Site icon Vistara News

Viral Video: ವಿದ್ಯಾರ್ಥಿಯ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ಕಿಡಿಗೇಡಿಗಳ ವಿಕೃತಿ; ವಿಡಿಯೋ ವೈರಲ್‌

Viral Video

ಉತ್ತರಪ್ರದೇಶ: ಆನ್‌ಲೈನ್‌ ಗೇಮಿಂಗ್‌ (Online Gaming)ನಲ್ಲಿ ಸೋತು ಹಣ ವಾಪಾಸ್‌ ನೀಡಲು ವಿಳಂಬ ಮಾಡಿದನೆಂದು ನೀಟ್‌ ಪರೀಕ್ಷೆಗೆ(NEET Exam) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯನ್ನ ಚೆನ್ನಾಗಿ ಥಳಿಸಿ ಚಿತ್ರಹಿಂಸೆ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಕಿಡಿಗೇಡಿಗಳು ವಿದ್ಯಾರ್ಥಿಯ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ವಿಕೃತಿ ಮೆರೆದಿದ್ದು, ಆರು ಜನ ಅಪ್ರಾಪ್ತರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಈ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.

ಘಟನೆ ವಿವರ:

ಇಟವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯೊಬ್ಬ ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದು, 20,000ರೂ ಸಾಲದ ಸುಳಿಗೆ ಬಿದ್ದಿದ್ದ. ಆರೋಪಿಗಳು ಬಡ್ಡಿ ಎಲ್ಲಾ ಸೇರಿಸಿ 50,000 ಕೊಡಲೇಬೇಕೆಂದು ಹೇಳಿದ್ದರು. ಅಷ್ಟೊಂದು ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ವಿದ್ಯಾರ್ಥಿಯನ್ನು ಆರು ಜನ ಅಪ್ರಾಪ್ತರು ಸೇರಿ ಚೆನ್ನಾಗಿ ಥಳಿಸಿದ್ದು, ಬಳಿಕ ಆತನನ್ನು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ಮಾಡಿದ್ದಾರೆ. ಆತನ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ವಿಕೃತಿ ಮೆರೆದಿದ್ದಾರೆ. ಬಳಿಕ ಆತನನ್ನು ಬೆಂಕಿ ಹಾಕಿ ಸುಡಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ 11 ಜನ ಆರೋಪಿಗಳು ಭಾಗಿಯಾಗಿದ್ದು, ಆರು ಅಪ್ರಾಪ್ತರನ್ನು ಅರೆಸ್ಟ್‌ ಮಾಡಲಾಗಿದೆ. ಪ್ರಮುಖ ಆರೋಪಿ ಸೇರಿದಂತೆ ಐವರು ಎಸ್ಕೇಪ್‌ ಆಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಸೋಮವಾರ ಸಂತ್ರಸ್ತ ವಿದ್ಯಾರ್ಥಿಯ ಬಾವ ಕಾಕಡಿಯೋ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:Narendra Modi: ಮತದಾನ ಮಾಡಿ ಬಂದ ಮೋದಿಗೆ ರಾಖಿ ಕಟ್ಟಿ, ಆಶೀರ್ವಾದ ಮಾಡಿದ ಅಜ್ಜಿ; Video ಇದೆ

ಇಂತಹದ್ದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಫತೇಹ್‌ಪುರದಲ್ಲಿ ನಡೆದಿತ್ತು. ಆನ್‌ಲೈನ್‌ ಗೇಮ್‌ನ ಚಟ ಹೊಂದಿದ್ದ ಯುವಕನೊಬ್ಬ ಸಾಲ ತೀರಿಸಲು ಇನ್ಶೂರೆನ್ಸ್‌ ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದಿದ್ದ. ಹಿಮಾಂಶು ಎಂಬ ಆರೋಪಿ 50 ಲಕ್ಷ ರೂ.ಗಳ ವಿಮೆ ಹಣವನ್ನು ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಶವವನ್ನು ಸೆಣಬಿನ ಚೀಲದಲ್ಲಿ ತುಂಬಿ ಯಮುನಾ ನದಿಯ ದಂಡೆಯಲ್ಲಿ ಎಸೆದಿದ್ದ. ಹಿಮಾಂಶು ಜನಪ್ರಿಯ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ ಒಂದರಲ್ಲಿ ಗೇಮಿಂಗ್‌ ಆಡುವ ಚಟ ಹೊಂದಿದ್ದ. ಇದಕ್ಕಾಗಿ ಆತನ ಸುಮಾರು 4 ಲಕ್ಷ ರೂ. ಸಾಲ ಮಾಡಿದ್ದ. ಇದನ್ನು ತೀರಿಸಲು ಆತ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version