Site icon Vistara News

Viral Video: ರೈಫಲ್‌ ಜೊತೆ ಬಾರ್‌ಗೆ ನುಗ್ಗಿದ ಕಿಡಿಗೇಡಿ..ಡಿಜೆ ಮೇಲೆ ಗುಂಡಿನ ದಾಳಿ-ಶಾಕಿಂಗ್‌ ವಿಡಿಯೋ ನೋಡಿ

Viral Video

ಪಾಟ್ನಾ: ಕುಡಿದ ಮತ್ತಿನಲ್ಲಿ ಕೆಲವೊಮ್ಮೆ ಎಂಥೆಂಥಾ ಅನಾಹುತಗಳು ಸಂಭವಿಸಬಹುದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮದ್ಯ ಸರ್ವ್‌ ಮಾಡಲು ಬಾರ್‌ ಸಿಬ್ಬಂದಿ ನಿರಾಕರಿಸಿದರೆಂಬ ಕೋಪಕ್ಕೆ ವ್ಯಕ್ತಿಯೊಬ್ಬ ಅಲ್ಲೇ ಇದ್ದ ಡಿಜೆ(Disc Jockey)ಯನ್ನು ಗುಂಡಿಕ್ಕಿ ಹತ್ಯೆಮಾಡಿದ್ದಾನೆ. ಜಾರ್ಖಂಡ್‌ನ ರಾಂಚಿಯಲ್ಲಿ ಈ ಘಟನೆ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಆರೋಪಿ ಹಾಗೂ ಆತನ ನಾಲ್ವರು ಸ್ನೇಹಿತರು ಮಧ್ಯರಾತ್ರಿ ಸುಮಾರು 1 ಗಂಟೆಗೆ ಬಾರ್‌ಗೆ ಬಂದಿದ್ದರು. ಆ ಸಮಯದಲ್ಲಿ ಬಾರ್‌ ಮುಚ್ಚಲಾಗಿತ್ತು. ಆದರೂ ಅಲ್ಲಿದ್ದ ಸಿಬ್ಬಂದಿಗೆ ಮದ್ಯ ಸರ್ವ್‌ ಮಾಡುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದು, ಆಗ ಜಗಳ ಶುರುವಾಗಿದೆ. ಬಾರ್‌ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿಯೇ ನಡೆದಿತ್ತು. ಈ ನಡುವೆ ಕೋಪದಲ್ಲಿ ತನ್ನ ಕಾರ್‌ನಲ್ಲಿದ್ದ ರೈಫಲ್‌ ತೆಗೆದುಕೊಂಡ ಬಂದ ಒಬ್ಬ ಡಿಜೆ ಎದೆಗೆ ಗುಂಡಿಕ್ಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಡಿಜೆಯನ್ನು ರಾಜೇಂದ್ರ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆಗೆ ದಾಖಲಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಅಲ್ಲೇ ಕೊನೆಯುಸಿರೆಳೆದಿದ್ದಾನೆ.

ಎಕ್ಸ್‌ಟ್ರೀಂ ಬಾರ್‌ನಲ್ಲಿ ಈ ಘಟನೆ ನಡೆದಿದ್ದು, ಶೂಟರ್‌ ಬಾರ್‌ ಒಳಗೆ ನುಗ್ಗುತ್ತಿರುವುದು ಮತ್ತು ತನ್ನ ಮುಖವನ್ನು ಟೀ ಶರ್ಟ್‌ನಿಂದ ಮುಚ್ಚಿಕೊಂಡಿರುವ ದೃಶ್ಯವನ್ನು ಸಿಸಿಟಿವಿಯಲ್ಲಿ ಕಾಣಬಹುದಾಗಿದೆ. ಇನ್ನು ಸ್ಥಳಕ್ಕೆ ರಾಂಚಿಯ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ಕೊಟ್ಟಿದ್ದು, ಶೂಟರ್‌ ಮತ್ತು ಆತನ ಸಹಚರರಿಗಾಗಿ ಬಲೆ ಬೀಸಿದ್ದಾರೆ. ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಬಾರ್‌ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ.

ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

ಅಸಾದುದ್ದೀನ್ ಓವೈಸಿಯವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen – AIMIM – ಎಐಎಂಐಎಂ) ಪಕ್ಷದ ನಾಯಕ, ಮಹಾರಾಷ್ಟ್ರದ ಮಾಲೆಗಾಂವ್‌ನ ಮಾಜಿ ಮೇಯರ್ (Ex Malegaon Mayor) ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ ಎಂಬಾತನ ಮೇಲೆ ಇಂದು ಬೆಳಗ್ಗೆ ಅಪರಿಚಿತ ದಾಳಿಕೋರರು ಗುಂಡಿನ ದಾಳಿ (Firing) ನಡೆಸಿದ್ದಾರೆ.

ಅಬ್ದುಲ್ ಮಲಿಕ್ ಮೊಹಮ್ಮದ್ ಅವರ ದೇಹಕ್ಕೆ ಮೂರು ಕಡೆ ಗುಂಡುಗಳು ಬಿದ್ದಿವೆ. ಎದೆಯ ಎಡಭಾಗದಲ್ಲಿ, ಎಡ ತೊಡೆ ಮತ್ತು ಬಲಗೈಗೆ ಗಾಯಗಳಾಗಿವೆ. ಗಾಯಗಳು ತೀವ್ರವಾಗಿರುವ ಕಾರಣ, ಎಐಎಂಐಎಂ ನಾಯಕನನ್ನು ನಾಸಿಕ್‌ನ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಇದನ್ನೂ ಓದಿ:MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

ಮಾಲೆಗಾಂವ್ ನಗರ ಪೊಲೀಸ್ ಅಧಿಕಾರಿಯ ಪ್ರಕಾರ, ಓಲ್ಡ್ ಆಗ್ರಾ ರಸ್ತೆಯಲ್ಲಿರುವ ಅಂಗಡಿಯೊಂದರ ಹೊರಗೆ ಮಲಿಕ್ ಕುಳಿತಿದ್ದಾಗ 1:20ಕ್ಕೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸರು ವ್ಯಾಪಕ ತನಿಖೆಯನ್ನು ಪ್ರಾರಂಭಿಸಿದ್ದಾರೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ, ಅಸಾದುದ್ದೀನ್‌ ಓವೈಸಿಯ ಆಪ್ತನಾಗಿದ್ದು, ಮಾಲೆಗಾಂವ್‌ನ ಮೇಯರ್‌ ಆಗಿದ್ದ.

Exit mobile version