Site icon Vistara News

Viral video: ರಸ್ತೆಯಿಂದ ರಾಶಿಗಟ್ಟಲೆ ಮೊಳೆ ಹೆಕ್ಕಿ ತೆಗೆದ ಟ್ರಾಫಿಕ್‌ ಪೊಲೀಸರು; ಪಂಕ್ಚರ್‌ ಮಾಫಿಯಾ ಸಕ್ರಿಯ?

puncture mafia viral video

ಬೆಂಗಳೂರು: ಬೆಂಗಳೂರಿನ ಬೀದಿ ಬೀದಿಗಳಲ್ಲಿ ರಾಶಿಗಟ್ಟಲೆ ಮೊಳೆ (Nails) ಬಿಸಾಡಿ ವಾಹನಗಳ ಟಯರ್‌ ಪಂಕ್ಚರ್‌ (Puncture) ಆಗುವಂತೆ ಮಾಡಿ ದುಡ್ಡ ಮಾಡುವ ಮಾಫಿಯಾ (Mafia) ಕಾರ್ಯಪ್ರವೃತ್ತವಾಗಿದೆಯಾ ಎಂಬ ಅನುಮಾನ ಹೆಡೆಯೆತ್ತಿದೆ. ಜಾಲಹಳ್ಳಿಯ ಕುವೆಂಪು ವೃತ್ತದ (Kuvempu Circle) ಕೆಳಸೇತುವೆಯಲ್ಲಿ ಮುಷ್ಟಿಗಟ್ಟಲೆ ಮೊಳೆಗಳು ಒಂದೆಡೆಯೇ ಪತ್ತೆಯಾಗಿದ್ದು, ಸ್ವತಃ ಟ್ರಾಫಿಕ್‌ ಪೊಲೀಸರೇ (Traffic Police) ಇವುಗಳನ್ನು ಸ್ಥಳದಿಂದ ತೆಗೆದು ಕ್ಲೀನ್‌ ಮಾಡುವ ಅಭಿಯಾನ ನಡೆಸಿದ್ದಾರೆ. ಅದೀಗ ವೈರಲ್‌ (Viral Video) ಆಗಿದೆ.

ರಸ್ತೆ ಮಧ್ಯದಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಪಂಕ್ಚರ್ ಮಾಡಿಸಲಾಗುತ್ತಿದೆ ಎಂಬ ವದಂತಿ ಮೊದಲಿನಿಂದಲೂ ಇದೆ. ಇದೀಗ ಸ್ವತಃ ಟ್ರಾಫಿಕ್ ಪೊಲೀಸರಿಂದಲೇ ರಾಶಿಗಟ್ಟಲೆ ಮೊಳೆಗಳ ಸಂಗ್ರಹ ನಡೆದಿದ್ದು, ಅನುಮಾನ ರುಜುವಾತು ಆದಂತಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ಪಂಕ್ಚರ್ ಆಗುತ್ತಿದ್ದು, ಸಮೀಪದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ಸಾಕಷ್ಟು ವ್ಯಾಪಾರವಂತೂ ಆಗುತ್ತಿದೆ.

ನಿನ್ನೆ ಕುವೆಂಪು ವೃತ್ತದ ಅಂಡರ್‌ಪಾಸ್‌ನಲ್ಲಿ ರಾಶಿಗಟ್ಟಲೆ ಲೋಹದ ಮೊಳೆಗಳನ್ನು ಪತ್ತೆಹಚ್ಚಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು ಅವುಗಳನ್ನು ಸ್ವಚ್ಛಗೊಳಿಸಿದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುವೆಂಪು ಸರ್ಕಲ್ ಅಂಡರ್‌ಪಾಸ್‌ನಲ್ಲಿ ರಸ್ತೆಯನ್ನು ಗುಡಿಸುವ ವೀಡಿಯೊವನ್ನು ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅದೀಗ ವೈರಲ್‌ ಆಗಿದೆ.

ರಸ್ತೆ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸರು ಆಕ್ಷನ್‌ಗೆ ಇಳಿದಿದ್ದರು. ವಾಹನಗಳನ್ನು ಪಂಕ್ಚರ್ ಮಾಡುವ ಉದ್ದೇಶದಿಂದಲೇ ಮೊಳೆಗಳನ್ನು ರಸ್ತೆಯಲ್ಲಿ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಮೊಳೆಗಳನ್ನು ಸಂಗ್ರಹಿಸಿ ಜಾಗವನ್ನು ಪ್ರಯಾಣಕ್ಕೆ ಸುರಕ್ಷಿತಗೊಳಿಸಿದ್ದಾರೆ. ಇನ್ನೂ ಇರಬಹುದಾದ ಮೊಳೆಗಳ ಬಗ್ಗೆ ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ.

ವೈರಲ್‌ ವಿಡಿಯೋ ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಮಾಡಿದ ಕೆಲಸವನ್ನು ಶ್ಲಾಘಿಸಿದ್ದಾರೆ. ಜೊತೆಗೆ ತೊಂದರೆ ಸೃಷ್ಟಿಸಲು ಮೊಳೆ ಎಸೆದ ಅಪರಾಧಿಗಳನ್ನು ಖಂಡಿಸಿದ್ದಾರೆ. ಹೆಚ್ಚಿನ ವ್ಯಾಪಾರಕ್ಕಾಗಿ ಹತ್ತಿರದ ಪಂಕ್ಚರ್‌ವಾಲಾಗಳು ಈ ಕೆಲಸ ಮಾಡಿರಬಹುದು ಎಂದು ಕೆಲವು ಸೂಚಿಸಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ನಾನು ಹೋದದ್ದು ಸಂಧಾನಕ್ಕಲ್ಲ: ವಿನೋದ್‌ ರಾಜ್

ಬೆಂಗಳೂರು: ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ವಿನೋದ್‌ ರಾಜ್‌ ಆಗಮಿಸಿದ್ದರು. ಜುಲೈ 26ರಂದು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ರಾಜಿ ಸಂಧಾನಕ್ಕಾಗಿ ಹೋಗಿದ್ದರು ಎಂಬಂತೆ ಬಿಂಬಿತವಾಗಿದೆ ಎಂದು ಇದೀಗ ವಿನೋದ್‌ ರಾಜ್‌ ಬೇಸರ ಹೊರ ಹಾಕಿದ್ದಾರೆ.

ಈ ಬಗ್ಗೆ ವಿನೋದ್‌ ರಾಜ್‌ ವಿಡಿಯೊ ಮೂಲಕ ಮಾತನಾಡಿ ʻʻದರ್ಶನ್ ಅವರನ್ನ ಒಬ್ಬ ಕಲಾವಿದ ಎನ್ನುವ ಕಾರಣಕ್ಕೆ ಭೇಟಿ ಮಾಡಿ ಬಂದೆ. ಮೊನ್ನೆ ನಾನು ದರ್ಶನ್‌ ಅವರನ್ನು ನೋಡೋಕೆ ಹೋಗಿದ್ದೆ. ಬಳಿಕ ರೇಣುಕಾ ಸ್ವಾಮಿ ಮನೆಗೆ ಹೋಗಿ ಬಂದೆ. ವಾಹಿನಿಗಳ ಮೂಲಕ ನನಗೆ ಅರ್ಥವಾಗಿದ್ದು ಏನೆಂದರೆ ರಾಜಿ ಸಂಧಾನಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಅಲ್ಲಿ ಹೋಗಿದ್ದೆ ಎಂದು ಸುದ್ದಿಗಳು ವೈರಲ್‌ ಆಯ್ತು. ಖಂಡತ ಅದು ಅಲ್ವೇ ಅಲ್ಲ. ಕಲಾವಿದರು ಎನ್ನುವ ದೃಷ್ಟಿಯಿಂದ ನಾನು ಹೋಗಿದ್ದೆ. ರೇಣುಕಾ ಸ್ವಾಮಿ ಅವರ ಶ್ರೀಮಿತಿ ಅವರು ಗರ್ಭಿಣಿ. ಹುಟ್ಟುವ ಮಗುಗೆ ಒಳ್ಳಯದ್ದೇನಾದರೂ ಮಾಡಲಿಕ್ಕೆ ಆಗುತ್ತಾ ಎನ್ನುವ ದೃಷ್ಟಿಯಿಂದ ನಾನು ಸಹಾಯ ಮಾಡಿ ಬಂದೆ. ನಮ್ಮಿಂದ ಆದ ಸಣ್ಣ ಕಾಣಿಕೆ ಅದು. ಯಾವುದೇ ರಾಜಿ ಸಂಧಾನ ಅಲ್ಲ. ಆ ತರ ಕೆಲಸ ಕೂಡ ನಾವು ಮಾಡಲ್ಲʼʼಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

Exit mobile version