ಛತೀಸ್‌ಗಡ: ಈಗಿನ ಮಕ್ಕಳು ಎಷ್ಟು ಮೊಬೈಲ್(Mobile)ಗೆ ಅಡಿಕ್ಟ್ ಆಗಿರುತ್ತಾರೆ ಎಂದರೆ ಕೆಲವೊಮ್ಮೆ ದೊಡ್ಡ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಮೊಬೈಲ್ ಮೋಹಕ್ಕೆ ಬಿದ್ದು ತಮಗೂ ಅಪಾಯ ಮಾಡಿಕೊಳ್ಳುವುದು ಮಾತ್ರವಲ್ಲದೇ ಜೊತೆಗಿರುವವರನ್ನೂ ಅಪಾಯಕ್ಕೊಡ್ಡುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ(Viral News) ಛತ್ತೀಸ್‌ಗಡ(Chhattisgarh)ದಲ್ಲಿ ನಡೆದಿದ್ದು, ಮೊಬೈಲ್ ಬಳಕೆಗೆ ಅಡ್ಡಿಯಾಗಿದ್ದನೆಂದು ಸ್ವತಃ ಅಣ್ಣನನ್ನೇ ತಂಗಿಯೊಬ್ಬಳು ಹೊಡೆದು ಕೊಂದಿದ್ದಾಳೆ.
ಏನಿದು ಘಟನೆ?
ಖೈರಗಢ-ಚುಯಿಖಾದನ್-ಗಂಡೈ ಜಿಲ್ಲೆಯ ಅಮ್ಲಿಧಿಕಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 14ವರ್ಷದ ಬಾಲಕಿ ಆಗಾಗ ಮೊಬೈಲ್‌ನಲ್ಲಿ ಯಾರೋ ಹುಡುಗನ ಜೊತೆ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ಅಣ್ಣ(18) ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಇಬ್ಬರು ನಡುವೆ ಜಗಳ ಆಗಿತ್ತು. ಇನ್ನು ಮುಂದೆ ಮೊಬೈಲ್ ಬಳಸದಂತೆ ಅಣ್ಣ ಖಡಕ್ ಆಗಿ ವಾರ್ನ್ ಮಾಡಿ ಮೊಬೈಲ್ ಕಿತ್ತುಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ಬಾಲಕಿ ತಾಯಿ ಮನೆಯಲ್ಲಿಲ್ಲದ ವೇಳೆ ಕೊಡಲಿಯಿಂದ ಮಲಗಿದ್ದ ಅಣ್ಣನ ಕುತ್ತಿಗೆಗೆ ಬೀಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಬಳಿಕ ಸ್ನಾನ ಮಾಡಿದ ಬಾಲಕಿ ತನ್ನ ಬಟ್ಟೆ ಮೇಲಿದ್ದ ರಕ್ತದ ಕಲೆಯನ್ನು ಸ್ವಚ್ಛ ಮಾಡಿದ್ದಳು. ಇದಾದ ಬಳಿಕ ತನ್ನ ಅಣ್ಣನನ್ನು ಯಾರೋ ಕೊಲೆ ಮಾಡಿದ್ದಾರೆಂದು ಬಾಲಕಿ ನೆರೆಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೆಲವು ದಿನಗಳ ಹಿಂದೆ ಬಾಲಕಿಯ ಹೆತ್ತವರು ಆಕೆಯ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡಿದ್ದರು. ವಾಪಸ್ ಕೊಡೋದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು. ಏಕೆಂದರೆ, 13 ವರ್ಷದ ಬಾಲಕಿ ಇಡೀ ದಿನ ಮೊಬೈಲ್ ಫೋನ್‌ನಲ್ಲೇ ಮುಳುಗಿರುತ್ತಿದ್ದಳು. ಸ್ನೇಹಿತರ ಜೊತೆ ಚಾಟ್ ಮಾಡೋದು, ಆನ್‌ಲೈನ್ ಸ್ನೇಹಿತರ ಜೊತೆ ಮಾತುಕತೆ ನಡೆಸೋದು, ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್ ನೋಡೋದು.. ಹೀಗೆ ಇಡೀ ದಿನ ಮೊಬೈಲ್‌ನಲ್ಲೇ ಮುಳುಗಿರುತ್ತಿದ್ದ ಬಾಲಕಿ, ಓದುತ್ತಲೇ ಇರಲಿಲ್ಲ. ಇನ್ನು ಕುಟುಂಬಸ್ಥರ ಜೊತೆಗೂ ಆಕೆ ಬೆರೆಯುತ್ತಿರಲಿಲ್ಲ.
ಇದನ್ನೂ ಓದಿ:Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್ ವಿಡಿಯೋ ವೈರಲ್
ಈ ಎಲ್ಲಾ ಕಾರಣಗಳಿಂದಾಗಿ ಮಗಳಿಂದ ಮೊಬೈಲ್ ಕಸಿದುಕೊಂಡಿದ್ದ ಪೋಷಕರಿಗೆ ತಮ್ಮ ಮಗಳು ತಮ್ಮ ವಿರುದ್ದವೇ ಸಂಚು ಮಾಡಬಹುದು, ತಮ್ಮ ಕೊಲೆಗೆ ಯತ್ನಿಸಬಹುದು ಎಂಬ ಸಂಗತಿ ಗೊತ್ತಾಗಿದ್ದೇ ತಡ, ಶಾಕ್‌ಗೆ ಒಳಗಾಗಿದ್ದಾರೆ. ಕೇವಲ ಮೊಬೈಲ್ ಫೋನ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಹೆತ್ತವರ ಹತ್ಯೆಗೆ ಪುಟಾಣಿ ಬಾಲಕಿ ಸಂಚು ರೂಪಿಸಿದ ವಿಚಾರ ಅಭಯಂ ಹೆಲ್ಪ್‌ಲೈನ್ ಸಿಬ್ಬಂದಿಯನ್ನೂ ದಂಗು ಬಡಿಸಿದೆ!