ಆಂಧ್ರಪ್ರದೇಶದ ತಿರುಮಲ (tirumala) ಆಂಜನೇಯಸ್ವಾಮಿ ಜಪಾಲಿ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಹೋಗುತ್ತಿದ್ದ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಂಧ್ರಪ್ರದೇಶದಲ್ಲಿ (andrapradesh) ನಡೆದಿದೆ. ತಿರುಮಲ ದೇಗುಲದ ಆವರಣದಲ್ಲೇ ಈ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral video) ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶರವಣನ್ ಎಂಬವರು ಹಂಚಿಕೊಂಡಿರುವ ವಿಡಿಯೋದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಮಹಿಳೆಯ ತಲೆಯ ಮೇಲೆ ಬೃಹತ್ ಗಾತ್ರದ ಮರದ ಕೊಂಬೆಯೊಂದು ಬಿದ್ದು ಕೂಡಲೇ ಮಹಿಳೆ ಪ್ರಜ್ಞೆ ತಪ್ಪಿ ನೆಲಕ್ಕುರುಳುತ್ತಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಪ್ರಸ್ತುತ ತಲೆ ಮತ್ತು ಬೆನ್ನುಮೂಳೆಯ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
A branch of tree fell on a women in Tirumala at Anjaneyaswamy Japali Kshetra. She is severely injured head and spinal,she's shifted to Hospital #Tirupati #Tirumala #Tree #Injured pic.twitter.com/v0kksio4NA
— Saravanan Journalist (@Saranjournalist) July 12, 2024
ಮಹಿಳೆಯ ಹಿಂದೆ ಕೆಲವೇ ಮೀಟರ್ ದೂರದಲ್ಲಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರೊಬ್ಬರು ಈ ಘಟನೆಯನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: Kangana Ranaut: ನನ್ನನ್ನು ಭೇಟಿಯಾಗಲು ಬರುವವರು ಆಧಾರ್ ಕಾರ್ಡ್ ತನ್ನಿ ಎಂದ ಕಂಗನಾ ರಣಾವತ್; ಏನ್ ದೌಲತ್ತು ನೋಡಿ!
ಹತ್ಯೆ ಆರೋಪಿ ಶವವಾಗಿ ಪತ್ತೆ
ಇನ್ನೊಂದು ಘಟನೆಯಲ್ಲಿ, ಅಪ್ರಾಪ್ತ ಬಾಲಕಿಯ ಹತ್ಯೆಗೆ ಸಂಬಂಧಿಸಿದಂತೆ ಬೇಕಾಗಿದ್ದ 26 ವರ್ಷದ ವ್ಯಕ್ತಿ ಗುರುವಾರ ಅನಕಪಲ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕೆ.ಜಿ. ಪಾಲೆಂ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಸುರೇಶ್ ಶವ ಪತ್ತೆಯಾಗಿದೆ ಎಂದು ಅನಕಾಪಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಮುರಳಿ ಕೃಷ್ಣ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಕೊಂದ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿ ಸುರೇಶ್ ಶವ ಪತ್ತೆಯಾಗಿದೆ. ವಿಷ ಬೆರೆಸಿದ ಪಾನೀಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಮುರಳಿ ಕೃಷ್ಣ ತಿಳಿಸಿದ್ದಾರೆ.
ಆಂಧ್ರಪ್ರದೇಶ ಪೊಲೀಸರು ಶನಿವಾರ ಸಂಜೆ 14 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಅನಂತರ ಸುರೇಶ್‌ಗಾಗಿ ಶೋಧ ನಡೆಸಿದ್ದರು.