ಯುಎಸ್ ಅಧ್ಯಕ್ಷ ಜೋ ಬೈಡೆನ್ ಪತ್ನಿ, ಪ್ರಥಮ ಮಹಿಳೆ (US First Lady) ಜಿಲ್ ಬೈಡೆನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪತಿ ಡೌಗ್ ಎಂಹಾಫ್ ಅವರ ತುಟಿಗೆ ಮುತ್ತಿಟ್ಟಿದ್ದಾರೆ (Jill Biden kissed Doug Emhoff). ಈ ವಿಡಿಯೊವನ್ನು ಬೆನ್ನಿ ಜಾನ್ಸನ್ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಕ್ಯಾಪಿಟಲ್ ಹಿಲ್ನಲ್ಲಿ ಮಂಗಳವಾರ ಸಂಜೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಸ್ಟೇಟ್ಸ್ ಆಫ್ ನೇಶನ್ ಭಾಷಣ ಮಾಡಿದರು. ಸ್ಟೇಟ್ಸ್ ಆಫ್ ನೇಶನ್ ಭಾಷಣದಲ್ಲಿ ಅವರು ದೇಶದ ಆರ್ಥಿಕತೆ, ಅಭಿವೃದ್ಧಿ, ಸಾಧನೆ ಬಗ್ಗೆ ಮಾತನಾಡಿದರು. ಅದಾದ ಬಳಿಕ ರಷ್ಯಾ-ಉಕ್ರೇನ್ ಯುದ್ಧ, ಕೊವಿಡ್ 19 ಸಾಂಕ್ರಾಮಿಕದ ಬಗ್ಗೆಯೂ ಉಲ್ಲೇಖ ಮಾಡಿದರು. ‘ಕೊವಿಡ್ 19 ಸೋಂಕು ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ಜಾಗತಿಕವಾಗಿ ಉಂಟಾಗುತ್ತಿರುವ ದುಷ್ಪರಿಣಾಮದ ಮಧ್ಯೆಯೂ ಇಡೀ ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಅಮೆರಿಕ’ ಎಂದು ಅವರು ಹೇಳಿದರು.
ಇದನ್ನೂ ಓದಿ: Joe Biden : ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿವಾಸದಲ್ಲಿ ಎಫ್‌ಬಿಐ ಶೋಧ, 6 ರಹಸ್ಯ ದಾಖಲೆಗಳು ಪತ್ತೆ
ಕ್ಯಾಪಿಟಲ್ ಹಿಲ್ನಲ್ಲಿ ನಡೆದ ಅಧ್ಯಕ್ಷರ ಸ್ಟೇಟ್ಸ್ ಆಫ್ ನೇಶನ್ ಭಾಷಣದಲ್ಲಿ ಪಾಲ್ಗೊಂಡಿದ್ದ ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್, ಅಲ್ಲಿಗೆ ಆಗಮಿಸಿದ್ದ ಉಪಾಧ್ಯಕ್ಷೆ ಜಿಲ್ ಬೈಡೆನ್ ಅವರು ಎಲ್ಲರಿಗೂ ಕೈಕುಲುಕಿ ವಿಶ್ ಮಾಡುತ್ತ ಬಂದಿದ್ದಾರೆ. ಕಮಲಾ ಹ್ಯಾರಿಸ್ ಪತಿ ಡೌಗ್ ಎಂಹಾಫ್ಗೆ ಮೊದಲು ಶೇಕ್ ಹ್ಯಾಂಡ್ ಮಾಡಿ ಬಳಿಕ ತುಟಿಗೆ ಮುತ್ತಿಟ್ಟಿದ್ದಾರೆ. ಅಮೆರಿಕದಲ್ಲಿ ಪರಸ್ಪರ ಭೇಟಿಯಾದಾಗ ಹೀಗೆ ಅಪ್ಪಿಕೊಳ್ಳುವುದು-ಚುಂಬಿಸಿಕೊಳ್ಳುವುದು ದೊಡ್ಡ ವಿಷಯ ಅಲ್ಲದೆ ಹೋದರೂ, ಯುಎಸ್ ಅಧ್ಯಕ್ಷನ ಪತ್ನಿ, ಉಪಾಧ್ಯಕ್ಷೆಯ ಪತಿಗೆ ಹೀಗೆ ಯುಎಸ್ ಸದನದಲ್ಲೇ ತುಟಿಗೆ ಮುತ್ತಿಟ್ಟಿದ್ದರ ಬಗ್ಗೆ ಚರ್ಚೆ ಶುರುವಾಗಿದೆ.