Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ! - Vistara News

ವೈರಲ್ ನ್ಯೂಸ್

Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

Viral Video ಬಿಜೆಪಿ ಶಾಲು ಧರಿಸಿದ ವ್ಯಕ್ತಿ ಅಯೋಧ್ಯೆ ಹೆಸರಿನ ಪ್ರತಿಮೆಗೆ ಬೆಂಕಿ ಹಚ್ಚಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಅಯೋಧ್ಯೆ ಪೊಲೀಸರಿಗೆ ಆದೇಶಿಸಲಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ ಹಿಂದೂ ಧರ್ಮಗಳ (Viral video) ಪವಿತ್ರ ಸ್ಥಳವೆಂದು ಕರೆಯಬಹುದು. ಯಾಕೆಂದರೆ ಇದು ಭಗವಾನ್ ಶ್ರೀರಾಮನ ಜನ್ಮಭೂಮಿ ಮಾತ್ರವಲ್ಲ ಇತ್ತೀಚೆಗಷ್ಟೇ ಇಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿತ್ತು. ಇಂತಹ ಪವಿತ್ರ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಲೋಕಸಭೆಯ ಚುನಾವಣೆಯ ನಂತರ ಈ ಕಾರ್ಯ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಅಯೋಧ್ಯೆ ಪೊಲೀಸರಿಗೆ ಆದೇಶಿಸಲಾಗಿದೆ. ಸೈಬರ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಪೆಕ್ಟರ್ ಗೆ ಇದರ ಸಂಪೂರ್ಣ ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

ಅಯೋಧ್ಯೆ ಜನತೆ ಮೇಲೆ ಬಿಜೆಪಿ ಬೆಂಬಲಿಗರ ಆಕ್ರೋಶ

ಅಯೋಧ್ಯೆಯಲ್ಲಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಮಮಂದಿರವನ್ನು ನಿರ್ಮಿಸಿತ್ತು. ಹಾಗಿದ್ದರೂ ಈ ಬಾರಿಯ ಲೋಕ ಸಭೆಯ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಲ್ಲಿ  ಬಿಜೆಪಿ ಪಕ್ಷದ ಅಭ್ಯರ್ಥಿ ಲಲ್ಲೂ ಸಿಂಗ್ ಸೋಲನುಭವಿಸಿದ್ದರು. ಹೀಗಾಗಿ ಅಯೋಧ್ಯೆ ಜನರ ಮೇಲೆ ಅನೇಕ ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಬಿಜೆಪಿ ಶಾಲು ಧರಿಸಿದ ವ್ಯಕ್ತಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯ ಮೇಲೆ ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರವೇ? ಅಥವಾ ಬಿಜೆಪಿಗರು ಅಯೋಧ್ಯೆ ಜನರ ಮೇಲೆ ವ್ಯಕ್ತಪಡಿಸಿದ ಆಕ್ರೋಶವೇ? ಎಂಬ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ಘಟನೆಯನ್ನ ತನಿಖೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Road Accident : ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

ಅಯೋಧ್ಯೆ ಜನರನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕವಾಗಿ ಮಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಬಳಕೆದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಉದ್ವಿಗ್ನ ಮತ್ತು ಹಿಂಸಾಚಾರ ಪರಿಸ್ಥಿತಿಯನ್ನು ಹುಟ್ಟುಹಾಕುವ ಹುನ್ನಾರವನ್ನು ಎತ್ತಿ ತೋರಿಸುತ್ತದೆ. ಹಾಗಾಗಿ  ಅಯೋಧ್ಯೆ ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು ಮತ್ತು ಮತ್ತಷ್ಟು ಹಿಂಸಾಚಾರ ಅಥವಾ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕೆಂದು ಸೋಶಿಯಲ್ ಮೀಡಿಯಾದ ಬಳಕೆದಾರರು ತಿಳಿಸಿದ್ದಾರೆ.

ಒಟ್ಟಾರೆ ಈ ವಿಡಿಯೋ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತನಿಖೆಯ ಬಳಿಕ ಇದರ ಹಿಂದಿನ ಉದ್ದೇಶ ತಿಳಿದುಬರಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

ACP Chandan: ಕಾಲೇಜಿನಲ್ಲಿ ಇಂಗ್ಲಿಷ್ ಬರದೆ ಒದ್ದಾಡುತ್ತಿದ್ದ ಎಸಿಪಿ ಚಂದನ್ ಈ ಭಾಷೆ ಕಲಿತಿದ್ದು ಹೇಗೆ? ಇದು ಸ್ಫೂರ್ತಿದಾಯಕ!

ACP Chandan: ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ತೀರಾ ಅಗತ್ಯ. ಆದರೆ ಈಗ ಮಾತೃಭಾಷೆಗಿಂತ ಹೆಚ್ಚಾಗಿ ಬಳಕೆಯಾಗುತ್ತಿರುವುದು ವ್ಯವಹಾರಿಕ ಭಾಷೆಯಾದ ಇಂಗ್ಲಿಷ್. ಇಂಗ್ಲಿಷ್ ಭಾಷೆ ಗೊತ್ತಿಲ್ಲದೇ ಮುಜುಗರ, ಕೀಳರಿಮೆ ಅನುಭವಿಸುವವರ ಪಾಡು ಹೇಳಲಾಸಾಧ್ಯ. ಈ ಪರಿಸ್ಥಿತಿಯನ್ನು ಸವಾಲಾಗಿ ಎದುರಿಸಿ ಗೆದ್ದು ಬೀಗಿದವರು ಅನೇಕರು! ಅಂತಹವರ ಸಾಲಿನಲ್ಲಿ ACP ಚಂದನ್ ಕೂಡ ಇದ್ದಾರೆ.

VISTARANEWS.COM


on

ACP Chanda
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಿಗಿಂತ ಹೆಚ್ಚು ಬಳಕೆಯಾಗುತ್ತಿರುವ ಭಾಷೆ ಇಂಗ್ಲಿಷ್.
ಸಾಫ್ಟ್ ವೇರ್, ಮಲ್ಟಿ ನ್ಯಾಷನಲ್ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ ಶಾಪ್‌ಗಳಲ್ಲಿ ಕೆಲಸ ಮಾಡಬೇಕೆಂದು ಕೊಂಡರೂ ನಿಮಗೆ ಇಂಗ್ಲಿಷ್ ಭಾಷೆ ಬರುತ್ತಾ ಎಂದು ಕೇಳುತ್ತಾರೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇತ್ತೀಚಿನ ದಿನಗಳಲ್ಲಿ ಕೆಲಸ ಹುಡುಕೋದು ಒಂದು ದೊಡ್ಡ ತಲೆನೋವಾಗಿ ಬಿಟ್ಟಿದೆ. ಹಾಗಾಗಿ ಹೆಚ್ಚಿನ ತಂದೆತಾಯಿಗಳು ತಮ್ಮ ಮಕ್ಕಳನ್ನು ಸಾಲಸೂಲ ಮಾಡಿಯಾದರೂ ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗೆ ಸೇರಿಸುತ್ತಿದ್ದಾರೆ. ಭಾಷೆ ಗೊತ್ತಿಲ್ಲದಾಗ ಕಾಡುವ ಕೀಳರಿಮೆ ತುಂಬಾ ದೊಡ್ಡದು. ಇಂತಹ ಕೀಳರಿಮೆಯನ್ನು ಗೆದ್ದು ತಾವು ಇಂಗ್ಲಿಷ್‌ ಭಾಷೆಯನ್ನು ಹೇಗೆ ಕಲಿತೆ ಎಂಬ ಟಿಪ್ಸ್‌ ಅನ್ನು ಎಸಿಪಿ ಚಂದನ್‌ ಅವರು ಹೇಳಿದ್ದಾರೆ. ಅಂದ ಹಾಗೆ ಈ ಎಸಿಪಿ ಚಂದನ್‌ ಯಾರು ಗೊತ್ತೆ? ಕೊಲೆ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಟ ದರ್ಶನ್‌ ಮತ್ತು ಆತನ ಗ್ಯಾಂಗನ್ನು ಸೆರೆ ಹಿಡಿದು ಪೊಲೀಸ್‌ ಠಾಣೆಯಲ್ಲಿ ಕೂರಿಸಿದವರು!

ಸಾಮಾನ್ಯವಾಗಿ ಕೆಲವು ಜನರಿಗೆ ಇಂಗ್ಲಿಷ್ ಗೊತ್ತಿರುತ್ತದೆ. ಆದರೆ ಅದನ್ನು ಮಾತನಾಡಲು ಮುಜುಗರ. ಮಾತನಾಡುವಾಗ ಎಲ್ಲಿ ತಪ್ಪಾಗಿ ನಗೆಪಾಟಲಿಗೀಡಾಗುತ್ತೇವೆ ಎಂಬ ನಾಚಿಕೆಯಿಂದಲೇ ಸುಮ್ಮನಾಗುತ್ತಾರೆ. ನಮ್ಮಲ್ಲಿ ಹೆಚ್ಚಿನ ಜನರದ್ದು ಇದೇ ಮನಸ್ಥಿತಿಯಾಗಿದೆ. ಆದರೆ ಇದನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಎಸಿಪಿ ಚಂದನ್ ಸಾಕ್ಷಿಯಾಗಿದ್ದಾರೆ. ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ ಎಸಿಪಿ ಚಂದನ್ ಅವರಿಗೆ ಮೊದಲು ಇಂಗ್ಲಿಷ್ ಭಾಷೆ ಮಾತನಾಡಲು ಬರುತ್ತಿರಲಿಲ್ಲವಂತೆ.

ACP Chandan:

ಇಂಗ್ಲಿಷ್‌ ಗೊತ್ತಿಲ್ಲದೇ ಪರಿತಪಿಸಿದ ದಿನಗಳು!

ಹೌದು ಈ ಬಗ್ಗೆ ಅವರು ಕಾಲೇಜಿನ ಸಮಾರಂಭವೊಂದರಲ್ಲಿ ಮಾತನಾಡುವಾಗ ಅನುಭವ ಹಂಚಿಕೊಂಡಿದ್ದಾರೆ. ಅವರು ಈ ಸಮಾರಂಭದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಆದರೆ ಇದಕ್ಕೂ ಮೊದಲು ಅವರಿಗೆ ಇಂಗ್ಲಿಷ್ ಭಾಷೆ ಮಾತನಾಡಲು ಸರಿಯಾಗಿ ಬರುತ್ತಿರಲಿಲ್ಲವಂತೆ. ಅವರು ಡಿಪ್ಲೋಮಾದಿಂದ 3ನೇ ಸೆಮಿಸ್ಟರ್‌ಗೆ ಇಂಜಿನಿಯರಿಂಗ್ ಓದಲು ಹೋಗಿದ್ದಾಗ ಅಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಮಾತ್ರ ಮಾತನಾಡಿಸುತ್ತಿದ್ದರಂತೆ. ಕ್ಲಾಸ್ ವೇಳೆ ಇಂಗ್ಲಿಷ್ ಬರುವುದಿಲ್ಲವೆಂದು ಲೆಕ್ಚರ್‌ ಮುಂದೆ ಕುಳಿತುಕೊಳ್ಳಲು ಹೇಳುತ್ತಿದ್ದರಂತೆ. ಅಲ್ಲಿ ಅಪ್ಪಿತಪ್ಪಿ ಒಂದು ಶಬ್ದ ಕನ್ನಡ ಮಾತನಾಡಿದರೆ ಎಲ್ಲರೂ ನಗುತಿದ್ದರಂತೆ.

ಸಬ್‌ ಟೈಟಲ್‌ ಸಿನಿಮಾ

ಹಾಗಾಗಿ ಅವರು ಇಂಗ್ಲಿಷ್ ಕಲಿತುಕೊಳ್ಳಲೇಬೇಕೆಂದು ಪಣತೊಟ್ಟರಂತೆ. ಆಗ ಅವರ ಸ್ನೇಹಿತರು ಇಂಗ್ಲಿಷ್ ಪುಸ್ತಕ, ಕಾದಂಬರಿಗಳನ್ನು ಓದಲು ಹೇಳಿದ್ರಂತೆ. ಆದರೆ ಅದರಲ್ಲಿರುವ ಶಬ್ದ ಅವರಿಗೆ ಅರ್ಥವಾಗದೇ ಇದ್ದಾಗ ಡಿಕ್ಷನರಿಯಲ್ಲಿ ಹುಡುಕುತ್ತಿದ್ದರಂತೆ. ಇದು ಅವರಿಗೆ ತುಂಬಾ ಕಿರಿಕಿರಿಯಾಗುತ್ತಿತ್ತು ಮತ್ತು ಓದಿದ್ದು ಅರ್ಥವೂ ಆಗುತ್ತಿರಲಿಲ್ಲವಂತೆ.
ನಂತರ ಅವರಿಗೆ ಒಬ್ಬ ಸೀನಿಯರ್ ಫ್ರೆಂಡ್ ಸಿಕ್ಕಿ ಆತ ಇಂಗ್ಲಿಷ್ ಭಾಷೆ ಕಲಿಯುವುದಕ್ಕೆ ಸುಲಭವಾದ ಸಲಹೆ ನೀಡಿದನಂತೆ. ಚಂದನ್ ಅವರಿಗೆ ಆತ ಹಾರ್ಡ್ ಡಿಸ್ಕ್ ತೆಗೆದುಕೊಂಡು ಬರಲು ಹೇಳಿ ಅದರಲ್ಲಿ ಸಬ್ ಟೈಟಲ್ ಇರುವ 100 ಇಂಗ್ಲಿಷ್ ಸಿನಿಮಾಗಳನ್ನು ನೀಡಿದನಂತೆ. ಅದರಲ್ಲಿ ಎಲ್ಲಾ ಮೂವಿ ಇಂಟರೆಸ್ಟಿಂಗ್ ಆಗಿತ್ತಂತೆ. ಅದನ್ನು ನೋಡುತ್ತಾ ಮೂವಿ ಕೆಳಗಡೆ ಬರುವಂತಹ ಸಬ್ ಟೈಟಲ್ ಓದಲು ಶುರು ಮಾಡಿದರು. ಇದರಿಂದ ಮೂವಿ ಮುಗಿಯುವುದರೊಳಗೆ ಅವರಿಗೆ 10-20 ಇಂಗ್ಲಿಷ್ ಪದ ಅರ್ಥವಾಗುತ್ತಿತ್ತಂತೆ ಮತ್ತು ಮಾತನಾಡಲು ಇಂಗ್ಲಿಷ್ ಪದ ಬಳಸುವುದು ಹೇಗೆ ಎಂಬುದು ತಿಳಿಯುತ್ತಿತ್ತಂತೆ. ಆ ಮೂಲಕ ಅವರು ಇಂಗ್ಲಿಷ್ ಮಾತನಾಡಲು ಕಲಿತು ಬಿಟ್ಟರು!

ಆದರೆ ಅವರಿಗೆ ಇಂಗ್ಲಿಷ್ ಗ್ರಾಮರ್ ಬಳಸಿ ಪದ ಬರೆಯಲು ಈಗಲೂ ಕಷ್ಟವಾಗುತ್ತದೆಯಂತೆ. ಆದರೂ ಮಾತನಾಡಲು ಬೇಕಾಗುವಷ್ಟು ಇಂಗ್ಲಿಷ್ ಕಲಿತೆ ಎಂದು ಹೇಳಿದ್ದಾರೆ. ಆದರೆ ನಮಗೆ ಯಾವತ್ತೂ ಇಂಗ್ಲಿಷ್ ಬರುವುದಿಲ್ಲವೆಂದು ಯಾರು ಬೇಸರ ಮಾಡಿಕೊಳ್ಳಬೇಡಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಯಾಕೆಂದರೆ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದರೆ ಅದರಲ್ಲಿ ಇಂಗ್ಲಿಷ್ ಚೆನ್ನಾಗಿಲ್ಲ ಎಂದರೂ ಇಂಗ್ಲಿಷ್ ನೋಡಿ ಮಾರ್ಕ್ ಕೊಡುವುದಿಲ್ಲ, ಬದಲಾಗಿ ನೀವು ಬರೆದ ವಾಕ್ಯದ ಅರ್ಥ ನೋಡಿ ಮಾರ್ಕ್ಸ್ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

ನಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಯಾವುದೇ ವಿದೇಶಿಗರು ನಮ್ಮನ್ನು ತಮಾಷೆ ಮಾಡುವುದಿಲ್ಲ. ಆದರೆ ಇಂಗ್ಲಿಷ್‌ನಲ್ಲಿ ಮಾತನಾಡುವ ನಮ್ಮ ಭಾರತೀಯರೇ ನಮ್ಮನ್ನು ನೋಡಿ ಗೇಲಿ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಮಗೆ ಇಂಗ್ಲಿಷ್ ಬರುವುದಿಲ್ಲವೆಂದು ತಲೆಕೆಡಿಸಿಕೊಂಡು ಕುಳಿತುಕೊಂಡಿರುವವರು ಒಮ್ಮೆ ಎಸಿಪಿ ಚಂದನ್ ಅವರ ಸ್ಫೂರ್ತಿದಾಯಕ ಮಾತನ್ನು ಕೇಳಬೇಕು. ಚಂದನ್‌ ಯುವ ಜನತೆಗೆ ನಿಜಕ್ಕೂ ಸ್ಫೂರ್ತಿ.

Continue Reading

ವೈರಲ್ ನ್ಯೂಸ್

Viral Video: ಹಸು, ನಾಯಿ, ಮೇಕೆ ಮೇಲೆ ಕಿಡಿಗೇಡಿಯಿಂದ ಹೇಯಕೃತ್ಯ; ವಿಡಿಯೋ ವೈರಲ್‌-ಸಿಎಂ ಯೋಗಿಗೆ ಪತ್ರ

Viral Video: ಭೂರಾ ಶೇಖ್ ಎಂಬ ವ್ಯಕ್ತಿ ಹಸುವಿನ ಜತೆಗೆ ಲೈಂಗಿಕ ಕ್ರಿಯೆ ನಡೆಸುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ. ಆರೋಪಿ ಭೂರಾ ಶೇಖ್ ಹಲವು ಹಸುಗಳು, ಹೆಣ್ಣು ನಾಯಿ, ಮೇಕೆಗಳನ್ನೂ ತನ್ನ ಲೈಂಗಿಕ ವಿಕೃತಿಗೆ ಬಳಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಮೊರಾದಾಬಾದ್ ಜಿಲ್ಲೆಯ ದಿಲಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದೆ.

VISTARANEWS.COM


on

Viral Video
Koo

ಉತ್ತರಪ್ರದೇಶ: ಕೆಲವು ವಿಕೃತ ಕಾಮಿಗಳು ಮೂಕ ಪ್ರಾಣಿಗಳನ್ನೂ ಲೆಕ್ಕಿಸದೇ ತಮ್ಮ ವಿಕೃತಿ ಮೆರೆಯುತ್ತಾರೆ. ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲೂ ಇಂತಹ ಕ್ರೌರ್ಯವೊಂದು ಬೆಳಕಿಗೆ ಬಂದಿದೆ. ಪಾಪಿಯೋರ್ವ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌(Yogi Adityanath) ಅವರಿಗೂ ದೂರು ನೀಡಲಾಗಿದೆ.

ಘಟನೆ ವಿವರ:

ಭೂರಾ ಶೇಖ್ ಎಂಬ ವ್ಯಕ್ತಿ ಹಸುವಿನ ಜತೆಗೆ ಲೈಂಗಿಕ ಕ್ರಿಯೆ ನಡೆಸುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ. ಆರೋಪಿ ಭೂರಾ ಶೇಖ್ ಹಲವು ಹಸುಗಳು, ಹೆಣ್ಣು ನಾಯಿ, ಮೇಕೆಗಳನ್ನೂ ತನ್ನ ಲೈಂಗಿಕ ವಿಕೃತಿಗೆ ಬಳಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಮೊರಾದಾಬಾದ್ ಜಿಲ್ಲೆಯ ದಿಲಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದೆ.

ರಾತ್ರಿ ವೇಳೆ ಕಂಬಕ್ಕೆ ಕಟ್ಟಿರುವ ಹಸುವಿನ ಮೇಲೆ ಲೈಂಗಿಕ ಕ್ರಿಯೆಯನ್ನು ನಡೆಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಹಸು ಪದೇ ಪದೇ ಆತನ ಕೈಯಿಂದ ತಪ್ಪಿಸಿಕೊಳ್ಳಲು ನೋಡುತ್ತದೆ. ಅದರೂ ಆತ ಹಸುವನ್ನು ಬಿಡದೆ ನಿರಂತರ ಲೈಂಗಿಕ ಕ್ರಿಯೆ ನಡೆಸುತ್ತಾನೆ. ಆರೋಪಿಯನ್ನು ಭೂರಾ ಶೇಖ್ ಎಂದು ಗುರುತಿಸಲಾಗಿದ್ದು, ಆತನ ತಂದೆಯ ಹೆಸರು ಯಾಕೂಬ್ ಶೇಖ್ ಎಂದು ಹೇಳಲಾಗಿದೆ. ಮೊರಾದಾಬಾದ್ ಪೊಲೀಸರು ವೈರಲ್ ವಿಡಿಯೋ ಆಧಾರದ ಮೇಲೆ ಹಾಗೂ ವಿಶ್ವ ಹಿಂದೂ ಪರಿಷತ್ ನೀಡಿದ ದೂರಿನ ಆಧಾರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದೀಗ ಆರೋಪಿ ಭೂರಾ ಶೇಖ್‌ನನ್ನು ಅರೆಸ್ಟ್‌ ಮಾಡಲಾಗಿದೆ.

ಸಿಎಂ ಯೋಗಿಗೆ ಪತ್ರ


ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​ ಹಾಗೂ ಪೊಲೀಸರಿಗೆ ಪತ್ರ ಬರೆದಿದ್ದಾರೆ. ವಿಶ್ವ ಹಿಂದೂ ಪರಿಷತ್​​ನ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣ್ ಸಿಂಗ್ ಅವರು ಕಳುಹಿಸಿರುವ ಪತ್ರದಲ್ಲಿ ಹಿಂದೂ ಸಂಘಟನೆಯು ಭೂರಾ ವಿಕೃತಿ ಬಗ್ಗೆ ಹಲವು ದಿನಗಳಿಂದ ಗಮನಿಸುತ್ತಿದ್ದೇವೆ. ಸಾಕು ಮತ್ತು ಬಿಡಾಡಿ ಹಸುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಭೂರಾ ತನ್ನ ಕಾಮತೃಷೆ ತೀರಿಸಿಕೊಳ್ಳಲು ಹೆಣ್ಣು ನಾಯಿ ಮತ್ತು ಮೇಕೆಗಳನ್ನು ಬಳಸಿಕೊಂಡಿದ್ದಾನೆ. ಹಸುಗಳು ಮತ್ತು ನೂರಾರು ಇತರ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಈ ಪತ್ರದಲ್ಲಿ ದೂರಿದ್ದಾರೆ. ಇನ್ನು ಸಿಎಂ ಕಚೇರಿಯಿಂದ ಆದೇಶ ಹೊರ ಬೀಳುವ ಮುನ್ನವೇ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: Viral News: ಮತ್ತೊಂದು ಪೆನ್‌ಡ್ರೈವ್‌ ಪ್ರಕರಣ; ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ ಜೊತೆ ವೈದ್ಯನ ಸರಸ!

Continue Reading

ವೈರಲ್ ನ್ಯೂಸ್

Viral Video: ಬಿಸಿ ಬಿಸಿ ಸಾಂಬಾರ್‌ನಲ್ಲಿ ಸಿಕ್ತು ಸತ್ತ ಇಲಿ! ಹೊಟೇಲ್‌ ಫುಡ್‌ ತಿನ್ನೋ ಮುನ್ನ ಈ ವಿಡಿಯೋ ನೋಡಿ

Viral Video: ಅಹಮದಾಬಾದ್‌ನ ನಿಕೋಲ್‌ ಪ್ರದೇಶದಲ್ಲಿರುವ ದೇವಿ ದೋಸಾ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕರೊಬ್ಬರು ಫುಡ್‌ ಆರ್ಡರ್‌ ಮಾಡಿದ್ದರು. ಟೇಬಲ್‌ಗೆ ಫುಡ್‌ ಬರುತ್ತಿದ್ದಂತೆ ಬಹಳ ಖುಷಿಯಿಂದ ತೆರೆದು ನೋಡಿದರೆ ಸಾಂಬಾರ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ಕಂಡು ಶಾಕ್‌ ಆದ ಗ್ರಾಹಕರು ತಕ್ಷಣ ಗಲಾಟೆ ಮಾಡಿದ್ದಾರೆ. ಆದರೆ ಹೊಟೇಲ್‌ ಸಿಬ್ಬಂದಿ ಇದಕ್ಕೆ ಕ್ಯಾರೇ ಎನ್ನದಾಗ ಗ್ರಾಹಕ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

VISTARANEWS.COM


on

Viral Video
Koo

ಅಹಮಾದಾಬಾದ್‌: ಕೆಲವು ದಿನಗಳ ಹಿಂದೆ ರೈಲಿನಲ್ಲಿ ನೀಡುವ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾದ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌(Gujarat)ನಲ್ಲಿ ವರದಿಯಾಗಿದೆ. ಸದಾ ಹೊಟೇಲ್‌ ಆಹಾರ ಇಷ್ಟ ಪಡುವವರೂ ಈ ಸುದ್ದಿ ನೋಡಿ ಶಾಕ್‌ ಆಗೋದು ಗ್ಯಾರಂಟಿ. ರೆಸ್ಟೋರೆಂಟ್‌ವೊಂದರ ಸಾಂಬಾರಿನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ಫುಲ್‌ ವೈರಲ್‌(Viral Video) ಆಗಿದೆ. ಈ ಆಘಾತಕಾರಿ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

ವಿಡಿಯೋದಲ್ಲೇನಿದೆ?

ಅಹಮದಾಬಾದ್‌ನ ನಿಕೋಲ್‌ ಪ್ರದೇಶದಲ್ಲಿರುವ ದೇವಿ ದೋಸಾ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕರೊಬ್ಬರು ಫುಡ್‌ ಆರ್ಡರ್‌ ಮಾಡಿದ್ದರು. ಟೇಬಲ್‌ಗೆ ಫುಡ್‌ ಬರುತ್ತಿದ್ದಂತೆ ಬಹಳ ಖುಷಿಯಿಂದ ತೆರೆದು ನೋಡಿದರೆ ಸಾಂಬಾರ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ಕಂಡು ಶಾಕ್‌ ಆದ ಗ್ರಾಹಕರು ತಕ್ಷಣ ಗಲಾಟೆ ಮಾಡಿದ್ದಾರೆ. ಆದರೆ ಹೊಟೇಲ್‌ ಸಿಬ್ಬಂದಿ ಇದಕ್ಕೆ ಕ್ಯಾರೇ ಎನ್ನದಾಗ ಗ್ರಾಹಕ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅಹ್ಮದಾಬಾದ್‌ ಮಹಾನಗರ ಪಾಲಿಕೆ(AMC) ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅದೂ ಅಲ್ಲದೇ ಈ ವಿಚಾರ ರಾಜ್ಯ ಆರೋಗ್ಯ ಇಲಾಖೆ ರೆಸ್ಟೋರೆಂಟ್‌ ಮಾಲಿಕ ಅಲ್ಪೇಶ್‌ ಕೆವಾಡಿಯಾ ಅವರಿಗೆ ನೊಟೀಸ್‌ ಜಾರಿಗೊಳಿಸಿದೆ. ಅದೂ ಅಲ್ಲದೇ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ. ಇನ್ನು ವಿಡಿಯೋ ನೋಡಿದ ಅನೇಕ ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಈ ವಿಡಿಯೋವನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಹಳ ವೈರಲ್‌ ಆಗಿತ್ತು. ರೈಲು ಪ್ರಯಾಣಿಕರೊಬ್ಬರು ರೈಲಿನಲ್ಲಿ ಊಟ ಆರ್ಡರ್‌ ಮಾಡಿದ್ದರು. ಅನ್ನ, ಸಾಂಬಾರ್‌, ದಾಲ್‌ ಹಾಗೂ ಎರಡು ವಿಧದ ಪಲ್ಯವನ್ನು ಊಟದಲ್ಲಿ ಬಯಸಿದ್ದರು. ಊಟ ಬರುತ್ತಿದ್ದಂತೆ ಬಹಳ ಉತ್ಸಾಹದಿಂದ ಊಟದ ಬಾಕ್ಸ್‌ ತೆರೆಯುತ್ತಿದ್ದಂತೆ ಅದರಲ್ಲಿದ್ದ ಗುಲಾಬ್‌ ಜಾಮೂನಿನಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ಪ್ರಯಾಣಿಕರು ಹೌಹಾರಿದ್ದಾರೆ.

ತಕ್ಷಣ ಕೋಪಗೊಂಡ ಪ್ರಯಾಣಿಕ ಆ ಊಟದ ವಿಡಿಯೋ ಮಾಡಿ ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿಡಿಯೋ ಶೇರ್‌ ಆಗುತ್ತಿದ್ದಂತೆ ರೈಲ್ವೆ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಅಕ್ರೋಸ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ಆರೋಗ್ಯದ ಜೊತೆ ಆಟವಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಇದೊಂದು ದುಬಾರಿ ಮಾಂಸಾಹಾರಿ ಊಟ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:Actor Darshan: ದರ್ಶನ್‌ ನನ್ನ ಊಟದ ತಟ್ಟೆ ತೊಳೆದು ಚಪ್ಪಲಿ ತೆಗೆದಿಟ್ಟಿದ್ರು; ʻದಚ್ಚುʼ ಸರಳತೆ ಬಗ್ಗೆ ಉಮಾಪತಿ ಹೇಳಿಕೆ ವೈರಲ್‌!

Continue Reading

ಕ್ರೈಂ

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

Assault Case : ಮೂರು ವರ್ಷದ ಬಾಲಕಿ ಮೇಲೆ ಎರಗಿದ ಮಲತಂದೆ ಕ್ರೌರ್ಯವನ್ನೇ ಮೆರೆದಿದ್ದಾನೆ. ಬಾಲಕಿಯ ಗುಪ್ತಾಂಗ ಕಚ್ಚಿ, ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ. ಸದ್ಯ ಮಲತಂದೆ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

VISTARANEWS.COM


on

By

assault Case
ವಿಕೃತಿ ಮೆರೆದಿದ್ದ ಮಲತಂದೆ
Koo

ಬೆಂಗಳೂರು/ಚಿಕ್ಕಬಳ್ಳಾಪುರ: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆ ದೌರ್ಜನ್ಯ (Assault Case) ನಡೆಸಿದ್ದಾನೆ. ಮಹಿಳೆಯ ಮೂರನೇ ಗಂಡನ ವಿಕೃತಿ ಅದ್ಯಾವ ಪರಿ ಇದೆ ಎಂದರೆ ಮಗುವಿನ ಗುಪ್ತಾಂಗ ಕಚ್ಚಿ, ಸಿಗರೇಟ್‌ನಿಂದ ಸುಟ್ಟು ಮೃಗೀಯ ರೀತಿ ವರ್ತಿಸಿದ್ದಾನೆ.

ಗೌರಿಬಿದನೂರಿನಲ್ಲಿ ಮಲತಂದೆಯೊಬ್ಬ ಅಟ್ಟಹಾಸ ತೋರಿದ್ದಾನೆ. ಜರೀನಾ ತಾಜ್‌ ಎಂಬಾಕೆ ಒಟ್ಟು ಮೂರು ಮದುವೆ ಆಗಿದ್ದು, ಅದರಲ್ಲಿ ಎರಡನೇ ಗಂಡನ ಮಗುವಿಗೆ ಮೂರನೇ ಗಂಡ ಚಿತ್ರಹಿಂಸೆ ನೀಡಿದ್ದಾನೆ. ಅಜ್ಮಂತ್‌ ಎಂಬಾತ ಮಗುವಿಗಷ್ಟೇ ಅಲ್ಲದೇ ಪತ್ನಿ ಮೇಲೂ ಹಲ್ಲೆ ನಡೆಸಿದ್ದಾನೆ.

ಮೂರು ವರ್ಷದ ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ. 15 ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ವಿಕೃತಿ ಮೆರೆದಿದ್ದಾನೆ.

ಜರೀನಾ ತಾಜ್‌ಗೆ ಮೂರು ಮದುವೆಯಾಗಿದ್ದು, ಮೊದಲ ಪತಿಯಿಂದ 2 ಹೆಣ್ಮಕ್ಕಳು ಆಗಿದ್ದವು. 2ನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ ಅಜ್ಮಂತ್‌ ಜತೆಗೆ ಮೂರನೇ ಮದುವೆಯಾಗಿದ್ದಳು. ಎರಡನೇ ಪತಿಯಿಂದ ಜನಿಸಿದ್ದ ಹೆಣ್ಣು ಮಗುವಿನ ಮೇಲೆ ಅಜ್ಮಂತ್‌ ಕಿರುಕುಳ ನೀಡಿದ್ದಾನೆ.

ತೀವ್ರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್‌ಗೆಗೊಳಗಾಗಿದ್ದಾಳೆ. ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Darshan Arrested: ದರ್ಶನ್‌ಗೆ ಕೊಲೆ ಆರೋಪದ ಜತೆಗೆ ಐಟಿ ಸಂಕಷ್ಟ! ಹಣ ಸಂದಾಯ ಮಾಡಿದ್ರಾ ಶಾಸಕರೊಬ್ಬರ ಆಪ್ತ?

ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

ಪುಣೆ : ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳು ಈಗ ಹೆಚ್ಚು ಟ್ರೆಂಡ್ ಆಗುತ್ತಿದೆ. ಹಾಗಾಗಿ ಯುವಕ-ಯುವತಿಯರು ತಮ್ಮ ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳಲು ಹಾಗೂ ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜೀವಕ್ಕೆ ಅಪಾಯವಾಗುವಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದ ಅನೇಕರು ಸಾವನಪ್ಪಿರುವುದು, ಗಾಯಗೊಂಡಿರುವುದು ನಾವು ಆಗಾಗ ನೋಡಿದ್ದೇವೆ. ಆದರೂ ಜನರಿಗೆ ರೀಲ್ಸ್ ಹುಚ್ಚು ಬಿಡುವುದಿಲ್ಲ. ಇದೀಗ ಪುಣೆಯಲ್ಲಿ ಹುಡುಗಿಯೊಬ್ಬಳು, ಹುಡುಗನೊಬ್ಬನ ಕೈಯನ್ನು ಹಿಡಿದುಕೊಂಡು ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಹುಡುಗನೊಬ್ಬ ಕಟ್ಟಡದ ತುದಿಯಲ್ಲಿ ಮಲಗಿದ್ದಾನೆ. ಹುಡುಗಿ ಆತನ ಕೈಯನ್ನು ಹಿಡಿದುಕೊಂಡು ಕಟ್ಟದಿಂದ ಇಳಿಯುತ್ತಿರುವುದನ್ನು ಕಾಣಬಹುದು. ಇನ್ನೊಂದು ಬದಿಯಲ್ಲಿ ಆಕೆಯ ಸ್ನೇಹಿತರು ವಿವಿಧ ಆ್ಯಂಗಲ್ ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊವನ್ನು ಪುಣೆಯ ಜಂಬುಲ್ವಾಡಿ ಸ್ವಾಮಿನಾರಾಯಣ ಮಂದಿರದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ತೆಗೆಯಲಾಗಿದೆ. ಜೂನ್ 19ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ 55,000ಕ್ಕೂ ಹೆಚ್ಚು ವೀವ್ಸ್ ಸಿಕ್ಕಿದೆ ಮತ್ತು ಅನೇಕರು ಅವರ ಮೂರ್ಖತನಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಹಲವಾರು ಘಟನೆಗಳು ವರದಿಯಾದ ಮೇಲೂ ಇಂತಹ ಬೇಜವಾಬ್ದಾರಿ ಕೆಲಸ ನಿಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ. ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳಲು ತನ್ನ ಕುಟುಂಬವನ್ನು ಜೀವನಪರ್ಯಂತ ನರಳುವಂತೆ ಮಾಡುವ ಮನೋಭಾವ ಇದು ಎಂದು ಮತ್ತೊಬ್ಬ ಬಳಕೆದಾರರು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Kamala Hampana
ಕರ್ನಾಟಕ3 mins ago

Kamala Hampana: ಖ್ಯಾತ ಸಾಹಿತಿ ನಾಡೋಜ ಕಮಲಾ ಹಂಪನಾ ಇನ್ನಿಲ್ಲ

Actor Darshan Devil gang gets life imprisonment What do legal experts say
ಸಿನಿಮಾ28 mins ago

Actor Darshan: ʻಡೆವಿಲ್ ಗ್ಯಾಂಗ್‌ʼಗೆ ಜೀವಾವಧಿ ಶಿಕ್ಷೆ ಆಗತ್ತಾ? ಕಾನೂನು ತಜ್ಞರು ಹೇಳೋದೇನು?

NEET-UG Row
ದೇಶ28 mins ago

NEET-UG Row: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೊಸ ಕಾನೂನು; ತಪ್ಪಿತಸ್ಥರಿಗೆ ಶಿಕ್ಷೆ, ದಂಡ ಪ್ರಮಾಣ ಎಷ್ಟು ಗೊತ್ತಾ?

IND vs BAN
ಕ್ರೀಡೆ39 mins ago

IND vs BAN: ಇಂದು ಭಾರತ-ಬಾಂಗ್ಲಾ ಸೂಪರ್​-8 ಸೆಣಸಾಟ; ಪಂದ್ಯಕ್ಕೆ ಮಳೆ ಭೀತಿ ಇದೆಯೇ?

Elon Musk
ತಂತ್ರಜ್ಞಾನ1 hour ago

Elon Musk: ಕೆಲವೇ ವರ್ಷಗಳಲ್ಲಿ ಮೊಬೈಲ್‌ ಫೋನೇ ಇರುವುದಿಲ್ಲ; ಬರಲಿದೆ ಹೊಸ ತಂತ್ರಜ್ಞಾನ!

Actor Darshan
ಕ್ರೈಂ1 hour ago

Actor Darshan: ದರ್ಶನ್‌ಗೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ; ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರುತ್ತಾರಾ ಚಾಲೆಂಜಿಂಗ್‌ ಸ್ಟಾರ್‌?

ACP Chanda
Latest2 hours ago

ACP Chandan: ಕಾಲೇಜಿನಲ್ಲಿ ಇಂಗ್ಲಿಷ್ ಬರದೆ ಒದ್ದಾಡುತ್ತಿದ್ದ ಎಸಿಪಿ ಚಂದನ್ ಈ ಭಾಷೆ ಕಲಿತಿದ್ದು ಹೇಗೆ? ಇದು ಸ್ಫೂರ್ತಿದಾಯಕ!

karnataka weather Forecast
ಮಳೆ3 hours ago

Karnataka Weather :‌ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ 8 ಜಿಲ್ಲೆಗಳಲ್ಲಿ ರಣಮಳೆ ಫಿಕ್ಸ್!

Health Tips
ಆರೋಗ್ಯ4 hours ago

Health Tips: ನಮ್ಮ ದೇಹಕ್ಕೆ ಪ್ರೊಟೀನ್‌ ಪುಷ್ಟಿ ನೀಡಲು ಯಾವ ಮೊಳಕೆ ಕಾಳುಗಳು ಸೂಕ್ತ?

Yoga for Fertility
ಆರೋಗ್ಯ4 hours ago

Yoga for Fertility: ಈ 6 ಆಸನಗಳಿಂದ ಸಂತಾನ ಭಾಗ್ಯ ಸಾಧ್ಯ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ14 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ20 hours ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ7 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌