Site icon Vistara News

Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

Viral Video

ಅಯೋಧ್ಯೆ ಹಿಂದೂ ಧರ್ಮಗಳ (Viral video) ಪವಿತ್ರ ಸ್ಥಳವೆಂದು ಕರೆಯಬಹುದು. ಯಾಕೆಂದರೆ ಇದು ಭಗವಾನ್ ಶ್ರೀರಾಮನ ಜನ್ಮಭೂಮಿ ಮಾತ್ರವಲ್ಲ ಇತ್ತೀಚೆಗಷ್ಟೇ ಇಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿತ್ತು. ಇಂತಹ ಪವಿತ್ರ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಲೋಕಸಭೆಯ ಚುನಾವಣೆಯ ನಂತರ ಈ ಕಾರ್ಯ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಅಯೋಧ್ಯೆ ಪೊಲೀಸರಿಗೆ ಆದೇಶಿಸಲಾಗಿದೆ. ಸೈಬರ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಪೆಕ್ಟರ್ ಗೆ ಇದರ ಸಂಪೂರ್ಣ ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

ಅಯೋಧ್ಯೆ ಜನತೆ ಮೇಲೆ ಬಿಜೆಪಿ ಬೆಂಬಲಿಗರ ಆಕ್ರೋಶ

ಅಯೋಧ್ಯೆಯಲ್ಲಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಮಮಂದಿರವನ್ನು ನಿರ್ಮಿಸಿತ್ತು. ಹಾಗಿದ್ದರೂ ಈ ಬಾರಿಯ ಲೋಕ ಸಭೆಯ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಲ್ಲಿ  ಬಿಜೆಪಿ ಪಕ್ಷದ ಅಭ್ಯರ್ಥಿ ಲಲ್ಲೂ ಸಿಂಗ್ ಸೋಲನುಭವಿಸಿದ್ದರು. ಹೀಗಾಗಿ ಅಯೋಧ್ಯೆ ಜನರ ಮೇಲೆ ಅನೇಕ ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಬಿಜೆಪಿ ಶಾಲು ಧರಿಸಿದ ವ್ಯಕ್ತಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯ ಮೇಲೆ ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರವೇ? ಅಥವಾ ಬಿಜೆಪಿಗರು ಅಯೋಧ್ಯೆ ಜನರ ಮೇಲೆ ವ್ಯಕ್ತಪಡಿಸಿದ ಆಕ್ರೋಶವೇ? ಎಂಬ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ಘಟನೆಯನ್ನ ತನಿಖೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Road Accident : ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

ಅಯೋಧ್ಯೆ ಜನರನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕವಾಗಿ ಮಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಬಳಕೆದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಉದ್ವಿಗ್ನ ಮತ್ತು ಹಿಂಸಾಚಾರ ಪರಿಸ್ಥಿತಿಯನ್ನು ಹುಟ್ಟುಹಾಕುವ ಹುನ್ನಾರವನ್ನು ಎತ್ತಿ ತೋರಿಸುತ್ತದೆ. ಹಾಗಾಗಿ  ಅಯೋಧ್ಯೆ ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು ಮತ್ತು ಮತ್ತಷ್ಟು ಹಿಂಸಾಚಾರ ಅಥವಾ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕೆಂದು ಸೋಶಿಯಲ್ ಮೀಡಿಯಾದ ಬಳಕೆದಾರರು ತಿಳಿಸಿದ್ದಾರೆ.

ಒಟ್ಟಾರೆ ಈ ವಿಡಿಯೋ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತನಿಖೆಯ ಬಳಿಕ ಇದರ ಹಿಂದಿನ ಉದ್ದೇಶ ತಿಳಿದುಬರಬೇಕಿದೆ.

Exit mobile version