Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ - Vistara News

ವೈರಲ್ ನ್ಯೂಸ್

Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ

ಕ್ಯಾಪಿಟಲ್​ ಹಿಲ್​ನಲ್ಲಿ ಮಂಗಳವಾರ ಸಂಜೆ ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಅವರು ಸ್ಟೇಟ್ಸ್​ ಆಫ್​ ನೇಶನ್​​ ಭಾಷಣ ಮಾಡಿದರು. ಈ ವೇಳೆ ಜಿಲ್​ ಬೈಡೆನ್​ ಕೂಡ ಪಾಲ್ಗೊಂಡಿದ್ದರು.

VISTARANEWS.COM


on

Joe Biden Wife Jill Biden kisses Kamala Harris Husband Doug Emhoff
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯುಎಸ್ ಅಧ್ಯಕ್ಷ ಜೋ ಬೈಡೆನ್​ ಪತ್ನಿ,​ ಪ್ರಥಮ ಮಹಿಳೆ (US First Lady) ಜಿಲ್ ಬೈಡೆನ್​ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿ ಡೌಗ್ ಎಂಹಾಫ್ ಅವರ ತುಟಿಗೆ ಮುತ್ತಿಟ್ಟಿದ್ದಾರೆ (Jill Biden kissed Doug Emhoff). ಈ ವಿಡಿಯೊವನ್ನು ಬೆನ್ನಿ ಜಾನ್ಸನ್​ ಎಂಬುವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕ್ಯಾಪಿಟಲ್​ ಹಿಲ್​ನಲ್ಲಿ ಮಂಗಳವಾರ ಸಂಜೆ ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಅವರು ಸ್ಟೇಟ್ಸ್​ ಆಫ್​ ನೇಶನ್​​ ಭಾಷಣ ಮಾಡಿದರು. ಸ್ಟೇಟ್ಸ್​ ಆಫ್​ ನೇಶನ್​ ಭಾಷಣದಲ್ಲಿ ಅವರು ದೇಶದ ಆರ್ಥಿಕತೆ, ಅಭಿವೃದ್ಧಿ, ಸಾಧನೆ ಬಗ್ಗೆ ಮಾತನಾಡಿದರು. ಅದಾದ ಬಳಿಕ ರಷ್ಯಾ-ಉಕ್ರೇನ್​ ಯುದ್ಧ, ಕೊವಿಡ್​ 19 ಸಾಂಕ್ರಾಮಿಕದ ಬಗ್ಗೆಯೂ ಉಲ್ಲೇಖ ಮಾಡಿದರು. ‘ಕೊವಿಡ್​ 19 ಸೋಂಕು ಮತ್ತು ರಷ್ಯಾ-ಉಕ್ರೇನ್​ ಯುದ್ಧದಿಂದ ಜಾಗತಿಕವಾಗಿ ಉಂಟಾಗುತ್ತಿರುವ ದುಷ್ಪರಿಣಾಮದ ಮಧ್ಯೆಯೂ ಇಡೀ ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಅಮೆರಿಕ’ ಎಂದು ಅವರು ಹೇಳಿದರು.

ಇದನ್ನೂ ಓದಿ: Joe Biden : ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನಿವಾಸದಲ್ಲಿ ಎಫ್‌ಬಿಐ ಶೋಧ, 6 ರಹಸ್ಯ ದಾಖಲೆಗಳು ಪತ್ತೆ

ಕ್ಯಾಪಿಟಲ್​ ಹಿಲ್​​ನಲ್ಲಿ ನಡೆದ ಅಧ್ಯಕ್ಷರ ಸ್ಟೇಟ್ಸ್​ ಆಫ್​ ನೇಶನ್​ ಭಾಷಣದಲ್ಲಿ ಪಾಲ್ಗೊಂಡಿದ್ದ ಜೋ ಬೈಡೆನ್​ ಪತ್ನಿ ಜಿಲ್ ಬೈಡೆನ್​, ಅಲ್ಲಿಗೆ ಆಗಮಿಸಿದ್ದ ಉಪಾಧ್ಯಕ್ಷೆ ಜಿಲ್​ ಬೈಡೆನ್​ ಅವರು ಎಲ್ಲರಿಗೂ ಕೈಕುಲುಕಿ ವಿಶ್ ಮಾಡುತ್ತ ಬಂದಿದ್ದಾರೆ. ಕಮಲಾ ಹ್ಯಾರಿಸ್ ಪತಿ ಡೌಗ್ ಎಂಹಾಫ್​​ಗೆ ಮೊದಲು ಶೇಕ್​ ಹ್ಯಾಂಡ್ ಮಾಡಿ ಬಳಿಕ ತುಟಿಗೆ ಮುತ್ತಿಟ್ಟಿದ್ದಾರೆ. ಅಮೆರಿಕದಲ್ಲಿ ಪರಸ್ಪರ ಭೇಟಿಯಾದಾಗ ಹೀಗೆ ಅಪ್ಪಿಕೊಳ್ಳುವುದು-ಚುಂಬಿಸಿಕೊಳ್ಳುವುದು ದೊಡ್ಡ ವಿಷಯ ಅಲ್ಲದೆ ಹೋದರೂ, ಯುಎಸ್​ ಅಧ್ಯಕ್ಷನ ಪತ್ನಿ, ಉಪಾಧ್ಯಕ್ಷೆಯ ಪತಿಗೆ ಹೀಗೆ ಯುಎಸ್​ ಸದನದಲ್ಲೇ ತುಟಿಗೆ ಮುತ್ತಿಟ್ಟಿದ್ದರ ಬಗ್ಗೆ ಚರ್ಚೆ ಶುರುವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

IndiGo Flight: ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

IndiGo Flight
Koo

ಮುಂಬೈ: ಬಸ್‌, ರೈಲಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ನೋಡಿದ್ದೇವೆ. ಹಲವರು ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸುವುದನ್ನು ಗಮನಿಸಿದ್ದೇವೆ. ಇದೀಗ ವಿಮಾನದ ಸರದಿ. ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (CSMIA)ದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಮುಂಬೈಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ (IndiGo Flight)ದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ (ಮೇ 21) ಟೇಕ್ ಆಫ್ ಆಗುವ ಮೊದಲು ಓವರ್ ಬುಕ್ ಮಾಡಿದ್ದ ಪ್ರಯಾಣಿಕನನ್ನು ಸಿಬ್ಬಂದಿ ಗುರುತಿಸಿದ್ದು, ನಂತರ ಆತನನ್ನು ಇಳಿಸಿ ಸ್ವಲ್ಪ ತಡವಾಗಿ ವಿಮಾನ ಹೊರಡಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ವಿವರ

ಮಂಗಳವಾರ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.50ಕ್ಕೆ ಇಂಡಿಗೊ 6ಇ 6543 (6E 6543) ವಿಮಾನ ಹಾರಲು ಸಿದ್ಧತೆ ನಡೆಸಿತ್ತು. ಇನ್ನೇನು ಹಾರಾಟ ನಡೆಸಬೇಕು ಎನ್ನುವಷ್ಟರಲ್ಲಿ ವಿಮಾನದ ಹಿಂಭಾಗದಲ್ಲಿ ಪುರುಷ ಪ್ರಯಾಣಿಕರೊಬ್ಬ ನಿಂತಿರುವ ಬಗ್ಗೆ ಸಿಬ್ಬಂದಿ ಪೈಲಟ್‌ಗೆ ಎಚ್ಚರಿಕೆ ನೀಡಿದ್ದರು. ಬಳಿಕ ವಿಮಾನವನ್ನು ನಿಲ್ದಾಣದಲ್ಲೇ ಲ್ಯಾಂಡ್‌ ಮಾಡಲಾಯಿತು.

ಅಧಿಕಾರಿಗಳು ಹೇಳೋದೇನು?

ಘಟನೆಯ ಬಗ್ಗೆ ಮಾತನಾಡಿದ ಇಂಡಿಗೊ ಏರ್‌ಲೈನ್ಸ್‌ ವಕ್ತಾರರು, “ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಕಾಯ್ದಿರಿಸಿದ ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣ. ವಿಮಾನ ಹೊರಡುವ ಮೊದಲು ದೋಷವನ್ನು ಗಮನಿಸಲಾಯಿತು ಮತ್ತು ನಿಂತಿದ್ದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಇದರಿಂದ ವಿಮಾನದ ನಿರ್ಗಮಕ್ಕೆ ಸ್ವಲ್ಪ ವಿಳಂಬವಾಯಿತು. ಇಂಡಿಗೊ ತನ್ನ ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಘಟನೆಗೆ ವಿಷಾಧ ವ್ಯಕ್ತಪಡಿಸುತ್ತದೆʼʼ ಎಂದು ಹೇಳಿದ್ದಾರೆ.

ಸೀಟು ಖಾಲಿ ಇರುವುದನ್ನು ತಪ್ಪಿಸಲು ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಓವರ್ ಬುಕ್ ಮಾಡುತ್ತವೆ. ಹೀಗೆ ಟಿಕೆಟ್‌ ಓವರ್‌ ಬುಕ್‌ ಮಾಡಿದ್ದರಿಂದ ಈ ಎಡವಟ್ಟು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊನೆಗೆ ಈ ವಿಮಾನ 8.41ಕ್ಕೆ ನಿಲ್ದಾಣದಿಂದ ಹೊರಟಿದೆ.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

ನಿಯಮ ಏನು ಹೇಳುತ್ತದೆ?

ಈ ಹಿಂದೆ ಬುಕ್‌ ಮಾಡಲಾದ ಟಿಕೆಟ್‌ನಲ್ಲಿ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಿದ ಘಟನೆಯೂ ನಡೆದಿತ್ತು. ಇನ್ನು 2016ರ ನಿಯಮದ ಪ್ರಕಾರ, ನಿಗದಿತ ವಿಮಾನದ ನಿರ್ಗಮನದ ಒಂದು ಗಂಟೆಯೊಳಗೆ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದರೆ ವಿಮಾನಯಾನ ಸಂಸ್ಥೆ ಪರಿಹಾರ ನೀಡಬೇಕಾಗಿಲ್ಲ. ಆದಾಗ್ಯೂ ವಿಮಾನ ಯಾನವು ಬೋರ್ಡಿಂಗ್ ನಿರಾಕರಿಸಿದ 24 ಗಂಟೆಗಳ ಒಳಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದ್ದರೆ ವಿಮಾನಯಾನ ಇಂಧನ ಶುಲ್ಕದ ಜತೆಗೆ ಕಾಯ್ದಿರಿಸಿದ ಒನ್-ವೇ ಮೂಲ ಶುಲ್ಕದ ಶೇ. 200ರಷ್ಟು ಮೊತ್ತವನ್ನು ಪಾವತಿಸಬೇಕು. ಇದರ ಗರಿಷ್ಠ ಮೊತ್ತ 10,000 ರೂ.

Continue Reading

ವೈರಲ್ ನ್ಯೂಸ್

Viral Video: ಅಬ್ಬಾ ಎಂಥಾ ಭೀಕರ ದೃಶ್ಯ! ಸ್ಕೂಟರ್‌ನಲ್ಲಿದ್ದ ದಂಪತಿ ಮೇಲೆ ಏಕಾಏಕಿ ಬಿದ್ದ ಬೃಹತ್‌ ಮರ-ವಿಡಿಯೋ ನೋಡಿ

Viral Video:ಬೊಲ್ಲಾರಾಮ್‌ ಕಂಟೋನ್ಮೆಂಟ್‌ ಆಸ್ಪತ್ರೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ದಂಪತಿ ಬರುತ್ತಿದ್ದರು. ದಂಪತಿ ಆಸ್ಪತ್ರೆ ಗೇಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ದೈತ್ಯ ಮರವೊಂದು ಸ್ಕೂಟರ್‌ ಮೇಲೆ ಉರುಳಿಬಿದ್ದಿದೆ.

VISTARANEWS.COM


on

Viral Video
Koo

ಹೈದರಾಬಾದ್‌: ಸಾವು ಹೇಗೆ, ಎಲ್ಲಿ ಬೇಕಾದರೂ, ಯಾವ ರೂಪದಲ್ಲೂ ನಮ್ಮ ಹಿಂದೆಯೇ ಇರಬಹುದು. ಕೆಲವೊಮ್ಮೇ ಊಹಿಸಲೂ ಆಗದಂತಹ ರೀತಿಯಲ್ಲಿ ಸಾವು ಸಂಭವಿಸುತ್ತದೆ. ಹೈದರಾಬಾದ್‌ನಲ್ಲೊಂದು ಅಂತಹದ್ದೇ ಒಂದು ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಇದ್ದಕ್ಕಿದ್ದಂತೆ ಮರ(Tree Fallen)ವೊಂದು ಉರುಳಿ ಬಿದ್ದಿದ್ದು, ಸ್ಥಳದಲ್ಲೇ ಪತಿ ಕೊನೆಯುಸಿರೆಳೆದಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾ(CCTV)ದಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆಂದು ದಂಪತಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೊಲ್ಲಾರಾಮ್‌ ಕಂಟೋನ್ಮೆಂಟ್‌ ಆಸ್ಪತ್ರೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ದಂಪತಿ ಬರುತ್ತಿದ್ದರು. ದಂಪತಿ ಆಸ್ಪತ್ರೆ ಗೇಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ದೈತ್ಯ ಮರವೊಂದು ಸ್ಕೂಟರ್‌ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾತ್‌ ಮತ್ತೊಂದು ಬೈಕ್‌ ತಕ್ಷಣ ಬ್ರೇಕ್‌ ಹಾಕಿ ನಿಲ್ಲುತ್ತೆ. ಅದರಲ್ಲಿದ್ದ ಸವಾರ ಅಪಾಯದಿಂದ ಪಾರಾಗುತ್ತಾನೆ. ಇದಾದ ತಕ್ಷಣ ಸೆಕ್ಯೂಟಿ ಗಾರ್ಡ್‌ ಹಾಗೂ ಇತರರು ಓಡಿ ಹೋಗಿ ದಂಪತಿ ರಕ್ಷಣೆಗೆ ಮುಂದಾಗುತ್ತಾರೆ. ಅಷ್ಟರಲ್ಲಿ ಪತಿ ಕೊನೆಯುಸಿರೆಳೆದಿದ್ದರು. ತಲೆಗೆ ಏಟು ಬಿದ್ದು ನರಳುತ್ತಿದ್ದಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದು, ಕೆಲವು ಜನರು ಉರುಳಿ ಬಿದ್ದ ಮರವನ್ನು ಕತ್ತರಿಸುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ದಂಪತಿಯನ್ನು ರವೀಂದರ್‌ ಹಾಗೂ ಸರಳಾ ದೇವಿ ಎಂದು ಗುರುತಿಸಲಾಗಿದೆ. ರವೀಂದರ್‌ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವರ್ಷ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗಳ ಮೇಲೆಯೇ ಉರುಳಿ ಬಿದ್ದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. 

ಇದನ್ನೂ ಓದಿ:Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

Continue Reading

ರಾಜಕೀಯ

Janardhan Reddy: ಮಡದಿಗಾಗಿ ಮರವೇರಿ ಮಾವು ಕಿತ್ತುಕೊಟ್ಟ ರೆಡ್ಡಿ: ವಿಡಿಯೊ ವೈರಲ್

Janardhan Reddy: ಮಡದಿಯ ಮಾವಿನ ಕಾಯಿ ತಿನ್ನಬೇಕೆಂಬ ಮನದಾಸೆಯನ್ನು ತೀರಿಸಲು ಶಾಸಕ ಜಿ. ಜನಾರ್ದನರೆಡ್ಡಿ ಅವರು, ಹರಸಾಹಸಪಟ್ಟು ಮಾವಿನ ಮರವೇರಿ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಈ ವಿಡಿಯೊ ಸದ್ಯ ಎಲ್ಲೆಡೆ ವೈರಲ್‌ ಆಗಿದೆ.

VISTARANEWS.COM


on

Janardhan Reddy
Koo

ಗಂಗಾವತಿ: ಮಾವು ಎಂದರೆ ಯಾರಿಗೆ ತಾನೆ ಇಷ್ಟವಿರದು ಹೇಳಿ?… ಮಾವಿನ ತೋಟದಲ್ಲಿ ಸಂಚರಿಸುವಾಗ ಹೇಳಿ-ಕೇಳಿ ಮುದ್ದಿನ ಮಡದಿ ಮಾವು ಬೇಕೆಂದು ಪಟ್ಟು ಹಿಡಿದಾಗ ಆಕೆಯ ಆಸೆ ಪೂರೈಸಲು ಎಂಥವರಾದರೂ ಹರಸಾಹಸ ಮಾಡಲೇಬೇಕು. ಇದಕ್ಕೆ ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ (Janardhan Reddy) ಹೊರತಾಗಿಲ್ಲ. ಮಡದಿಯ ಮಾವಿನ ಕಾಯಿ (Mango) ತಿನ್ನಬೇಕೆಂಬ ಮನದಾಸೆಯನ್ನು ತೀರಿಸಲು ಶಾಸಕ ರೆಡ್ಡಿ, ಹರಸಾಹಸಪಟ್ಟು ಮಾವಿನ ಮರವೇರಿ ಕಾಯಿಯನ್ನು ಕಿತ್ತು ಕೊಡುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದೆ.

ಶಾಸಕ ಜಿ. ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಅವರು, ತಮ್ಮ ಮಾವಿನ ತೋಟದಲ್ಲಿ ವಿಹರಿಸುತ್ತಿರುವಾಗ ರೆಡ್ಡಿ, ಮಾವಿನ ಮರವನ್ನು ಪ್ರಯಾಸಪಟ್ಟು ಏರಿ ಕಾಯಿಯೊಂದನ್ನು ಕಿತ್ತು ಪತ್ನಿಯ ಕೈಗಿಡುತ್ತಾರೆ.
ಮರದ ಟೊಂಗೆಗಳ ಮೇಲೆ ಶಾಸಕ ರೆಡ್ಡಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಾ, ಬ್ಯಾಲೆನ್ಸ್ ಮಾಡಿ ಕಾಯಿ ಕಿತ್ತು, ಮರಳಿ ಮರ ಇಳಿಯುವಾಗ ತಮ್ಮ ಬಾಲ್ಯವನ್ನು ನೆನೆಸಿಕೊಂಡು ಇಳಿಯಲು ಪ್ರಯಾಸ ಪಡುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Nutrition Alert: ಎಳನೀರು ಕುಡಿಯುವುದರಿಂದಲೂ ನಮ್ಮ ದೇಹಕ್ಕೆ ಸೈಡ್‌ ಎಫೆಕ್ಟ್‌ ಇದೆಯೆ?

ಸದ್ಯ ಮಾವಿನ ಹಣ್ಣಿನ ಸೀಸನ್‌ ಆಗಿರುವುದರಿಂದ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಡುವೆ ಜನಾರ್ದನ ರೆಡ್ಡಿ ಅವರು ಮಡದಿಗಾಗಿ ಮಾವಿನ ಕಾಯಿ ಕಿತ್ತುಕೊಟ್ಟಿರುವ ಹಳೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದು 2019ರಲ್ಲಿ ರೆಡ್ಡಿ ಅವರ ಮಾವಿನ ತೋಟದಲ್ಲಿ ತೆಗೆದಿರುವ ವಿಡಿಯೊ ಎನ್ನಲಾಗಿದೆ.

Continue Reading

ದೇಶ

ಐಎಎಸ್‌ ಆಫೀಸರ್‌ ಆಗಿರುವ ಮಾಜಿ ಪತ್ನಿಯಿಂದ ನನ್ನ ಮನೆಗೆ ವಿದ್ಯುತ್‌ ಕಟ್; ಇದು ಐಪಿಎಸ್‌ ಆಫೀಸರ್‌ ಅಳಲು!

ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. ಅಧಿಕಾರಿಗಳಿಬ್ಬರ ಜಗಳವು ಬೀದಿಗೆ ಬಂದಿರುವುದೇಕೆ? ಇವರ ಆರೋಪಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Tamil Nadu Officers
Koo

ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇನ್ನು, ಮದುವೆಯಾದ ಬಳಿಕ, ಹೊಂದಾಣಿಕೆಯಾಗದೆ, ಉಂಡು ಮಲಗಿದ ಮೇಲೂ ಜಗಳ ಮುಂದುವರಿಯು ಕಾರಣದಿಂದ ವಿಚ್ಛೇದನ ಪಡೆದವರು ತಮ್ಮ ಮಾಡಿಗೆ ತಾವು ಇರುತ್ತಾರೆ. ಆದರೆ, ತಮಿಳುನಾಡಿನಲ್ಲಿ (Tamil Nadu) ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ (Beela Venkatesan) ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ (Rajesh Das) ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. “ಐಎಎಸ್‌ ಅಧಿಕಾರಿಯಾಗಿರುವ ಮಾಜಿ ಪತ್ನಿಯು ನನ್ನ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾಳೆ” ಎಂಬುದಾಗಿ ರಾಜೇಶ್‌ ದಾಸ್‌ ಆರೋಪಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

“ನಾನು ಮನೆಯಲ್ಲಿ ಇದ್ದಾಗಲೇ ಮೇ 20ರಂದು ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ತಮಿಳುನಾಡು ಉತ್ಪಾದನೆ ಮತ್ತು ವಿತರಣೆ ನಿಗಮದ (TANGEDCO) ಅಧಿಕಾರಿಗಳು ನನ್ನ ಅಭಿಪ್ರಾಯವನ್ನೂ ಪಡೆಯದೆ ವಿದ್ಯುತ್‌ ಕಡಿತಗೊಳಿಸಲಾಗಿದೆ. ನನ್ನ ಮನೆಯ ವಿದ್ಯುತ್‌ ಶುಲ್ಕವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲಾಗಿದೆ. ವಿದ್ಯುತ್‌ ಕಡಿತಗೊಳಿಸುವ ಕುರಿತು ಕೋರ್ಟ್‌ ಆದೇಶವೂ ಇಲ್ಲ. ಹೀಗಿದ್ದರೂ, ಇಂಧನ ಇಲಾಖೆ ಕಾರ್ಯದರ್ಶಿ ಆಗಿರುವ, ನನ್ನ ಮಾಜಿ ಪತ್ನಿ ಬೀಲಾ ವೆಂಕಟೇಶನ್‌ ಅವರೇ ವಿದ್ಯುತ್‌ ಕಡಿತಗೊಳಿಸಿದ್ದಾರೆ” ಎಂಬುದಾಗಿ ರಾಜೇಶ್‌ ದಾಸ್‌ ಅವರು ಆರೋಪಿಸಿದ್ದಾರೆ.

ವಿಚ್ಛೇದನಕ್ಕೂ ಮೊದಲು ರಾಜೇಶ್‌ ದಾಸ್ ಹಾಗೂ ಬೀಲಾ ವೆಂಕಟೇಶನ್.‌

ಬೀಲಾ ವೆಂಕಟೇಶನ್‌ ಪ್ರತಿಕ್ರಿಯೆ ಏನು?

ರಾಜೇಶ್‌ ದಾಸ್‌ ಅವರ ಆರೋಪಗಳಿಗೆ ಬೀಲಾ ವೆಂಕಟೇಶನ್‌ ಅವರು ಪ್ರತಿಕ್ರಿಯಿಸಿದ್ದು, ಅವರ ಆರೋಪಗಳನ್ನು ನಿರಾಕರಿಸಿದ್ದಾರೆ. “ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಯಾರೂ ಇಲ್ಲ. ಆದರೆ, ನನ್ನ ಹೆಸರಿನಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ, ಆ ಜಾಗವೂ ನನ್ನ ಹೆಸರಲ್ಲೇ ಇದೆ. ಹಾಗಾಗಿ, ನಾನು ಅನವಶ್ಯಕವಾಗಿ ದುಡ್ಡು ವ್ಯಯಿಸಲು ಇಚ್ಛಿಸುವುದಿಲ್ಲ. ರಾಜೇಶ್‌ ದಾಸ್‌ ಅವರೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಕುರಿತು ದಾಖಲೆ ಕೊಡಿ, ನೋಂದಣಿ ಬದಲಾಯಿಸಿಕೊಳ್ಳಿ ಎಂಬುದಾಗಿ ಮನವಿ ಮಾಡಿದರೂ ದಾಖಲೆ ಸಲ್ಲಿಸಿಲ್ಲ. ಅವರು ದಾಖಲೆ ನೀಡದ ಕಾರಣ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ” ಎಂದಿದ್ದಾರೆ.

ತಮಿಳುನಾಡು ಮಾಜಿ ಡಿಜಿಪಿ ಆಗಿರುವ ರಾಜೇಶ್‌ ದಾಸ್‌ ಅವರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಮಹಿಳಾ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಅಧೀನ ನ್ಯಾಯಾಲಯವು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಅವರು ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇವರ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಆದರೆ, ಇವರ ಬಂಧನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಮೇ 17ರಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Continue Reading
Advertisement
IndiGo Flight
ದೇಶ1 min ago

IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

prabuddha murder case
ಕ್ರೈಂ1 min ago

Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

Suhana Khan Birthday Big Love From Ananya Panday
ಸಿನಿಮಾ7 mins ago

Suhana Khan: ಇಂದು ಶಾರುಖ್‌ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ: ಅನನ್ಯಾ ಪಾಂಡೆ‌, ನವ್ಯಾ ಕ್ಯೂಟ್‌ ವಿಶಸ್‌!

Viral Video
ವೈರಲ್ ನ್ಯೂಸ್16 mins ago

Viral Video: ಅಬ್ಬಾ ಎಂಥಾ ಭೀಕರ ದೃಶ್ಯ! ಸ್ಕೂಟರ್‌ನಲ್ಲಿದ್ದ ದಂಪತಿ ಮೇಲೆ ಏಕಾಏಕಿ ಬಿದ್ದ ಬೃಹತ್‌ ಮರ-ವಿಡಿಯೋ ನೋಡಿ

Iqbal Ahmed Saradgi
ಶ್ರದ್ಧಾಂಜಲಿ40 mins ago

Iqbal Ahmed Saradgi: ಕಲಬುರಗಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಇನ್ನಿಲ್ಲ

Bangladesh MP Missing
ದೇಶ46 mins ago

Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

Drone Prathap Helping People To Get Eye Surgery on Birthday
ಸಿನಿಮಾ53 mins ago

Drone Prathap: ಡಿಫರೆಂಟ್‌ ಆಗಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಡ್ರೋನ್ ಪ್ರತಾಪ್ ಪ್ಲ್ಯಾನ್‌: ವೋಟ್‌ ಹಾಕಿದ್ದು ಸಾರ್ಥಕ ಅಂದ್ರು ಫ್ಯಾನ್ಸ್‌!

Job Alert
ಉದ್ಯೋಗ1 hour ago

Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

Hampi Monument falls
ಪ್ರಮುಖ ಸುದ್ದಿ1 hour ago

Hampi Monument: ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

Lok Sabha Election 2024
ದೇಶ2 hours ago

Lok Sabha Election 2024: ವಿವಿಪ್ಯಾಟ್‌ ಯಂತ್ರವನ್ನೇ ನೆಲಕ್ಕೆಸೆದು ಪುಡಿ ಪುಡಿ ಮಾಡಿದ ಶಾಸಕ; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ3 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ16 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು21 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು22 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌