Site icon Vistara News

Viral Video: ಹಸು, ನಾಯಿ, ಮೇಕೆ ಮೇಲೆ ಕಿಡಿಗೇಡಿಯಿಂದ ಹೇಯಕೃತ್ಯ; ವಿಡಿಯೋ ವೈರಲ್‌-ಸಿಎಂ ಯೋಗಿಗೆ ಪತ್ರ

Viral Video

ಉತ್ತರಪ್ರದೇಶ: ಕೆಲವು ವಿಕೃತ ಕಾಮಿಗಳು ಮೂಕ ಪ್ರಾಣಿಗಳನ್ನೂ ಲೆಕ್ಕಿಸದೇ ತಮ್ಮ ವಿಕೃತಿ ಮೆರೆಯುತ್ತಾರೆ. ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲೂ ಇಂತಹ ಕ್ರೌರ್ಯವೊಂದು ಬೆಳಕಿಗೆ ಬಂದಿದೆ. ಪಾಪಿಯೋರ್ವ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌(Yogi Adityanath) ಅವರಿಗೂ ದೂರು ನೀಡಲಾಗಿದೆ.

ಘಟನೆ ವಿವರ:

ಭೂರಾ ಶೇಖ್ ಎಂಬ ವ್ಯಕ್ತಿ ಹಸುವಿನ ಜತೆಗೆ ಲೈಂಗಿಕ ಕ್ರಿಯೆ ನಡೆಸುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ. ಆರೋಪಿ ಭೂರಾ ಶೇಖ್ ಹಲವು ಹಸುಗಳು, ಹೆಣ್ಣು ನಾಯಿ, ಮೇಕೆಗಳನ್ನೂ ತನ್ನ ಲೈಂಗಿಕ ವಿಕೃತಿಗೆ ಬಳಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಮೊರಾದಾಬಾದ್ ಜಿಲ್ಲೆಯ ದಿಲಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದೆ.

ರಾತ್ರಿ ವೇಳೆ ಕಂಬಕ್ಕೆ ಕಟ್ಟಿರುವ ಹಸುವಿನ ಮೇಲೆ ಲೈಂಗಿಕ ಕ್ರಿಯೆಯನ್ನು ನಡೆಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಹಸು ಪದೇ ಪದೇ ಆತನ ಕೈಯಿಂದ ತಪ್ಪಿಸಿಕೊಳ್ಳಲು ನೋಡುತ್ತದೆ. ಅದರೂ ಆತ ಹಸುವನ್ನು ಬಿಡದೆ ನಿರಂತರ ಲೈಂಗಿಕ ಕ್ರಿಯೆ ನಡೆಸುತ್ತಾನೆ. ಆರೋಪಿಯನ್ನು ಭೂರಾ ಶೇಖ್ ಎಂದು ಗುರುತಿಸಲಾಗಿದ್ದು, ಆತನ ತಂದೆಯ ಹೆಸರು ಯಾಕೂಬ್ ಶೇಖ್ ಎಂದು ಹೇಳಲಾಗಿದೆ. ಮೊರಾದಾಬಾದ್ ಪೊಲೀಸರು ವೈರಲ್ ವಿಡಿಯೋ ಆಧಾರದ ಮೇಲೆ ಹಾಗೂ ವಿಶ್ವ ಹಿಂದೂ ಪರಿಷತ್ ನೀಡಿದ ದೂರಿನ ಆಧಾರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದೀಗ ಆರೋಪಿ ಭೂರಾ ಶೇಖ್‌ನನ್ನು ಅರೆಸ್ಟ್‌ ಮಾಡಲಾಗಿದೆ.

ಸಿಎಂ ಯೋಗಿಗೆ ಪತ್ರ


ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​ ಹಾಗೂ ಪೊಲೀಸರಿಗೆ ಪತ್ರ ಬರೆದಿದ್ದಾರೆ. ವಿಶ್ವ ಹಿಂದೂ ಪರಿಷತ್​​ನ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣ್ ಸಿಂಗ್ ಅವರು ಕಳುಹಿಸಿರುವ ಪತ್ರದಲ್ಲಿ ಹಿಂದೂ ಸಂಘಟನೆಯು ಭೂರಾ ವಿಕೃತಿ ಬಗ್ಗೆ ಹಲವು ದಿನಗಳಿಂದ ಗಮನಿಸುತ್ತಿದ್ದೇವೆ. ಸಾಕು ಮತ್ತು ಬಿಡಾಡಿ ಹಸುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಭೂರಾ ತನ್ನ ಕಾಮತೃಷೆ ತೀರಿಸಿಕೊಳ್ಳಲು ಹೆಣ್ಣು ನಾಯಿ ಮತ್ತು ಮೇಕೆಗಳನ್ನು ಬಳಸಿಕೊಂಡಿದ್ದಾನೆ. ಹಸುಗಳು ಮತ್ತು ನೂರಾರು ಇತರ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಈ ಪತ್ರದಲ್ಲಿ ದೂರಿದ್ದಾರೆ. ಇನ್ನು ಸಿಎಂ ಕಚೇರಿಯಿಂದ ಆದೇಶ ಹೊರ ಬೀಳುವ ಮುನ್ನವೇ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: Viral News: ಮತ್ತೊಂದು ಪೆನ್‌ಡ್ರೈವ್‌ ಪ್ರಕರಣ; ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ ಜೊತೆ ವೈದ್ಯನ ಸರಸ!

Exit mobile version