ್‌ ಇಂಡಿಯಾ ಪ್ರವಾಸವನ್ನ ಮಾಲಿಕ ತೋರಿಸ್ತಾ ಇರೋದು ವಿಶೇಷ. ಸದ್ಯ ಇವರು ಅನೇಕ ಸ್ಥಳಗಳನ್ನು ನೋಡಿಕೊಂಡು ಗೋವಾದ ಪಣಜಿಗೆ ಆಗಮಿಸಿದ್ದಾರೆ.

ಬುಲೆಟ್‌ ಬೈಕ್‌ನಲ್ಲಿ ಹಿಂದೆ ನಾಯಿಗೆ ಎಂತಲೇ ಸೀಟನ್ನು ತಯಾರಿಸಿದ್ದು, ಕ್ಟೂಟ್‌ ಕಪಲ್ಸ್‌ ತಿರುಗಾಡುವಂತೆ ಇವರಿಬ್ಬರ ಜರ್ನಿ ಶುರುವಾಗಿದೆ. ಆದರೆ ಇವರಿಬ್ಬರ ಜರ್ನಿ ಬಗ್ಗೆ ಕಾರಣ ಕೇಳಿದ್ರೆ ಎಂತವರಾದರೂ ಭಾವುಕರಾಗೋದು ಖಂಡಿತ. ದುರಾದೃಷ್ಟವಶಾತ್‌ ನಾಯಿಗೆ ಟ್ಯೂಮರ್‌ ಆಗಿದ್ದು, ಆಪ್‌ರೇಷನ್‌ ಕೂಡ ಮಾಡಲಾಗಿತ್ತು. ಆದರೆ ವೈದ್ಯರು ಹೇಳಿರುವ ಪ್ರಕಾರ ನಾಯಿ ಉಳಿಯುವುದು ಸ್ವಲ್ಪ ದಿನ ಎಂದು ತಿಳಿದುಬಂದಿದೆ. ಇರುವಷ್ಟು ದಿನ ತನ್ನ ಶ್ವಾನವನ್ನು ಸಂತೋಷವಾಗಿ ಇಡಬೇಕು ಎನ್ನುವುದೇ ರಜತ್‌ ಪರಾಶರ ಅವರ ಆಸೆಯಾಗಿತ್ತು. ಮ್ಯಾಗಿ ಜೊತೆ ಮ್ಯಾರವಲ್‌ ಕೂಡ ಪ್ರಯಾಣದಲ್ಲಿ ಸಹಭಾಗಿ ಅನ್ನೋದು ತಿಳಿದರಲೇ ಬೇಕು.

ಇದನ್ನೂ ಓದಿ | ಖಲಿಸ್ತಾನ್‌ ಲಿಂಕ್ ಹೊಂದಿದ್ದ ನಾಲ್ವರ ಸೆರೆ, ತೆಲಂಗಾಣಕ್ಕೆ ಸಾಗುತ್ತಿತ್ತು ಭಾರಿ ಪ್ರಮಾಣದ ಶಸ್ತ್ರಾಸ್ತ್ರ

ಮ್ಯಾಗಿಗೆ ಜರ್ನಿ ಮಾಡುವಾಗ ಹೈರಾಣು ಆಗಬಾರದು ಎಂದು ಕುಷನ್‌ ಬಾಸ್ಕೆಟ್‌ ಫಾಸ್ಟ್‌ನ್ಡ್‌ ಸೀಟು ಜೊತೆ ಪಿಲ್ಲೋ, ಸೀಟ್‌ ಬೆಲ್ಟ್‌ ಬಾರುಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಹೆಲ್‌ ಮೆಟ್‌ ಮತ್ತು ಗೊಗಲ್ ಧರಿಸಿ ಇವರಿಬ್ಬರೂ ಪ್ರಯಾಣ ಮಾಡುವ ದೃಶ್ಯ ಏಂಥವರನ್ನೂ ನಾಚಿಸುವಂತಿದೆ. ಮ್ಯಾಗಿ ನಮ್ಮ ಕುಟುಂಬದ ಸದಸ್ಯಳಲ್ಲಿ ಒಬ್ಬಳು. ನಮಗೂ ಮ್ಯಾಗಿಗೂ ಸ್ಟ್ರಾಂಗ್‌ ಬಾಂಡಿಂಗ್‌ ಇದೆ ಎನ್ನುತ್ತಾರೆ ರಜತ್.‌ ಬೈಕ್‌ ಸೌಂಡ್‌ ಕೇಳಿದರೆ ಸಾಕು ಸದಾ ಕುಪ್ಪರಿಸಿ ನೆಗೆಯುವ ಅವಳ ಸಂತೋಷಕ್ಕೆ, 2020 ರಲ್ಲಿ ಅವಳಿಗೆ ಟ್ಯೂಮರ್‌ ಖಾಯಿಲೆ ಇದೆ ಎಂಬ ಸುದ್ದಿ ಬಿದ್ದ ಕೂಡಲೇ ಟೂರ್‌ಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ. ಟ್ಯೂಮರ್‌ ಬಂದಾಗ ಅವಳು ಊಟವನ್ನು ಮಾಡುತ್ತ ಇರಲಿಲ್ಲ, ಐದು ಟ್ಯೂಮರ್‌ ಗಳು ಅದಾಗಲೇ ಅವಳನ್ನು ಆವರಿಸಿತ್ತು. ಮುಂಬೈನ ವೆಟರ್ನರಿ ಕ್ಯಾನ್ಸ್‌ರ್‌ ಹಾಸ್ಟಿಟಲ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನೂ ಕೂಡ ನೀಡಲಾಗಿತ್ತು.

ಸರ್ಜರಿ ಆದ ಬಳಿಕ ಮ್ಯಾಗಿ ಸ್ವಲ್ಪ ಚೇತರಿಸಿಕೊಂಡಿದ್ದಳು. ಅವಳೊಂದಿಗೆ ಅವತ್ತೆ ಟ್ರಿಪ್‌ ಹೋಗಲು ನಿರ್ಧರಿಸಿದ್ದೆ. ಈಗ ಅವಳು ಬೈಕ್‌ ರೈಡ್‌ ಅನ್ನು ತುಂಬಾ ಎಂಜಾಯ್‌ ಮಾಡುತ್ತಿದ್ದಾಳೆ ಎನ್ನುತ್ತಾರೆ ರಜತ್.‌

ಟ್ಯೂಮರ್‌ ಆದ ಸ್ವಲ್ಪ ದಿನದಲ್ಲಿಯೇ ಆರು ತಿಂಗಳ ಹಿಂದೆ ಗ್ವಾಲಿಯರ್‌, ಮಹಾರಾಷ್ಟ್ರ, ದೆಲ್ಲಿ, ಪಂಜಾಬ್‌, ಹರಿಯಾಣ, ರಾಜಸ್ತಾನ, ಕಾಶ್ಮೀರ್‌, ಅದಾಗಲೇ ಟೂರ್‌ ಮಾಡಿದ್ದರು. ಜಮ್ಮು ಕ್ಯಾಂಪೇನ್‌ ಸಮಯದಲ್ಲಿ ವಾಸ ವಿದ್ದಾಗ ಮ್ಯಾಗಿಯ (@dogebiker) ಐಡಿಯನ್ನು ನೋಡಿ ಎಷ್ಟೋ ಜನರು ನಮ್ಮನ್ನು ಮನೆಗೂ ಆಹ್ವಾನಿಸುತ್ತಿದ್ದರು. ಗೋವಾದಲ್ಲಿ ಕೂಡ ಇದೇ ಸಂಗತಿಗಳು ಎದುರಾಗಿತ್ತು.

ಸರಳ ಆಹಾರವನ್ನ ಇಷ್ಟ ಪಡುವ ಮ್ಯಾಗಿ ಸದಾ ಹಾಲು ಮತ್ತು ಟೊಮ್ಯಾಟೋ, ಚಪಾತಿ ಅನ್ನು ಇಷ್ಟ ಪಡುತ್ತಾಳೆ. ಆದರೆ ಈಗ ಸ್ವಲ್ಪ ಹಣದ ಸಮಸ್ಯೆಯನ್ನು ಎದುರಿಸುತ್ತಿರುವ ಪರಾಶರ್‌ ದಕ್ಷಿಣದ ಪ್ರವಾಸಕ್ಕೆ ಹೋಗದೆ ಪ್ರವಾಸವನ್ನು ನಿಲ್ಲಿಸಿದ್ದಾರೆ. ಇದೀಗ ರಜತ್‌ ಪರಾಶರ ತನ್ನ ನಾಯಿ ಪ್ರೇಮಕ್ಕೆ ಮ್ಯಾಗಿ ಹೆಸರಲ್ಲಿ ಚಾರಿಟಿ ಅನ್ನು ಶುರು ಮಾಡುವ ಕನಸನ್ನು ಹೊತ್ತಿದ್ದಾರೆ. ಅಂತೆಯೇ ಸಾಕು ಪ್ರಾಣಿಗಳಿಗೆ ಸಹಾಯ ಮಾಡುವ ಅಭಿಲಾಷೆ ಮತ್ತು ಮ್ಯಾಗಿ ಜೀವಂತ ಇರುವವರೆಗೆ ಅವಳನ್ನು ಸದಾ ಖುಷಿಯಲ್ಲಿ ಇರಿಸುವ ಬಯಕೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ | ಬಾಗಲಕೋಟೆಯಲ್ಲಿ ಮೊಸಳೆ ಪಾರ್ಕ್‌ ಆರಂಭಿಸಿ ಎಂದು ಅಂಗಲಾಚುತ್ತಿರುವ ಜನರು

Exit mobile version