Site icon Vistara News

Viral Video: ಮನೆಗೆ ನುಗ್ಗಿ ಯುವಕನಿಂದ ಬಾಲಕಿ ಮೇಲೆ ಅಮಾನುಷ ಹಲ್ಲೆ; ವಿಡಿಯೊ ನೋಡಿ ಜನಾಕ್ರೋಶ

Viral Video

ನವದೆಹಲಿ: ಅಪ್ರಾಪ್ತ ವಯಸ್ಸಿನ ಬಾಲಕಿಗೆ (minor girl) ದುಷ್ಕರ್ಮಿಯೊಬ್ಬ ಅಮಾನುಷವಾಗಿ ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುವ ವ್ಯಕ್ತಿಯೊಬ್ಬ ಹುಡುಗಿ ಮೇಲೆ ಹಲ್ಲೆ ಮಾಡಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ಲಕ್ನೋದ ಬಿ-376 ವಿಶಾಲ್ ಖಂಡ್‌ನ ಗೋಮತಿ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋವನ್ನು ಆದಿತ್ಯ ಕಮಲ್ ಪಾಂಡೆ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪ್ರಬಲ್ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ ಅಪ್ರಾಪ್ತ ಬ್ರಾಹ್ಮಣ ಹುಡುಗಿಯ ಮನೆಗೆ ಬಲವಂತವಾಗಿ ಪ್ರವೇಶಿಸಿ, ಅಶ್ಲೀಲವಾಗಿ ನಿಂದಿಸುತ್ತಾನೆ. ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುವಂತೆ ಮಾಡುತ್ತಾನೆ. ಈ ಅಪ್ರಾಪ್ತ ಬಾಲಕಿ ಯಾಕೆ ಹಾಗೆ ಹೇಳುತ್ತೀರಿ ಎಂದು ಪ್ರಶ್ನಿಸಿದಾಗ ಆತ ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಾಲಕಿಯ ಫೋನ್‌ಗಳನ್ನು ಒಡೆಯಲಾಗಿದೆ, ಬಟ್ಟೆ ಹರಿದು ಹಾಕಲಾಗಿದೆ. ಆಕೆಗೆ ಸಾಕಷ್ಟು ಹಿಂಸೆ ನೀಡಲಾಗಿದೆ. ವ್ಯಕ್ತಿಯು ರಿವಾಲ್ವರ್ ಕೂಡ ಹೊಂದಿದ್ದ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: MS Dhoni Birthday: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಪತ್ನಿ; ವಿಡಿಯೊ ವೈರಲ್​

ಆರೋಪಿಯನ್ನು ಬಂಧಿಸಿರುವ ಕುರಿತು ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಿಡಿಯೋದಲ್ಲಿರುವ ಬಾಲಕಿಯನ್ನು ದೀಪಶಿಖಾ ತಿವಾರಿ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ.

ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ

ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳ ಶಾಲೆಗಳಲ್ಲಿ ಜಾರಿಗೆ ತಂದಿರುವ ಮಧ್ಯಾಹ್ನ ಬಿಸಿಯೂಟದ ಯೋಜನೆಗಳಲ್ಲೂ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ. ಕೆಲವೆಡೆ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಛತ್ತೀಸ್‌ಗಢದ ಶಾಲೆಯೊಂದರಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಅನ್ವಯ ಬರೀ ಅನ್ನ ಹಾಗೂ ಅರಿಶಿಣ ಮಿಶ್ರಣ ಮಾಡಿ ಅದನ್ನೇ ನೀಡಲಾಗಿದೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯ ಬಿಜಾಕುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಇಷ್ಟೊಂದು ಕಳಪೆ ಆಹಾರವನ್ನು ನೀಡಲಾಗುತ್ತಿದೆ. ಮಕ್ಕಳು ಅರಿಶಿಣ ಮಿಕ್ಸ್‌ ಆಗಿರುವ ಅನ್ನವನ್ನು ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 43 ವಿದ್ಯಾರ್ಥಿಗಳು ಓದುತ್ತಿದ್ದು, ಬಹುತೇಕರು ಬಡವರ ಮಕ್ಕಳಾಗಿದ್ದಾರೆ. ಆದರೆ, ಇವರಿಗೆ ಕಳೆದ ಒಂದು ವಾರದಿಂದ ಬಿಸಿಯೂಟದಲ್ಲಿ ತರಕಾರಿ ನೀಡದೆ, ಬರೀ ಅರಿಶಿಣ ಮಿಶ್ರಣ ಆಗಿರುವ ಅನ್ನ ನೀಡಲಾಗುತ್ತಿದೆ. ಇದನ್ನು ಶಾಲೆಯ ಅಧಿಕಾರಿಗಳೇ ದೃಢಪಡಿಸಿದ್ದಾರೆ.

ಒಂದು ವಾರದಿಂದ ತರಕಾರಿ ಪೂರೈಸುವವರು ಶಾಲೆಗೆ ತರಕಾರಿ ಪೂರೈಸುತ್ತಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ತರಕಾರಿ ವ್ಯವಸ್ಥೆ ಆಗಿಲ್ಲ. ಹಾಗಾಗಿ, ಮಕ್ಕಳಿಗೆ ಅನ್ನ-ಸಾರು ಇಲ್ಲವೇ ಅರಿಶಿಣ ಮಿಶ್ರಿತ ಅನ್ನ ನೀಡುತ್ತಿದ್ದೇವೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.

ಇವರ ಆರೋಪಗಳಿಗೆ ತರಕಾರಿ ಪೂರೈಸುವವರು ಪ್ರತಿಕ್ರಿಯಿಸಿದ್ದು, ಶಾಲೆಗೆ ತರಕಾರಿ ಪೂರೈಸಿದ್ದಕ್ಕೆ ಹಲವು ತಿಂಗಳಿಂದ ಹಣ ನೀಡಿಲ್ಲ. ಇದರಿಂದಾಗಿ ನಾವು ತರಕಾರಿ ಪೂರೈಸುತ್ತಿಲ್ಲ ಎಂದು ಹೇಳಿದ್ದಾರೆ.

Exit mobile version