Site icon Vistara News

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

Rahul Gandhi

ನವದೆಹಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ಕಂಡು ಬರುತ್ತಿದೆ. ಜುಲೈ 29 ಸಂಸತ್‌ನಲ್ಲಿ ಜಾತಿಗಣತಿ (Caste Census) ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ನಾವು ಜಾತಿಗಣತಿ ಮಂಡಿಸುತ್ತೇವೆ ಎಂದಿದ್ದರು. ಇದಕ್ಕೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ (Anurag Thakur) ತಿರುಗೇಟು ನೀಡಿ, “ತಮ್ಮ ಜಾತಿಯೇ ಯಾವುದೆಂದು ಗೊತ್ತಿರದವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದರು. ಸದ್ಯ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಅಚ್ಚರಿ ಎಂದರೆ ಈ ವಿಚಾರ ದೇಶದ ಗಡಿ ದಾಟಿ ಪಾಕಿಸ್ತಾನದಲ್ಲಿಯೂ ಚರ್ಚೆಯಾಗುತ್ತಿದೆ. ಪಾಕಿಸ್ತಾನದ ಚಾನಲ್‌ ಒಂದರಲ್ಲಿ ಮಾತನಾಡುತ್ತ ಅತಿಥಿಯೊಬ್ಬರು ರಾಹುಲ್‌ ಗಾಂಧಿ ಅವರ ಜಾತಿಯನ್ನು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ (Viral Video).

ಸುಮಾರು 2.18 ನಿಮಿಷದ ವಿಡಿಯೊ ಇದಾಗಿದ್ದು, ಸಂವಾದದಲ್ಲಿ ಪಾಲ್ಗೊಂಡ ಅತಿಥಿ ರಾಹುಲ್‌ ಅವರು ಗಾಂಧಿ ಹೇಗಾದರು ಎಂದು ಪ್ರಶ್ನಿಸಿದ್ದಾರೆ. ʼʼರಾಹುಲ್ ಹೇಗೆ ಗಾಂಧಿಯಾದರು? ರಾಹುಲ್ ಅವರು ನೆಹರೂ ಕುಟುಂಬದ ಕುಡಿ. ಇದು ನೆಹರೂ ವಂಶ. ಇವರೊಂದಿಗೆ ಗಾಂಧಿಯ ಹೆಸರು ಹೇಗೆ ಥಳುಕು ಹಾಕಿಕೊಂಡಿದೆ?ʼʼ ಎಂದು ಅವರು ಕೇಳಿದ್ದಾರೆ.

ವಾದ ಹೀಗಿದೆ

ʼʼನೆಹರೂ ಅವರ ಮಗಳು ಇಂದಿರಾ ಫಿರೋಜ್ ಖಾನ್ ಅವರನ್ನು ವಿವಾಹವಾದರು. ಫಿರೋಜ್ ಖಾನ್ ನವಾಬ್ ಖಾನ್ ಅವರ ಮಗ. ಫಿರೋಜ್ ಖಾನ್ ಅವರ ಮಗ ರಾಜೀವ್ ಕ್ರಿಶ್ಚಿಯನ್ ಮಹಿಳೆ ಸೋನಿಯಾ ಅವರನ್ನು ವಿವಾಹವಾಗಿದ್ದಾರೆ. ನಂತರ ಸೋನಿಯಾ ಮತ್ತು ರಾಜೀವ್ ಅವರ ಮಗಳು ಪ್ರಿಯಾಂಕಾ ಕ್ರಿಶ್ಚಿಯನ್ ರಾಬರ್ಟ್ ವಾದ್ರಾ ಅವರನ್ನು ವಿವಾಹವಾದರು. ಅವರ ಮನೆಯಲ್ಲಿ ಮುಸ್ಲಿಂ-ಕ್ರಿಶ್ಚಿಯನ್-ಪಾರ್ಸಿ ಇದ್ದಾರೆʼʼ ಎಂದಿದ್ದಾರೆ. ಸದ್ಯ ಈ ವಿಡಿಯೊ ಅನೇಕರ ಗಮನ ಸೆಳೆದಿದ್ದು ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ಈ ವಿಡಿಯೊವನ್ನು 2 ಲಕ್ಷಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ʼʼರಾಹುಲ್‌ ಗಾಂಧಿ ಅಲ್ಲ, ರಾಹುಲ್‌ ಖಾನ್‌ ಎನ್ನುವುದು ನಿಮ್ಮ ವಾದ ತಾನೇ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼನೀವು ಗಾಂಧಿ ಕುಟುಂಬದ ಕಣ್ಣನ್ನು ತೆರೆಸಿದ್ದೀರಿʼʼ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ʼʼಗಾಂಧಿ ಕುಟುಂಬದ ಸತ್ಯ ಹೊರ ಬಿತ್ತುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಪ್ರತಿಯೊಬ್ಬರಿಗೂ ರಾಹುಲ್‌ ಗಾಂಧಿ ಅವರ ಕುಟುಂಬದ ಬಗ್ಗೆ ಗೊತ್ತು. ಇದೀಗ ಪಾಕಿಸ್ತಾನದ ಮಾಧ್ಯಮಗಳೂ ಈ ಬಗ್ಗೆ ಚರ್ಚೆ ನಡೆಸುತ್ತಿವೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʼʼಜಾತಿ ಗಣತಿ ಯಾವಾಗ ಆರಂಭಿಸುತ್ತೀರಿ?ʼʼ ಎಂದು ನೇರವಾಗಿ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

ಅನುರಾಗ್‌ ಠಾಕೂರ್‌ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂದು ಟೀಕಿಸಿದ್ದರು. ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿ, “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದು ಸವಾಲು ಹಾಕಿದ್ದರು.

Exit mobile version