ಲಖನೌ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಡಕಾಯಿತ(Dacoit)ನೊಬ್ಬ ಜೀವಂತ ಹಾವನ್ನು ಕಚ್ಚಿ ತಿಂದು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶ ಫತೇಪುರದಲ್ಲಿ ನಡೆದಿದೆ. ಈ ವಿಕೃತಿಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಎಲ್ಲೆಡೆವ ವೈರಲ್(Viral Video) ಆಗುತ್ತಿದೆ. ಡಾಕಾಯಿತ ಗಂಗಾ ಪ್ರಸಾದ್ ಇತ್ತೀಚೆಗಷ್ಟೇ ಜೈಲಿನಿಂದಲೇ ಬಿಡುಗಡೆಯಾಗಿದ್ದ ಎನ್ನಲಾಗಿದೆ.
ಡಕಾಯಿತ ಗಂಗಾ ಪ್ರಸಾದ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಭೂಮಿ ಮತ್ತು ನೀರಿನಲ್ಲಿ ಹಾವುಗಳನ್ನು ಹಿಡಿದು ತಿನ್ನಲು ಶುರು ಮಾಡಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ನದಿಯ ಬದಿಯಲ್ಲಿ ಕುಳಿತಿರುವ ಗಂಗಾ ಪ್ರಸಾದ್ ಹಾವನ್ನು ಹಿಡಿಯುತ್ತಾನೆ. ಬಳಿಕ ಹಾವನ್ನು ಕಚ್ಚಿ ಕಚ್ಚಿ ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
A Guy from Fatehpur Eats Snake Alive (Video of dacoit Ganga Prasad Surfaced)
— Ghar Ke Kalesh (@gharkekalesh) July 8, 2024
pic.twitter.com/VFRl2fX3FS
ಯಾರು ಈ ಗಂಗಾ ಪ್ರಸಾದ್?
ಗಂಗಾ ಪ್ರಸಾದ್ ಒಬ್ಬ ದೊಡ್ಡ ಡಕಾಯಿತನಾಗಿದ್ದು, ಈತ ಹಲವು ವರ್ಷಗಳಿಂದ, ಗಂಗಾ ಪ್ರಸಾದ್ ಫತೇಪುರದಲ್ಲಿ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದರೋಡೆ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಹೀಗಾಗಿ ಆತ ಹಲವಾರು ವರ್ಷಗಳಿಂದ ಜೈಲಿನಲ್ಲಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ ಇದೀಗ ಇಂತಹ ಕುಕೃತ್ಯಗಳ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.
ಕೆಲವು ತಿಂಗಳ ಹಿಂದೆ ಕೋಲಾರದ ಮುಳಬಾಗಿಲಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಮದ್ಯದ ಅಂಗಡಿಗೆ ಹೋಗಿ ಮದ್ಯ ಕುಡಿದು ದಾರಿಯಲ್ಲಿ ವಾಪಸು ಆಗುತ್ತಿದ್ದಾಗ ಹಾವನ್ನು ಕಂಡು ಅದನ್ನು ಹಿಡಿದು, ಕುಡಿದ ಮತ್ತಿನಲ್ಲಿ, ಅವನ ಬೈಕಿನಲ್ಲಿ ಕುಳಿತು ಹಾವನ್ನು ಆತನ ಕುತ್ತಿಗೆಗೆ ಹಾರದಂತ್ತೆ ಹಾಕಿಕೊಂಡು ಸಾರ್ವಜನಿಕರಿಗೆ ಪ್ರದರ್ಶನ ಕೊಡುವಂತ್ತೆ ಆ ಹಾವನ್ನು ಕಚ್ಚಿ ಕಚ್ಚಿ ಅದರ ಚರ್ಮವನ್ನು ಸುಲಿದು ತಿನ್ನುವ ಪ್ರಸರ್ಶನ ನೀಡಿದ್ದ. ಆ ದ್ರಶ್ಯವನ್ನು ನೋಡಿದರೆ ಅಸಯ್ಯವಾಗಿ ಮೈ ಜುಮ್ಮೆನ್ನುತಿತ್ತು.
ಈ ರೀತಿ ವಿಕ್ರತವಾಗಿ ಜೀವಂತ ಹಾವನ್ನು ತಿನ್ನುತಿದ್ದಾಗ ಆತನ ಬೈಕ್ ಚಾಲು ಇದ್ದು ನ್ಯೂಟ್ರೋಲ್ ಮಾಡಿ ಇಟ್ಟುಕೊಂಡಿದ್ದ, ಬೈಕ್ ಎಂಜಿನ್ ಬಂದ್ ಬೀಳುವಂತ ಸ್ಥಿತಿಗೆ ಬರುವಾಗ ಬೈಕಿನ ಎಕ್ಷಿಲೇಟರ್ ಜಾಸ್ತಿ ಮಾಡಿ ಬೈಕ್ ಚಾಲು ಸ್ಥಿಯಲ್ಲಿ ಇಡಲು ಪ್ರಯತ್ನಿಸುತಿದ್ದ, ಇದು ನೋಡಿದರೆ, ಆತ ಕುಡಿದ ಅಮಲಿನಲ್ಲಿದ್ದರೂ, ಆತನಿಗೆ ಸಾಮನ್ಯ ಜ್ಞಾನ ಇತ್ತು ಅಂತಲೇ ಹೇಳಬೇಕು.
ಬಳಿಕ ಆ ಆರೋಪಿಯನ್ನು ಅರಣ್ಯ ಇಲಾಖೆಯವರು ವನ್ಯ ಪ್ರಾಣಿ ಕೊಲೆಯ ಆರೋಪವನ್ನು ಹೊರಿಸಿ ಬಂಧಿಸಿತ್ತು. ಆರೋಪಿಯನ್ನು ಹಾಸನ ಜಿಲ್ಲೆಯ ಮುಳಬಾಗಿಲಿನ ಮುಸ್ತುರು ಗ್ರಾಮದ ಕುಮಾರ್ (38) ಎಂದು ಗುರುತಿಸಲಾಗಿದೆ. ಆತನು ಕಚ್ಚಿ ತಿನ್ನುತಿದ್ದ ಹಾವು ಕೆರೆಹಾವು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್