Site icon Vistara News

Viral Video: ಕಳ್ಳತನ ಆರೋಪ: ವ್ಯಕ್ತಿಯ ಖಾಸಗಿ ಅಂಗಕ್ಕೆ ಮೆಣಸಿನ ಪುಡಿ ತುರುಕಿದ ದುಷ್ಕರ್ಮಿಗಳು

Viral Video

ಕಳ್ಳತನ ಮಾಡಿದ್ದಾನೆ (theft Accused) ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಕೆಲವು ವ್ಯಕ್ತಿಗಳು ಸೇರಿ ಮೆಣಸಿನ ಪುಡಿ ತುಂಬಿರುವ ಘಟನೆ ಬಿಹಾರದ ಅರಾರಿಯಾದಲ್ಲಿ (Bihar’s Araria) ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಘಟನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಅರಾರಿಯಾದ ಇಸ್ಲಾಂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದ್ದಾರೆ. ಇದರ ವಿಡಿಯೋ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯ ಕೈಗಳನ್ನು ಹಿಂದಕ್ಕೆ ಕಟ್ಟಿ, ಅವನ ಪ್ಯಾಂಟ್ ಬಿಚ್ಚಿ ಕೆಲವು ಪುರುಷರು ಆತನನ್ನು ಮೊಣಕಾಲುಗಳ ಮೇಲೆ ಬಾಗಿಸುವಂತೆ ಒತ್ತಾಯಿಸುತ್ತಿರುವುದು ಸೆರೆಯಾಗಿದೆ.

ಆರೋಪಿಗಳಲ್ಲಿ ಒಬ್ಬ ಕಳ್ಳನ ಬೆನ್ನಿನ ಮೇಲೆ ಮೆಣಸಿನ ಪುಡಿ ಸುರಿದು ಪೆನ್ಸಿಲ್ ಬಳಸಿ ಗುದನಾಳದಲ್ಲಿ ತುಂಬಿಸಿರುವುದಾಗಿ ತಿಳಿದು ಬಂದಿದೆ. ಅನೇಕರು ಸೇರಿ ಆತನನ್ನು ಸಂಪೂರ್ಣ ತಪಾಸಣೆ ನಡೆಸುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದ ಈ ವಿಡಿಯೋದಲ್ಲಿ ಗುರುತಿಸಲಾದ ಮೊಹಮ್ಮದ್ ಸಿಫತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವೇಳೆ ಅಲ್ಲಿದ್ದ ಅನೇಕರು ಇದರ ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯು ಬಿಹಾರದಲ್ಲಿ “ತಾಲಿಬಾನ್ ರಾಜ್” ಅನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮರಾಠಿ ಚಿತ್ರ ನಿರ್ದೇಶಕಿ ಮನೆಗೆ ನುಗ್ಗಿದ ಕಳ್ಳ; ಆರನೇ ಮಹಡಿಯಲ್ಲಿದ್ದ ಮನೆಗೆ ಕಳ್ಳ ಬಂದು, ಹೋಗಿದ್ದು ಹೇಗೆ ವಿಡಿಯೋ ನೋಡಿ

ಈ ಕುರಿತು ಆರ್ ಜೆಡಿ ನಾಯಕ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ನಾನು ಮತ್ತು ನನ್ನ ಪಕ್ಷವು ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಂಚಿಕೆಯ ಬಗ್ಗೆ ಮಾತನಾಡುತ್ತೇವೆ. ಆದ್ದರಿಂದ ಜಾತಿವಾದಿಗಳು ಯಾವಾಗಲೂ ನಮ್ಮ ಆಡಳಿತವನ್ನು ಜಂಗಲ್ ರಾಜ್ ಎಂದು ನೋಡುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ ನಲ್ಲಿ ತೇಜಸ್ವಿ ಯಾದವ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದು, ತಾಲಿಬಾನ್ ಆಡಳಿತದ ಬಗ್ಗೆ ಮಾತನಾಡುವವರು ಮುಸ್ಲಿಮರ ಮತ ಕೇಳುವ ಮೊದಲು ತಾಲಿಬಾನಿ ಎಂದು ಕರೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

Exit mobile version